ಕಟೀಲು ಇತಿಹಾಸ ತರಬೇತಿ ಕಾರ್ಯಾಗಾರ

ಕಿನ್ನಿಗೋಳಿ: ಉಪನ್ಯಾಸಕರು ಅಧ್ಯಾಪನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಹಾಗೂ ಜ್ಞಾನದ ಪರಿಯನ್ನು ವಿಸ್ತರಿಸಿಕೊಳ್ಳಲು ಇಂತಹ ತರಬೇತಿ ಕಾರ್ಯಕ್ರಮಗಳಿಂದ ಅನುಕೂಲವಾಗುತ್ತದೆ. ಎಂದು ಇತಿಹಾಸ ತಜ್ಞ ಪುಂಡಿಕಾಯ ಗಣಪಯ್ಯ ಭಟ್ ಹೇಳಿದರು.
ಕರ್ನಾಟಕ ಸರಕಾರ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಜಂಟಿ ಆಶ್ರಯದಲ್ಲಿ ದ.ಕ.ಜಿಲ್ಲೆ ಮತ್ತು ಕೊಡಗು ಜಿಲ್ಲೆಗಳೆರಡರ ಇತಿಹಾಸ ಉಪನ್ಯಾಸಕರ, ೪ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವೇದಮೂರ್ತಿ ವಾಸುದೇವ ಆಸ್ರಣ್ಣ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮ ಸಹಸಂಯೋಜಕ ರೂಪಾಕ್ಷ ಎಮ್. ಹಾಗೂ ದ.ಕ. ಜಿಲ್ಲಾ ಉಪನ್ಯಾಸಕ ಸಂಘದ ಕಾರ್ಯದರ್ಶಿ ಜಾನ್ ಪಾಯಸ್ ಉಪಸ್ಥಿತರಿದ್ದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ್ ಪೂಂಜ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಸದಾಶಿವ ಭಟ್ ಪ್ರಸ್ತಾವನೆಗೈದರು. ವೆಂಕಟರಮಣ ಭಟ್ ವಂದಿಸಿದರು.

Kinnigoli-1612201605

 

Comments

comments

Comments are closed.

Read previous post:
Kinnigoli-1612201604
ಏಳಿಂಜೆ ದೇವಳದಲ್ಲಿ ಚಪ್ಪರ ಮೂಹೂರ್ತ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಮತ್ತು ಶ್ರೀ ಮಹಾಗಣಪತಿ ದೇವಳದಲ್ಲಿ ಜ. 13ರಿಂದ 19 ರತನಕ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಾಭಾವಿಯಾಗಿ ಚಪ್ಪರ ಮುಹೂರ್ತ ಗುರುವಾರ...

Close