ಜನಪರ ಕಾಳಜಿಯ ಸೇವೆ ಮಾಡಬೇಕು

ಕಿನ್ನಿಗೋಳಿ: ಮಾನವೀಯ ಮೌಲ್ಯ ಹಾಗೂ ಜನಪರ ಕಾಳಜಿಯೊಂದಿಗೆ ಸಂಘ ಮತ್ತು ಸೇವಾ ಸಂಸ್ಥೆಗಳು ಸಮಾಜದ ಸೇವೆ ಮಾಡಬೇಕು ಎಂದು ದ.ಕ. ಜಿ. ಪಂ. ಮಾಜಿ ಸದಸ್ಯ ಹಾಗೂ ಕಿನ್ನಿಗೋಳಿ ವೀರಮಾರು ವ್ಯಾಯಾಮ ಶಾಲೆಯ ಅಧ್ಯಕ್ಷ ಈಶ್ವರ್ ಕಟೀಲು ಹೇಳಿದರು. ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸುರತ್ಕಲ್ ಉಪ ಸಮಿತಿಯ ಬೆಳ್ಳಿ ಹಬ್ಬದ ಅಂಗವಾಗಿ ಬುಧವಾರ ಕಿನ್ನಿಗೋಳಿಯ ಸೈಂಟ್ ಮೇರಿಸ್ ಸ್ಪೆಶಲ್ ಸ್ಕೂಲ್ ಮಕ್ಕಳಿಗೆ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ದ. ಕ ಜಿಲ್ಲಾಧ್ಯಕ್ಷ ಉರ್ಬಾನ್ ಪಿಂಟೋ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.
ಸುರತ್ಕಲ್ ಉಪಸಮಿತಿಯ ಬೆಳ್ಳಿಹಬ್ಬದ ಸಮಿತಿ ಅಧ್ಯಕ್ಷ ಕುಶಲ ಮಾತನಾಡಿ ಸಮಿತಿಯ ಆಶ್ರಯದಲ್ಲಿ ಈ ವರ್ಷ ಸೇವಾ ರೂಪದಲ್ಲಿ ಆರ್ಥಿಕವಾಗಿ ಹಿಂದುಳಿದ 150  ಮನೆಗಳಿಗೆ ವಿದ್ಯುತ್ ನೀಡುವ ಯೋಜನೆ ಕೈಗೆತ್ತಿಕೊಂಡಿದ್ದು ಈಗಾಗಲೇ 134 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಸಮಿತಿಯ ಬಾಲಕೃಷ್ಣ ಸರ್ಕಲ್, ಸುರತ್ಕಲ್ ಉಪ ಸಮಿತಿಯ ಅಧ್ಯಕ್ಷ ರೊನಾಲ್ದ್ ಪಿರೇರಾ, ಉಪಾಧ್ಯಕ್ಷ ನಾಗೇಶ್ ಬಂಗೇರ, ಸೈಂಟ್ ಮೇರಿಸ್ ಸ್ಪೆಶಲ್ ಸ್ಕೂಲ್ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ವಲೇರಿಯನ್ ಸಿಕ್ವೇರಾ, ಶಾಲಾ ಮುಖ್ಯ ಶಿಕ್ಷಕಿ ರೇಶ್ಮಾ ಸೆರಾವೊ, ಉದ್ಯಮಿ ನೊರ್ಬಾಟ್ ಗೋಮ್ಸ್, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಗುತ್ತಿಗೆದಾರ ಲೋಕಯ್ಯ ಸಾಲ್ಯಾನ್ ಕೊಂಡೇಲ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಅರುಣ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. Kinnigoli-1612201602

Comments

comments

Comments are closed.

Read previous post:
Kinnigoli-1612201602
ವಿಷ ಜಂತು ಕಡಿದಾಗ ತೀರ್ಥ ಮತ್ತು ಮಣ್ಣೇ ಮದ್ದು

ಶಿಬರೂರು : ಮಂಗಳೂರಿನ ಸುರತ್ಕಲ್ ಸಮೀಪದ ಶಿಬರೂರು ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನವು ಬಹಳ ಪ್ರಸಿದ್ದಿ ಪಡೆದ ದೈವಸ್ಥಾನವಾಗಿದೆ. ತುಳುವಿನಲ್ಲಿ ಒಂದು ಮಾತಿದೆ ಅದು ತಿಗಲೆ ಇತ್ತಿನಾಯಗ್...

Close