ವಿಷ ಜಂತು ಕಡಿದಾಗ ತೀರ್ಥ ಮತ್ತು ಮಣ್ಣೇ ಮದ್ದು

ಶಿಬರೂರು : ಮಂಗಳೂರಿನ ಸುರತ್ಕಲ್ ಸಮೀಪದ ಶಿಬರೂರು ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನವು ಬಹಳ ಪ್ರಸಿದ್ದಿ ಪಡೆದ ದೈವಸ್ಥಾನವಾಗಿದೆ. ತುಳುವಿನಲ್ಲಿ ಒಂದು ಮಾತಿದೆ ಅದು ತಿಗಲೆ ಇತ್ತಿನಾಯಗ್ ತಿಬಾರ್ ಎಂಬುದು ಯಾಕೆಂದರೆ ಶಿಬರೂರು ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ಕ್ಷೇತ್ರಕ್ಕೆ ಬೇಟಿ ಕೊಡುದೆಂದರೆ ಅದೊಂದು ಸಾಹಸ ಎಂಬುದು ಹಿರಿಯರ ಮಾತು, ಅತ್ಯಂತ ಕಾರಣಿಕದ ದೈವಸ್ಥಾನ ಎಂದು ಪ್ರಸಿದ್ದಿಯನ್ನು ಪಡೆದ ಈ ದೈವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬೇಟಿ ನೀಡುತ್ತಾರೆ. ಶಿಬರೂರುಗುತ್ತು ತಿಮತ್ತಿಕರಿಯಾಳ್ ರವರ ಭಕ್ತಿಗೆ ಒಲಿದ ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಗಳು ಕೋಳಿ ಮತ್ತು ಹೋರಿಯಲ್ಲಿ ಶಿಬರೂರಿಗೆ ಬಂದು ನೆಲೆ ನಿಂತಿದೆ ಎಂಬ ಪ್ರತೀತಿ ಇದೆ. ಇಲ್ಲಿನ ತೀರ್ಥ ಬಹಳ ಪ್ರಸಿದ್ದಿಯನ್ನು ಪಡೆದಿದ್ದು ಇಲ್ಲಿನ ವಿಶೇಷತೆ, ಹಿಂದಿನ ಕಾಲದಲ್ಲಿ ಸೂರಿಂಜೆ ಗುತ್ತು ತ್ಯಾಂಪ ಶೆಟ್ಟಿ ಎಂಬುವವರ ಬಳಿ ವಿಷವನ್ನು ಹೀರುವ ಕಲ್ಲು ಇದ್ದು ಅವರು ಎಲ್ಲರಿಗೂ ಉಪಯೋಗವಾಗಲಿ ಎಂಬ ಕಾರಣಕ್ಕೆ ಆ ಕಲ್ಲನ್ನು ಶಿಬರೂರು ದೈವಸ್ಥಾನದ ಎದುರಿನ ಬಾವಿಗೆ ಹಾಕಿದ್ದು, ಮುಂದಕ್ಕೆ ಆ ಬಾವಿಯ ನೀರು ವಿಷವನ್ನು ಹೀರುವ ಗುಣವನ್ನು ಪಡೆದಿದೆ, ಹಿಂದಿನ ಕಾಲದಲ್ಲಿ ವಿಷ ಜಂತುಗಳು ಕಚ್ಚಿದಲ್ಲಿ ಕ್ಷೇತ್ರದ ಮಣ್ಣು ಮತ್ತು ಇಲ್ಲಿನ ತೀರ್ಥ ಕುಡಿದರೆ, ವಿಷ ಕಡಿಮೆ ಆಗಿ ಸಮಸ್ಯೆ ಪರಿಹಾರವಾಗುತ್ತಿತ್ತು ಎಂಬ ನಂಬಿಕೆ ಇದ್ದು, ಅದಕ್ಕಾಗಿ ಇಂದಿಗೂ ಇಲ್ಲಿನ ತೀರ್ಥ ಮತ್ತು ಮಣ್ಣು ಭಕ್ತರು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳುತ್ತಾರೆ, ಇಲ್ಲಿನ ಈ ತೀರ್ಥ ಬಾವಿಗೆ ಕೊಡಪಾನ ಅಥವಾ ಪಂಪು ಮೂಲಕ ನೀರನ್ನು ಎತ್ತುವಂತಿಲ್ಲ ಅದರ ಬದಲು ಏತದ ಮೂಲಕವೇ ನೀರನ್ನು ಎತ್ತುದು ಇಲ್ಲಿನ ವಿಶೇಷ. ಕಟೀಳು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೂ ಸಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೂ ಅವಿನಾಭಾವ ಸಂಬಂಧ ಇದ್ದು ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂದರ್ಭ ದೈವ ಕಟೀಲಿಗೆ ಬೇಟಿ ನೀಡುವ ಸಂಪ್ರದಾಯ ಇದೆ.

Kinnigoli-1612201601 Kinnigoli-1612201602 Kinnigoli-1612201603 Kinnigoli-1612201604 Kinnigoli-1612201605 Kinnigoli-1612201606

Comments

comments

Comments are closed.

Read previous post:
Kinnigoli-1412201606
ಶ್ರೀನಿಧಿ ಶೆಟ್ಟಿ ನಾಡವರ ಮಾತೃ ಸಂಘದಿಂದ ಸನ್ಮಾನ

ಕಿನ್ನಿಗೋಳಿ: ಪೊಲೇಂಡ್‌ನಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಥರ್ಧೆಯಲ್ಲಿ 2016 ರ ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿಗೆದ್ದು ಕೊಂಡ ಶ್ರೀನಿಧಿ ರಮೇಶ್ ಶೆಟ್ಟಿ ಅವರನ್ನು ಕಿನ್ನಿಗೋಳಿ ರಾಜಾಂಗಣದಲ್ಲಿ ಮಂಗಳವಾರ...

Close