ಬಳಕುಂಜೆ ಹಳೆ ವಿದ್ಯಾರ್ಥಿಗಳ ದಿನಾಚರಣೆ

ಕಿನ್ನಿಗೋಳಿ: ಕನ್ನಡ ಶಾಲೆ ಮಾತೃ ಭಾಷೆ ಕನ್ನಡದ ಬಗ್ಗೆ ತಾತ್ಸರ ಸಲ್ಲದು. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ಉನ್ನತ ಸ್ಥಾನ ಗಳಿಸಿಕೊಂಡಿದ್ದಾರೆ. ಇಂತಹ ಗ್ರಾಮೀಣ ಭಾಗದ ಶಿಕ್ಷಣ ಸಂಸ್ಥೆ ಶತಮಾನ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಕಥೊಲಿಕ್ ಶಿಕ್ಷಣ ಮಂಡಳಿಯ ವಿಕಾರ್ ಜನರಲ್ ವಂ. ಫಾ. ಡೆನಿಸ್ ಮೊರಾಸ್ ಪ್ರಭು ಹೇಳಿದರು.
ಕಿನ್ನಿಗೋಳಿ ಸಮೀಪದ ಬಳಕುಂಜೆ ಅನುದಾನಿತ ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವದ ಪ್ರಯುಕ್ತ ಶನಿವಾರ ನಡೆದ ಹಳೆ ವಿದ್ಯಾರ್ಥಿಗಳ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಫಾ. ಜೆರಾಲ್ಡ್ ಡಿಸೋಜ, ಶಾಲಾ ಹಳೆವಿದ್ಯಾರ್ಥಿ ಫಾ. ಡೆನಿಸ್ ಮಿನೇಜಸ್, ಉದ್ಯಮಿ ದಯಾ ಶಂಕರ ಶೆಟ್ಟಿ, ಮುಂಬಯಿ ಶತಮನೋತ್ಸವ ಸಮಿತಿ ಕಾರ್ಯದರ್ಶಿ ಕರುಣಾಕರ ಶೆಟ್ಟಿ , ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ರಶ್ಮಿ ಆಚಾರ್ಯ, ನಿವೃತ್ತ ಮುಖ್ಯ ಶಿಕ್ಷಕ ಆಂಡ್ರ್ಯೂ ಡಿಸೋಜ, ಹಳೆವಿದ್ಯಾರ್ಥಿ ಮತ್ತು ಪೊಂಪೈ ಕಾಲೇಜು ಉಪನ್ಯಾಸಕ ಲಾರೆನ್ಸ್ ಸಿಕ್ವೇರಾ, ಫೆಲಿಕ್ಸ್ ಪಿಂಟೋ, ಸಮಿತಿ ಗೌರವಾಧ್ಯಕ್ಷ ವಿರಾರ್ ಶಂಕರ ಶೆಟ್ಟಿ, ಶಾಲಾ ಸಂಚಾಲಕ ಫಾ. ಮೈಕಲ್ ಪಿಂಟೋ, ಮುಖ್ಯ ಶಿಕ್ಷಕಿ ಭಗಿನಿ ಲೊಲಿಟ ಬಿ. ಎಸ್ ಉಪಸ್ಥಿತರಿದ್ದರು.
ಈ ಸಂದರ್ಭ ಶಾಲಾ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಹಿರಿಯ ಮುಖ್ಯ ಶಿಕ್ಷಕರನ್ನು ಗೌರವಿಸಲಾಯಿತು. ಆಟೋಟದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ದಿನಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-1912201604

Comments

comments

Comments are closed.