ಬಸ್ಸು ಚಾಲಕ-ನಿರ್ವಾಹಕ ಸಂಘ ವಾರ್ಷಿಕೋತ್ಸವ

ಕಿನ್ನಿಗೋಳಿ: ಬಸ್ಸು ಚಾಲಕರು ನಿರ್ವಾಹಕರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವೃತ್ತಿ ಬಗ್ಗೆ ಕೀಳರಮೆಯನ್ನು ಬಿಟ್ಟು ದುಶ್ಚಟಗಳಿಂದ ದೂರವಿದ್ದು ಉಳಿತಾಯ ಮನೋಭಾವ ಮೂಲಕ ತಮ್ಮ ಕುಟುಂಬದ ಅಭಿವೃದ್ಧಿಗೆ ಸಹಕರಿಸಬೇಕು. ಎಂದು ಮಂಗಳೂರು ಉತ್ತರ ವಲಯದ ಸಂಚಾರಿವೃತ ನೀರಿಕ್ಷಕ ಮಂಜುನಾಥ ಎಸ್ ಹೇಳಿದರು.
ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿ ಶನಿವಾರ ನಡೆದ ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘದ 3ನೇ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಸದಸ್ಯರಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು. .ಈ ಸಂದರ್ಭ ಶಿಕ್ಷಣ ಪ್ರೇಮಿ ಹರೇಕಳ ಹಾಜಬ್ಬ, ಸಂಘದ ಹಿರಿಯ ಚಾಲಕ-ನಿರ್ವಾಹಕರಾದ ಶಿವರಾಮ ಎಚ್ ಕುಲಾಲ್, ಹರೀಶ್ ಜೋಗಿ, ರಘುರಾಮ ಕೆ ಸಾಲ್ಯಾನ್, ರಾಘವೇಂದ್ರ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಸಾಧಕ ಶೋದನ್, ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ಬಸ್ಸು ಮಾಲಕರಸಂಘದ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಗೌರವಿಸಲಾಯಿತು. ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು. ಕಿನ್ನಿಗೋಳಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಕೆ ಭುವನಾಭಿರಾಮ ಉಡುಪ, ಉಪಾಧ್ಯಕ್ಷ ಗುಲಾಮ್ ಹುಸೇನ್, ಕಾರ್ಯದರ್ಶಿ ಕೆವಿನ್ ಕ್ಯಾಸ್ತೆಲಿನೋ, ಜೊತೆ ಕಾರ್ಯದರ್ಶಿ ಹರೀಶ್ ಕುಮಾರ್, ಮಾಜಿ ಉಪಾಧ್ಯಕ್ಷ ಹರೀಶ್ ಪಕ್ಷಿಕೆರೆ, ರಮೇಶ್ ಪಕ್ಷಿಕೆರೆ,ಕೋಶಾಕಾರಿ ದಾಮೋದರ ಸಾಲ್ಯಾನ್ ಮತ್ತಿತರಿದ್ದರು ಉಪಸ್ಥಿತರಿದ್ದರು.
ಕಿನ್ನಿಗೋಳಿ ಬಸ್ಸು ಚಾಲಕ-ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ ಪೂಜಾರಿ ಉಲ್ಲಂಜೆ ಸ್ವಾಗತಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-1912201605

Comments

comments

Comments are closed.

Read previous post:
Kinnigoli-1912201604
ಬಳಕುಂಜೆ ಹಳೆ ವಿದ್ಯಾರ್ಥಿಗಳ ದಿನಾಚರಣೆ

ಕಿನ್ನಿಗೋಳಿ: ಕನ್ನಡ ಶಾಲೆ ಮಾತೃ ಭಾಷೆ ಕನ್ನಡದ ಬಗ್ಗೆ ತಾತ್ಸರ ಸಲ್ಲದು. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ದೇಶ ವಿದೇಶದಲ್ಲಿ ಉನ್ನತ ಸ್ಥಾನ ಗಳಿಸಿಕೊಂಡಿದ್ದಾರೆ....

Close