ಮೌಲ್ಯಧಾರಿತ ಶಿಕ್ಷಣ – ಸದೃಡ ಸಮಾಜ ನಿರ್ಮಾಣ

ಕಿನ್ನಿಗೋಳಿ: ಸರಕಾರಿ ಶಾಲೆಗಳು ಶಿಸ್ತು ಬದ್ಧ ಸಂಸ್ಕಾರಯುತ ಮೌಲ್ಯಧಾರಿತ ಶಿಕ್ಷಣ ನೀಡುತ್ತಿವೆ ಇದರಿಂದ ಸದೃಡ ಸಮಾಜ ನಿರ್ಮಾಣವಾಗುತ್ತದೆ. ಎಂದು ಯುಗಪುರುಷ ಪ್ರಧಾನ ಸಂಪಾಧಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಅವರು ಶನಿವಾರ ಪದ್ಮನೂರು ದ. ಕ. ಜಿ. ಪಂ. ಹಿ. ಪ್ರಾ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ ಸದಸ್ಯ ವಿನೋದ್ ಬೊಳ್ಳೂರು ಬಹುಮಾನ ವಿತರಿಸಿದರು.
ಕಟೀಲು ಶಾಲೆಯ ದೇವಿಪ್ರಸಾದ್ ಬೆಳ್ಳಿಬೆಟ್ಟು ಪ್ರಧನ ಭಾಷಣಗೈದರು.
ಈ ಸಂದರ್ಭ ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರಾದ ದೇವಪ್ರಸಾದ್ ಪುನರೂರು, ಸುಲೋಚನಿ ಶೆಟ್ಟಿಗಾರ್ತಿ, ಹೇಮಲತಾ, ಕಿನ್ನಿಗೋಳಿ ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಶಾಲಾ ಸಮಿತಿಯ ವಿಶ್ವನಾಥ ಶೆಟ್ಟಿ , ಸಂಜೀವ ಶ್ರೀಯಾನ್, ವಿದ್ಯಾರ್ಥಿ ನಾಯಕಿ ಧನ್ಯ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಪೂಜಾರಿ ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಗಿರಿಜ ಬಿ ವರದಿ ವಾಚಿಸಿದರು.

Kinnigoli-1912201603

Comments

comments

Comments are closed.

Read previous post:
Kinnigoli-1912201602
ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ

ಕಿನ್ನಿಗೋಳಿ:  ಸರಕಾರ ಕನ್ನಡ ಶಾಲೆಗಳ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ತಂದಿದ್ದು ಜನರು ಇದರ ಸದುಪಯೋಗಪಡಿಸಬೇಕು. ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಹೆತ್ತವರು ಅಭಿಮಾನದಿಂದ ಮಕ್ಕಳನ್ನು ಶಾಲೆಗಳಿಗೆ...

Close