ನಿಡ್ಡೋಡಿ ಗ್ರಾಮೋತ್ಸವ

ಕಿನ್ನಿಗೋಳಿ: ಹಳ್ಳಿಗಳಲ್ಲಿ ಹಣಕ್ಕಿಂತ ಮಿಗಿಲಾದ ಭಾವನಾತ್ಮಕ ಸಂಬಂಧಗಳಿವೆ. ಹಳ್ಳಿಯಲ್ಲಿ ಹಣವಿಲ್ಲದಿದ್ದರೂ ಬದುಕು ನಡೆಸಬಹುದು. ಈಗ ಹಳ್ಳಿಗಳಲ್ಲೂ ರೈತನೊಂದಿಗಿನ ಸಂಬಂಧ ದೂರವಾಗುತ್ತಿದೆ ಎಂದು ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕಟೀಲು ಸಮೀಪದ ನಿಡ್ಡೋಡಿ ಜ್ಞಾನರತ್ನ ಎಜ್ಯುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಆಶ್ರಯದಲ್ಲಿ ನಡೆದ ಗ್ರಾಮೋತ್ಸವದಲ್ಲಿ ಗ್ರಾಮೋತ್ಸವದ ಪರಿಕಲ್ಪನೆ ಕುರಿತು ಮಾತನಾಡಿದರು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಹಳ್ಳಿಯ ಶ್ರೇಷ್ಟ, ಸಂಸ್ಕಾರಯುತ ಬದುಕಿನೊಂದಿಗೆ ಸಮೃದ್ಧ ದೇಶ ಕಟ್ಟುವ ಕಾಯಕ ನಡೆಯಬೇಕು. ನಮ್ಮಲ್ಲಿ ಕಲಿತ ವಿದ್ಯಾವಂತರು ನಮ್ಮಲ್ಲೇ ಸಾಧನೆ ಮಾಡಬೇಕು ಎಂದರು.
ಕಟೀಲು ದೇವಳದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಕೇವಲ ವಿದೇಶೀ ಇತಿಹಾಸದ ಜೊತೆಗೆ ನಮ್ಮ ದೇಶದ ಇತಿಹಾಸ ಹಾಗು ನಮ್ಮ ಊರಿನ ಆಸುಪಾಸಿನ ಗ್ರಾಮಗಳ ಇತಿಹಾಸವನ್ನೂ ಅರಿತುಕೊಳ್ಳಬೇಕು ಎಂದರು.
ಸಸಿಹಿತ್ಲು ಶ್ರೀನಿವಾಸ ಯಾನೆ ಅಪ್ಪು ಗುರಿಕಾರ, ಬೆಂಗಳೂರು ಆಕಾಶ್ ಸಮೂಹ ಸಂಸ್ಥೆಗಳ ರವೀಂದ್ರ ನಾಯಕ್, ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ನಿಡ್ಡೋಡಿ ಎಜುಕೇಶನ್ ಸಂಸ್ಥೆಯ ಭಾಸ್ಕರ ದೇವಸ್ಯ, ಕಾರ್ಯದರ್ಶಿ ಸಂಗೀತಾ ಭಾಸ್ಕರ ದೇವಸ್ಯ, ನಟಿ ವಾಣಿ ಶೆಟ್ಟಿ, ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ನಿತಿನ್, ಕಲ್ಲಮುಂಡ್ಕೂರು ಪಂಚಾಯಿತಿ ಉಪಾಧ್ಯಕ್ಷ ಸುಂದರ ಮತ್ತಿತರರು ಉಪಸ್ಥಿತರಿದ್ದರು.

Kinnigoli-1912201606

Comments

comments

Comments are closed.

Read previous post:
Kinnigoli-1912201605
ಬಸ್ಸು ಚಾಲಕ-ನಿರ್ವಾಹಕ ಸಂಘ ವಾರ್ಷಿಕೋತ್ಸವ

ಕಿನ್ನಿಗೋಳಿ: ಬಸ್ಸು ಚಾಲಕರು ನಿರ್ವಾಹಕರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ವೃತ್ತಿ ಬಗ್ಗೆ ಕೀಳರಮೆಯನ್ನು ಬಿಟ್ಟು ದುಶ್ಚಟಗಳಿಂದ ದೂರವಿದ್ದು ಉಳಿತಾಯ ಮನೋಭಾವ ಮೂಲಕ ತಮ್ಮ ಕುಟುಂಬದ ಅಭಿವೃದ್ಧಿಗೆ ಸಹಕರಿಸಬೇಕು....

Close