ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ

ಕಿನ್ನಿಗೋಳಿ:  ಸರಕಾರ ಕನ್ನಡ ಶಾಲೆಗಳ ಉತ್ತೇಜನಕ್ಕೆ ಹಲವಾರು ಯೋಜನೆಗಳನ್ನು ತಂದಿದ್ದು ಜನರು ಇದರ ಸದುಪಯೋಗಪಡಿಸಬೇಕು. ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಹೆತ್ತವರು ಅಭಿಮಾನದಿಂದ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಬೇಕು. ಎಮದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್ ಹೇಳಿದರು.
ಉಲ್ಲಂಜೆ ದ.ಕ. ಜಿ.ಪಂ. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.
ದ.ಕ.ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾ.ಪಂ. ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ದೇವಳ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಯುಗಪುರುಷದ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮಾಜಿ ಜಿ.ಪಂ. ಸದಸ್ಯ ಈಶ್ವರ ಕಟೀಲ್, ಅರಸು ಕುಂಜರಾಯ ದೈವಸ್ಥಾನ ಸಮಿತಿ ಅಧ್ಯಕ್ಷ ದೇವೀಪ್ರಸಾದ ಶೆಟ್ಟಿ, ಕಿನ್ನಿಗೋಳಿ ಇನ್ನರ್‌ವೀಲ್ ಅಧ್ಯಕ್ಷೆ ವಿಮಲಾ ತ್ಯಾಗರಾಜ್, ಕಿನ್ನಿಗೋಳಿ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಉಲ್ಲಂಜೆ ಯುವಶಕ್ತಿ ಅಧ್ಯಕ್ಷ ರಾಜೇಶ್ ಕುಲಾಲ್, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಅಶೋಕ್ ಎಸ್, ಕೊಡೆತ್ತೂರು ಆದರ್ಶ ಬಳಗ ಅಧ್ಯಕ್ಷ ದಾಮೋದರ ಶೆಟ್ಟಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೇಖರ ಶೆಟ್ಟಿ, ಮೆನ್ನಬೆಟ್ಟು ಪಂಚಾಯಿತಿ ಸದಸ್ಯರಾದ ಲಕ್ಷ್ಮೀ, ಮಲ್ಲಿಕಾ, ಮೋರ್ಗನ್ ವಿಲಿಯಂ, ಗಾಯತ್ರೀ ಎಸ್. ಉಡುಪ, ಹರೀಶ್ಚಂದ್ರ ಶೆಟ್ಟಿ, ದಯಾನಂದ ಶೆಟ್ಟಿ, ವಿದ್ಯಾರ್ಥಿ ನಾಯಕ ಚೇತನ್ ಮತ್ತಿತರರಿದ್ದರು.
ಮುಖ್ಯ ಶಿಕ್ಷಕಿ ಮಂಗಳಾ ಎಸ್. ಭಟ್ ಸ್ವಾಗತಿಸಿ ಶಿಕ್ಷಕಿ ಜೆಸಿಂತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-1912201602

Comments

comments

Comments are closed.

Read previous post:
Mulki-1912201601
ಪ್ರತಿಷ್ಠಾ ಪೂರ್ಣಿಮೆ ಉತ್ಸವ

ಮೂಲ್ಕಿ: ಸ್ವಾರ್ಥರಹಿತ ಚಿಂತನೆಗಳು ಜೀವನದಲ್ಲಿ ಆನಂದವನ್ನು ಶಾಂತಿ ಸೌಭಾಗ್ಯವನ್ನು ನೀಡುತ್ತದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಮೂಲ್ಕಿ ಶ್ರೀ...

Close