ಪ್ರತಿಷ್ಠಾ ಪೂರ್ಣಿಮೆ ಉತ್ಸವ

ಮೂಲ್ಕಿ: ಸ್ವಾರ್ಥರಹಿತ ಚಿಂತನೆಗಳು ಜೀವನದಲ್ಲಿ ಆನಂದವನ್ನು ಶಾಂತಿ ಸೌಭಾಗ್ಯವನ್ನು ನೀಡುತ್ತದೆ ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಪ್ರತಿಷ್ಠಾ ಪೂರ್ಣಿಮೆಯ ಪೂವಭಾವಿ ಉತ್ಸವದಲ್ಲಿ ಪಾಲ್ಗೋಂಡು ಆಶೀರ್ವಚನ ನೀಡಿದರು.
ವಿಶ್ವ ವ್ಯಾಪಿಯಾದ ಭಗವಂತನನ್ನು ನಿರ್ಮಲ ಮನಸ್ಸಿನಿಂದ ಧ್ಯಾನಿಸಿದರೆ ಸಕಲ ಸೌಭಾಗ್ಯಗಳು ಲಭಿಸುವುದು ಆದರೆ ನಿರ್ಮಲ ಮನಸ್ಸು ಉಂಟಾಗಲು ನಮ್ಮ ಚಿಂತನೆಗಳು ಹಾಗೂ ಭಕ್ತಿ ಸ್ವಾರ್ಥ ರಹಿತವಾಗಿರಬೇಕು. ನಮ್ಮ ವ್ಯವಹಾರ ಸಾಂಸಾರಿಕ ಜೀವನ ಧರ್ಮಗಳು ಪರಸ್ಪರ ಸಹಕಾರಿಯಾಗಿ ಸ್ವಾರ್ಥ ರಹಿತವಾಗಿದ್ದರೆ ಮಾತ್ರ ಭಗವಂತನ ಕೃಪೆ ಸಾಧ್ಯ ಸೇವಾ ಮನೋಭಾವನೆಯಿಂದ ಮಾಡುವ ಎಲ್ಲಾ ಕೆಲಸಕಾರ್ಯಗಳು ಸತ್ಫಲ ನೀಡುತ್ತವೆ ಎಂದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಅರ್ಚಕರು ಹಾಗೂ ಭಜಕ ವೃಂದದ ಪರವಾಗಿ ಶ್ರೀಗಳಿಗೆ ವಿಶೇಷ ಪಾದಪೂಜೆ ನೆರವೇರಿಸಿ ಗೌರವಿಸಲಾಯಿತು.
ಕ್ಷೇತ್ರದ ಅರ್ಚಕ ಪದ್ಮನಾಭ ಭಟ್ ಶ್ರೀಗಳನ್ನು ಸ್ವಾಗತಿಸಿ ಅಭಿವಂದನೆ ಸಲ್ಲಿಸಿದರು. ಈ ಸಂದರ್ಭ ಕ್ಷೇತ್ರದ ದೇವದರ್ಶನಪಾತ್ರಿ ವಸಂತ ನಾಯಕ್ ಫಲಿಮಾರ್ಕರ್, ಕ್ಷೇತ್ರದ ಆಡಳಿತ ಮಂಡಳಿ, ಟ್ರಸ್ಟಿಗಳು, ಅರ್ಚಕ ವೃಂದ ಹಾಗೂ ಭಜಕವೃಂದ ಹಾಜರಿದ್ದರು.

Mulki-1912201601

Comments

comments

Comments are closed.

Read previous post:
Kinnigoli-1912201601
ಕಿನ್ನಿಗೋಳಿ ಮಕ್ಕಳ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಮಕ್ಕಳ ಗ್ರಾಮ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪೊಂಪೈ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ತಾಳಿಪಾಡಿ ವಿದ್ಯಾರ್ಥಿ ಯಶವಂತ ಕಾರ್ಯಕ್ರಮ ಉದ್ಘಾಟಿಸಿದರು....

Close