ಮಹಿಳಾ ಮೀನು ಮಾರಾಟಗಾರರ ಪ್ರತಿಭಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಕ್ಕೊಳಪಟ್ಟ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಮಹಿಳೆಯರಿಗೆಂದು ನಿರ್ಮಾಣವಾದ ಹಸಿ ಮೀನು ಮಾರುಕಟ್ಟೆಯಲ್ಲಿ ಪುರುಷ ಮೀನು ಮಾರಾಟಗಾರರಿಂದ ಕಿರುಕುಳ ದೌರ್ಜನ್ಯ, ಮಾರುಕಟ್ಟೆಯ ದುರಾವಸ್ಥೆ ಹಾಗೂ ಈ ಬಗ್ಗೆ ಸುಮಾರು 30 ಸಲ ಮೌಖಿಕ ಹಾಗೂ ಲಿಖಿತವಾಗಿ ಪುರುಷ ಮೀನುಗಾರರನ್ನು ತೆರವುಗೊಳಿಸಬೇಕೆಂದು ಮನವಿ ದೂರು ನೀಡಿದ್ದರೂ ಸೂಕ್ತವಾಗಿ ಸ್ಪಂದಿಸದ ಆರೋಪದಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವಿರುದ್ಧ ಪಂಚಾಯಿತಿ ದ್ವಾರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಮಂಗಳೂರು ತಾಲೂಕು ವ್ಯಾಪ್ತಿಯ ಕಿನ್ನಿಗೋಳಿ, ಸುರತ್ಕಲ್, ಹಳೆಯಂಗಡಿ, ಮೂಲ್ಕಿ ಹಾಗೂ ಮಂಗಳೂರು ನಗರದ ಹಸಿ ಮೀನು ಮಾರುಕಟ್ಟೆಯ 500 ಕ್ಕೂ ಮಿಕ್ಕಿ ಮಹಿಳಾ ಮೀನು ಮಾರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮಂಗಳೂರು ತಾಲೂಕು ಮಹಿಳಾ ಹಸಿ ಮೀನು ಮಾರಾಟಗಾರರ ಅಧ್ಯಕ್ಷೆ ಅಹಲ್ಯಾ, ಉಪಾಧ್ಯಕ್ಷೆ ಬೇಬಿ ಅಮೀನ್, ಕಿನ್ನಿಗೋಳಿ ಸಂಘದ ಅಧ್ಯಕ್ಷೆ ಗೀತಾ, ಪ್ರತಿಭಟನೆಯಲ್ಲಿ ಸಲಹೆಗಾರ ಸುನಿಲ್ ಸಾಲ್ಯಾನ್, ಈಶ್ವರ್ ಕಟೀಲ್, ಸತ್ಯಜಿತ್ ಸುರತ್ಕಲ್, ವಿನೋದ್ ಸಾಲ್ಯಾನ್ ಪಡುಪಣಂಬೂರು, ಭುವನಾಭಿರಾಮ ಉಡುಪ, ಅಭಿಲಾಷ್ ಶೆಟ್ಟಿ , ಗಣೇಶ್ ಹೊಸಬೆಟ್ಟು ಮತ್ತಿತರರು ಉಪಸ್ಥಿತರಿದ್ದರು. ಕಿನ್ನಿಗೋಳಿ ಮೀನು ಮಾರುಕಟ್ಟೆಯಲ್ಲಿ ಮೀನು ವ್ಯಾಪಾರ ಪೂರ್ಣ ಬಂದ್ ಮಾಡಿ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಮತ್ತು ಎನ್.ಎಫ್.ಡಿ.ಬಿ. ಹೈದರಾಬಾದ್ ವತಿಯಿಂದ ಯೋಜನೆ ರೂಪುಗೊಂಡು 2013 ಜನವರಿ 4 ರಂದು ಮಾಜಿ ಮುಖ್ಯ ಮಂತ್ರಿ ಸದಾನಂದ ಗೌಡರಿಂದ ಶಿಲಾನ್ಯಾಸವಾಗಿ 76.66 ಲಕ್ಷ ರೂ ವೆಚ್ಚದ ಕಿನ್ನಿಗೋಳಿ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆ 2014 ಸೆಪ್ಟೆಂಬರ್ ತಿಂಗಳ ೨೯ರಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತ್ತು.
ಎರಡು ವಾರದ ನಂತರ ಮಾರಾಟಗಾರರ ಜಾಗದ ತಕರಾರು ಸಮಸ್ಯೆ ಬಂದ ಹಿನ್ನಲೆಯಲ್ಲಿ ಬುಧವಾರ ಅಕ್ಟೋಬರ್ ೧೫ ರಂದು ಮೀನು ಮಾರಾಟ ಸ್ಥಗಿತಗೊಳಿಸಿ ಮೀನು ಮಾರುಕಟ್ಟೆಯನ್ನು ಮುಚ್ಚಿ ಮೀನು ಮಾರಾಟಗಾರರು ಸ್ವಯಂ ಪ್ರೇರಿತ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಉದ್ಘಾಟನೆಗೊಳ್ಳುವ ಮೊದಲು ಕಿನ್ನಿಗೋಳಿ ಮಾರುಕಟ್ಟೆಯ ಒಂದು ಭಾಗದಲ್ಲಿ ಎರಡು ಬದಿಗಳಲ್ಲಿ 30 ಕ್ಕೂ ಮಿಕ್ಕಿ ಮಹಿಳೆಯರು ಕ್ರಮ ಬದ್ದವಾಗಿ ಮೀನು ಮಾರಾಟ ಮಾಡುತ್ತಿದ್ದರು ಉದ್ಘಾಟನೆಗೊಂಡ ನಂತರ ನೂತನ ಹೈಟೆಕ್ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಆರಂಭದ ಬಳಿಕ ತಕರಾರು ಶುರುವಾಗಿತ್ತು. ಪ್ರಾರಂಭದಿಂದಲೂ ಕೆಲವು ಮೀನು ಮಾರಾಟಗಾರರಿಗೆ ಜಾಗದ ಕೊರೆತ ಸಮಸ್ಯೆ ಹಾಗೂ ಮಾರಾಟದ ಸಮಸ್ಯೆ ಬಂದು 15 ದಿನಗಳ ಬಳಿಕ ಸಮಸ್ಯೆ ಹೆಚ್ಚಾಗತೊಡಗಿತು. ಪರಸ್ಪರರಲ್ಲಿ ಅಸಮಧಾನ ಸ್ಪೋಟಗೊಂಡಿತ್ತು. ಕಟ್ಟಡದ ಬಾಗಿಲಿನ ಬಳಿಗಳಲ್ಲಿನ ಮೀನು ಮಾರಾಟಗಾರರಿಗೆ ಹೆಚ್ಚು ಮೀನು ಮಾರಾಟ ವ್ಯಾಪಾರವಾದರೆ ಉಳಿದವರಿಗೆ ವ್ಯಾಪಾರ ಬಹುತೇಕ ಕುಂಠಿತವಾಗಿತ್ತು. ಕೆಲವರು ಬೆಳಿಗ್ಗೆನಿಂದಲೇ ತುಂಬಾ ಬಾಕ್ಸ್ ಮೀನು ಮಾರಾಟ ಉತ್ತಮ ವ್ಯಾಪಾರ ನಡೆಸಿದ್ದರಿಂದ ಮಧ್ಯಾಹ್ನದ ಬಳಿಕ ಬರುವ ವ್ಯಾಪಾರ ಮಾಡುವರಿಗೆ ಹಾಗೂ ಸಣ್ಣ ಪ್ರಮಾಣದ ಮೀನು ಮಾರಾಟಗಾರರಿಗೆ ತೊಂದರೆಯಾಗಿ ಮಾರುಕಟ್ಟೆ ಮುಚ್ಚಿ ಪ್ರತಿಭಟನೆ ಮಾಡಲಾಗಿತ್ತು.
ಆಗಲೇ ಮೀನು ಮಾರಾಟಗಾರರು ಒಟ್ಟಿಗೆ ತಮ್ಮತಮ್ಮಲ್ಲಿಯೇ ಸಮಾಲೋಚಿಸಿ ಅಲ್ಲದೆ ಕಿನ್ನಿಗೋಳಿ ಪಂಚಾಯಿತಿ ಆಡಳಿತ ಕೂಡ ಪಾರದರ್ಶಕ ತೀರ್ಮಾನಕೈಗೊಂಡು ನಿರ್ದೇಶನ ನೀಡಿದ್ದರೆ ಹಲವು ಸಮಸ್ಯೆಗಳು ಆಗಲೇ ಪರಿಹಾರವಾಗುತ್ತಿತ್ತು.
2016 ಅಕ್ಟೋಬರ್ 25 ರಂದು ಮಹಿಳಾ ಮೀನು ಮಾರಾಟಗಾರರ ಸುರಕ್ಷತೆ ಮತ್ತು ಗ್ರಾಹಕರ ಹಿತಾಸಕ್ತಿ ದೃಷ್ಟಿಯಿಂದ ಅಲ್ಲದೆ ಮಾರುಕಟ್ಟೆ ಪ್ರಾಂಗಣ ಪರಿಸರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಬಗ್ಗೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾರುಕಟ್ಟೆ ಆವರಣದಲ್ಲಿ 25,000 ರೂ ವೆಚ್ಚದಲ್ಲಿ ಸಿ.ಸಿ. ಕ್ಯಾಮರ ಶಾಸಕ ಕೆ. ಅಭಯಚಂದ್ರ ಜೈನ್ ಉಪಸ್ಥಿತಿಯಲ್ಲಿ ಸ್ಥಾಪಿತವಾಗಿತ್ತು.

ಕರಾವಳಿಯಾದ್ಯಂತ ಪುರುಷರಿಗೆ ಸರಿಸಾಟಿಯಾಗಿ ಮಹಿಳಾ ಮೀನು ಮಾರಾಟಗಾರರು ವೃತ್ತಿನಿರತರಿರಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಮತ್ತು ಎನ್.ಎಫ್.ಡಿ.ಬಿ. ಹೈದರಾಬಾದ್ ವತಿಯಿಂದ ನಿರ್ಮಾಣಗೊಂಡ ಕಿನ್ನಿಗೋಳಿಯ ಸುಸಜ್ಜಿತ ಮಹಿಳಾ ಮೀನು ಮಾರುಕಟ್ಟೆ ಈದೀಗ ಗೊಂದಲದ ಗೂಡಾಗಿದೆ. ಮಹಿಳೆಯರು ಮತ್ತು ಪುರುಷ ಮೀನು ಮಾರಾಟಗಾರರ ವ್ಯಾಪಾರಕ್ಕೆ ಸ್ಪಷ್ಟ ನಿಯಮ ರೂಪಿಸದೆ ಈದೀಗ ವಿವಾದ ಗರಿಗೆದರಿದೆ.
ಮಾರಾಟ ಪ್ರಾಂಗಣದಲ್ಲಿ ಮೀನು ಮಾರಾಟ ಮಾಡಲು ಪರಸ್ಪರ ವೈಮನಸ್ಸು ಉಂಟಾಗಿ ಗುಂಪುಗಳಾಗಿ ರೂಪಿತವಾಗಿ ವಿವಾದ ತಾರಕಕ್ಕೇರಿದೆ. ಪ್ರಾಂಗಣದಲ್ಲಿ ಮಹಿಳೆಯರು ಮಾತ್ರ ಮೀನು ಮಾರಾಟ ಮಾಡಬೇಕೆಂಬ ಹೊಸ ಬೇಡಿಕೆ ಗೊಂದಲಕ್ಕೆ ಕಾರಣವಾಗಿದೆ.

ನೂತನ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಪ್ರಾರಂಭದಲ್ಲಿ ಇಬ್ಬರು ಪುರುಷ ಮೀನು ಮಾರಾಟಗಾರರಿಗೆ ಗಾರರಿಗೆ ಮಾನವೀಯ ನೆಲೆಯಲ್ಲಿ ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿತ್ತು ಆದರೇ ಪುರುಷ ಮೀನು ಮಾರಾಟಗಾರರು ಅನ್ಯಾಯವಾಗಿ ವ್ಯಾಪಾರದಲ್ಲಿ ಹಾಗೂ ಜಾಗದ ಕಿರುಕುಳ ಮಾಡುತ್ತಿದ್ದಾರೆಂದು ಮಹಿಳೆಯರ ಆರೋಪವಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ 15 ಸಲ ಪಂಚಾಯತ್ ಪಿಡಿಒ ಹಾಗೂ ಅಧ್ಯಕ್ಷರಲ್ಲಿ ಸಮಸ್ಯೆ ಬಗೆಹರಿಸಲು ತಿಳಿಸಲಾಗಿತ್ತು. ಮಹಿಳಾ ಮಾರುಕಟ್ಟೆಯ ಕಾನೂನು ಬಗ್ಗೆ ಮನವರಿಕೆ ಮಾಡಿದರೂ ಪಿಡಿಓ ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ ಮುಂದಿನ ಹತ್ತು ದಿನಗಳಲ್ಲಿ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮಂಗಳೂರು ತಾಲೂಕಿನ 27 ಮೀನು ಮಾರುಕಟ್ಟೆಯ ಮಹಿಳಾ ಮೀನು ಮಾರಾಟಗಾರರನ್ನು ಒಗ್ಗೂಡಿಸಿ ಉಗ್ರ ಪ್ರತಿಭಟನೆ ಹಾಗೂ ರಸ್ತೆತಡೆ ಮಾಡಲಾಗುವುದು. ರಾಜ್ಯದ ಮೀನುಗಾರಿಕಾ ಮಂತ್ರಿಗಳು ಕೇವಲ ಉಡುಪಿ ಜಿಲ್ಲೆಗೆ ಮಾತ್ರ ಸೀಮಿತವಾಗಿದ್ದಾರೆ ನಮ್ಮ ಮನವಿಗೆ ಹಾಗೂ ಬೇಡಿಕೆಗೆ ಅವರ ಸ್ಪಂದನೆ ನೀಡುತ್ತಿಲ್ಲ.
ಯಶ್‌ಪಾಲ್ ಎ ಸುವರ್ಣ
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ 

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಲವಾರು ಬಾರಿ ಮನವಿ ನೀಡಿದ್ದೇವೆ ಎರಡು ವರ್ಷ ಕಾದರೂ ಕಿನ್ನಿಗೋಳಿ ಪಂಚಾಯಿತಿ ಆಡಳಿತ ಸ್ಪಂದನೆ ನೀಡಿಲ್ಲ. ಸಂಜೆ ಹೊತ್ತಿನಲ್ಲಿ ವಿದ್ಯುತ್ ದೀಪದ ವ್ಯವಸ್ಥೆಯೂ ಇಲ್ಲದಾಗಿದೆ. ಪುರುಷ ಮೀನು ಮಾರಾಟಗಾರರಿಗೆ ಎರಡು ಬಾಕ್ಸ್ ಮಾರಾಟಕ್ಕೆ ಅವಕಾಶ ನೀಡಲಾಗಿದ್ದರೂ ಅವರು 10 ರಿಂದ 20 ಬಾಕ್ಸ್ ಮೀನುಗಳನ್ನು ಮಾರಾಟ ಮಾಡುತ್ತಿದ್ದು ಇದರಿಂದ ಒಂದು ಬುಟ್ಟಿ ಮಾರಾಟ ಮಾಡುವ ಮಹಿಳಾ ಮೀನು ಮಾರಾಟಗಾರರು ಸಂಕಷ್ಟದಲ್ಲಿದ್ದಾರೆ. ಟೆಂಫೋ, ರಿಕ್ಷಾದಲ್ಲಿ ಪುರುಷ ಮೀನು ಮಾರಾಟಗಾರರು ಹೊರಗಡೆ ಮೀನು ಮಾರಾಟ ಮಾಡುತ್ತಿದ್ದಾರೆ ಆದರೇ ನಾವು ಮಹಿಳೆಯರು ಅಸಹಾಯಕರಾಗಿದ್ದೇವೆ. ಈ ಎಲ್ಲಾ ಸಮಸ್ಯೆ ಗ್ರಾಮ ಪಂಚಾಯಿತಿ ಸ್ಪಂದನ ನೀಡದೆ ಇದ್ದರಿಂದ ಸಂಘಟನಾತ್ಮಕ ರೀತಿಯಲ್ಲಿ ಪ್ರತಿಭಟನೆ ಹೋರಾಟ ಮಾಡುತ್ತಿದ್ದೇವೆ.
ಅಹಲ್ಯಾ ಕಾಂಚಾನ್
ಅಧ್ಯಕ್ಷರು ಮಂಗಳೂರು ಮಹಿಳಾ ಹಸಿ ಮೀನು ಮಾರಾಟಗಾರರರ ಸಂಘ ಮುಳಿಹಿತ್ಲು , ಮಂಗಳೂರು.

40 ವರ್ಷಗಳಿಂದಲೂ ಪುರುಷ ಮೀನು ಮಾರಾಟಗಾರರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಅವರನ್ನು ಎಲ್ಲಿ ವ್ಯಾಪಾರ ಮಾಡಲು ಕುಳಿತುಕೊಳ್ಳಿಸುವುದು ಎಂಬುದೇ ಸಮಸ್ಯೆ ಯಾಗಿದೆ. ಮುಂದಿನ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗೆ ಪರಿಹಾರ ಹಾಗೂ ಜಿಲ್ಲಾಡಳಿತ ಸರಕಾರಕ್ಕೂ ಮನವರಿಕೆ ಮಾಡಲಾಗುವುದು
ಫಿಲೋಮಿನಾ ಸಿಕ್ವೇರಾ
ಅಧ್ಯಕ್ಷರು ಕಿನ್ನಿಗೋಳಿ ಗ್ರಾಮ ಪಂಚಾಯಿತಿ

Kinnigoli-2012201604 Kinnigoli-2012201605 Kinnigoli-2012201606 Kinnigoli-2012201607

Comments

comments

Comments are closed.

Read previous post:
Kinnigoli-2012201603
ಹೂವು ಮುಳ್ಳು ಕೃತಿ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಭಗಿನಿ ಮಾರಿ ಆಂಜ್ ರಚಿತ "ಹೂವು ಮುಳ್ಳು " ಕೃತಿಯನ್ನು ಮಂಗಳವಾರ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲಾ ಸಭಾಭವನದಲ್ಲಿ ಕನ್ನಡ...

Close