ಹೂವು ಮುಳ್ಳು ಕೃತಿ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಸಿಸ್ಟರ್ ಮಾರಿ ಆಂಜ್ ರಚಿತ “ಹೂವು ಮುಳ್ಳು ” ಕೃತಿಯನ್ನು ಡಿಸೆಂಬರ್ ೨೦ ಮಂಗಳವಾರ ಬೆಳಿಗ್ಗೆ ಗಂಟೆ ೯ಕ್ಕೆ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಬಿಡುಗಡೆಗೊಳಿಸಲಿರುವರು. ಈ ಸಂದರ್ಭ ಮೇರಿವೆಲ್ ಕಾನ್ವೆಂಟ್ ಸುಪೀರಿಯರ್ ಭಗಿನಿ ವಿತಾಲಿಸ್, ಕನ್ಸೆಟ್ಟಾ ಆಸ್ಪತ್ರೆಯ ಡಾ. ಜೀವಿತಾ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಲೀರಾ ಮರಿಯಾ, ಪತ್ರಕರ್ತ ಸರ್ವೋತ್ತಮ ಅಂಚನ್, ಪುನರೂರು ಪ್ರತಿಷ್ಟಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಉಪಸ್ಥಿತರಿರುವರು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-2012201601
ಎಸ್. ಕೋಡಿ ಈದ್ ಮಿಲಾದ್

ಕಿನ್ನಿಗೋಳಿ: ಎಸ್. ಕೋಡಿ ಮಸ್ಜಿದ್ ಅಲ್ -ಜಲಾಲ್ ( ಅಲ್- ಇಕ್ಲಾಸ್ ) ಹಾಗೂ ಅಲ್- ಜಲಾಲ್ ಯಂಗ್ ಮೆನ್ಸ್ ಯೂತ್ ಕಮಿಟಿ ಎಸ್. ಕೋಡಿ ಆಶ್ರಯದಲ್ಲಿ ಈದ್...

Close