ಎಸ್. ಕೋಡಿ ಈದ್ ಮಿಲಾದ್

ಕಿನ್ನಿಗೋಳಿ: ಎಸ್. ಕೋಡಿ ಮಸ್ಜಿದ್ ಅಲ್ -ಜಲಾಲ್ ( ಅಲ್- ಇಕ್ಲಾಸ್ ) ಹಾಗೂ ಅಲ್- ಜಲಾಲ್ ಯಂಗ್ ಮೆನ್ಸ್ ಯೂತ್ ಕಮಿಟಿ ಎಸ್. ಕೋಡಿ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಭಾನುವಾರ ಎಸ್. ಕೋಡಿಯಲ್ಲಿ ನಡೆಯಿತು. ಮೂಲ್ಕಿ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಇಬ್ರಾಹಿಂ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಕಿನ್ನಿಗೋಳಿ ಮಸೀದಿಯ ಖತೀಬರಾದ ಅಬ್ದುಲ್ ಲತೀಫ್ ಸಖಾಪಿ ದುವಾ ಪ್ರಾರ್ಥನೆಗೈದರು. ಅಲ್ ಜಲಾಲ್ ಮಸ್ಜಿದ್ ಅಧ್ಯಕ್ಷ ಕೆ. ಎ. ಖಾದರ್ ಅಧ್ಯಕ್ಷತೆವಹಿಸಿದ್ದರು. ಮಹಮ್ಮದ್ ಆಶ್ರಫ್ ಸಖಾಫಿ ಸಕಲೇಶಪುರ ಮತ ಪ್ರವಚನಗೈದರು. ಮುಂಬಯಿ ಉದ್ಯಮಿ ಶಿರ್ವ ಮಹಮ್ಮದ್ ಸೇಠ್, ಉದ್ಯಮಿ ಇನಾಯತ್ ಅಲಿ ಮೂಲ್ಕಿ, ಉದ್ಯಮಿ ಡಾ. ದೇವಿಪ್ರಸಾದ್ ಶೆಟ್ಟಿ , ಉದ್ಯಮಿ ಮೊಶಿರ್ ಅಹಮ್ಮದ್, ಕಿನ್ನಿಗೋಳಿ ಮಸೀದಿಯ ಅಧ್ಯಕ್ಷ ಕೆ. ಎ. ಅಬ್ದುಲ್ಲ , ಪಕ್ಷಿಕೆರೆ ಬಿಜೆಎಮ್ ಅಧ್ಯಕ್ಷ ಕೆ. ಮಿರಾನ್, ಕೆ. ಅಹಮ್ಮದ್ ಭಾವ , ಕೆ. ಅಬ್ದುಲ್ ರಝಾಕ್, ಎಂ. ರಿಝ್ವಾನ್ ಬಪ್ಪನಾಡ್, ಎಂ. ಕೆ. ಅಬ್ದುಲ್ ಖಾದರ್ ಬಾವ ಬಸಿರ್‌ಕಟ್ಟೆ, ಗುಲಾಂ ಮಹಮ್ಮದ್ ಉಪಸ್ಥಿತರಿದ್ದರು. ಅಧ್ಯಕ್ಷ ಅಬ್ದುಲ್ ಖಾದರ್ ಸ್ವಾಗತಿಸಿದರು. ಶಿಕ್ಷಕ ಅಬ್ದುಲ್ ರೆಹಿಮಾನ್ ಕಾರ್ಯಕ್ರಮ ನಿರೂಪಿಸಿದರು.

Kinnigoli-2012201601

Comments

comments

Comments are closed.

Read previous post:
Kinnigoli-2012201607
ಎಂ.ಸಿ.ಟಿ ಶಾಲೆಯ ವಾರ್ಷಿಕೋತ್ಸವ

ಮೂಲ್ಕಿ: ಪಟ್ಯೇತರ ಚಟುವಟಿಕೆಗಳುನ್ನು ಶೈಕ್ಷಣಿಕ ಪಟ್ಯಕ್ಕೆ ಸಮಾನಾಂತರವಾಗಿ ಸ್ವೀಕರಿಸಿ ಸಾಧನೆ ಗೈದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಬೆಳೆಯಲು ಸಾಧ್ಯ ಎಂದು ಮೂಲ್ಕಿ ಪೋಲೀಸ್ ಉಪ ನಿರೀಕ್ಷಕ ಸಾಂತಪ್ಪ ಹೇಳಿದರು. ಮೂಲ್ಕಿ...

Close