ಎಂ.ಸಿ.ಟಿ ಶಾಲೆಯ ವಾರ್ಷಿಕೋತ್ಸವ

ಮೂಲ್ಕಿ: ಪಟ್ಯೇತರ ಚಟುವಟಿಕೆಗಳುನ್ನು ಶೈಕ್ಷಣಿಕ ಪಟ್ಯಕ್ಕೆ ಸಮಾನಾಂತರವಾಗಿ ಸ್ವೀಕರಿಸಿ ಸಾಧನೆ ಗೈದರೆ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಬೆಳೆಯಲು ಸಾಧ್ಯ ಎಂದು ಮೂಲ್ಕಿ ಪೋಲೀಸ್ ಉಪ ನಿರೀಕ್ಷಕ ಸಾಂತಪ್ಪ ಹೇಳಿದರು.
ಮೂಲ್ಕಿ ಕಾರ್ನಾಡು ಎಂ.ಸಿ.ಟಿ ಶಾಲೆಯ ವಾಷರ್ದಿಕೊತ್ಸವದ ಸಂದರ್ಭ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ದಾರಿ ದೀಪವಾಗುವ ಶಿಕ್ಷಕರು ಶಿಸ್ತು ಹಾಗೂ ಮಾನವೀಯ ಗುಣಮೌಲ್ಯಗಳನ್ನು ತಿಳಿಸಬೇಕು ಮಕ್ಕಳಿಗೆ ನೈತಿಕ ಗುಣ ಮೌಲ್ಯಗಳನ್ನು ತಿಳಿಸುವಲ್ಲಿ ಪೋಷಕರೂ ಸಹಭಾಗಿಗಳಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕಿಲ್ಪಾಡಿ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ರಾವ್ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿ ಅಬ್ದುಲ್ ಖಾದರ್, ಗುತ್ತಿಗೆದಾರ ಹಾಜಿ ಅಬ್ದುಲ್ ರೆಹೆಮಾನ್,ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ಸುರೇಖಾ ಕರುಣಾಕರ್,ಟ್ರಸ್ಟಿಗಳಾದ ಅಬ್ಬಾಲ್ ಆಲಿ, ಮೊದಿನಬ್ಬ ಉಪಸ್ಥಿತರಿದ್ದರು. ಮೂಲ್ಕಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಇಬ್ರಾಹಿಂ ಬಾವಾ ಸ್ವಾಗತಿಸಿದರು. ಶಾಲಾ ಸಂಚಾಲಕ ಎಚ್.ಅಬೂಬಕ್ಕರ್ ಪ್ರಸ್ತಾವಿಸಿದರು.ಮುಖ್ಯೋಪಾದ್ಯಾಯ ಹರೀಶ್ ವರದಿ ವಾಚಿಸಿದರು. ಸಹಶಿಕ್ಷಕಿ ವಿನುತಾ ವಂದಿಸಿದರು.

Kinnigoli-2012201607

 

Comments

comments

Comments are closed.

Read previous post:
Kinnigoli-1912201607
ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆ

ಕಿನ್ನಿಗೋಳಿ: ಮೌಲ್ಯಯುತ ಸಂಸ್ಕಾರ ಭರಿತ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆ ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು. ಭಾನುವಾರ ಗುತ್ತಕಾಡು ಸರಕಾರಿ ಹಿರಿಯ...

Close