ಬಳ್ಕುಂಜೆ ಸಾವಯವ ಕೃಷಿ ಮಾಹಿತಿ ಶಿಬಿರ

ಬಳ್ಕುಂಜೆ: ಮಂಗಳೂರಿನ ಕೆನರಾ ಅಭಿವೃದ್ದಿ, ಶಾಂತಿ ಸಂಸ್ಥೆ ಹಾಗೂ ಸಿ ಓ ಡಿ ಪಿ ಪ್ರಾಯೋಜಿತ ಬಳ್ಕುಂಜೆ ಪ್ರೀತಿ ಮಹಾ ಸಂಸ್ಥೆಯ ಸಹಯೋಗದಿಂದ ಬಳ್ಕುಂಜೆ ಸಂತ ಪೌಲರ ಚರ್ಚಿನ ಹಾಲ್ ನಲ್ಲಿ ಇತ್ತೀಚಿಗೆ ಸಂಸ್ಥೆಯ ಸದಸ್ಯರಿಗೆ ಮತ್ತು ಸ್ವ ಸಹಾಯ ಸಂಘ ಸದಸ್ಯರಿಗೆ ಸಾವಯವ ಕೃಷಿ ಬಗ್ಗೆ ಕಾರ್ಯಗಾರ ನಡೆಯಿತು.
ಬಳ್ಕುಂಜೆ ಚರ್ಚ್ ಧರ್ಮಗುರು ಫಾ.ಮೈಕಲ್ ಡಿ ಸಿಲ್ವಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಗತಿ ಪರ ಕೃಷಿಕ ನಾರಾಯಣ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಪೆಟ್ರಿಕ್ ಪಿಂಟೋ, ಸಿ ಓ ಡಿ ಪಿಯ ಸಂಯೋಜಕ ರವಿ ಕುಮಾರ್ ಕ್ರಾಸ್ತ, ಪ್ರೀತಿ ಮಹಾ ಸಂಘದ ಅಧ್ಯಕ್ಷ ವಲೇರಿಯನ್ ಡಿ ಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-2112201601

Comments

comments

Comments are closed.

Read previous post:
Kinnigoli-2012201605
ಮಹಿಳಾ ಮೀನು ಮಾರಾಟಗಾರರ ಪ್ರತಿಭಟನೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಕ್ಕೊಳಪಟ್ಟ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಮಹಿಳೆಯರಿಗೆಂದು ನಿರ್ಮಾಣವಾದ ಹಸಿ ಮೀನು ಮಾರುಕಟ್ಟೆಯಲ್ಲಿ ಪುರುಷ ಮೀನು ಮಾರಾಟಗಾರರಿಂದ ಕಿರುಕುಳ ದೌರ್ಜನ್ಯ, ಮಾರುಕಟ್ಟೆಯ...

Close