ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಮೂಲ್ಕಿ: ವಿದ್ಯಾರ್ಥಿಗಳನ್ನು ಮೊಬೈಲ್ ಗೀಳಿನಿಂದ ದೂರವಿರಿಸಿ ಶೈಕ್ಷಣಿಕ ಸಾಧಕರಾಗಿ ಹೊರಹೊಮ್ಮುವಂತೆ ಪೋಷಕರು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು ಮೂಲ್ಕಿ ವ್ಯಾಸಮಹರ್ಷಿ ವಿದ್ಯಾ ಪೀಠ ಶಾಲೆಯ ವಾರ್ಷಿಕೋತ್ಸವ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಅವರು ಮಾತನಾಡಿದರು. ಪ್ರತೀ ಮಗುವಿನಲ್ಲೂ ಪ್ರತಿಭೆ ಸುಪ್ತವಾಗಿರುತ್ತದೆ ಅವರ ಆಸಕ್ತಿಗೆ ಅನುಗುಣವಾಗಿ ಜಾಗೃತಿಗೆ ತರುವುದು ಶಿಕ್ಷಕರ ಕರ್ತವ್ಯವಾದರೆ ಮಕ್ಕಳಿಗೆ ಸೂಕ್ತ ವಾತಾವರಣ ಸಹಾಯ ನೀಡುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಎಳೆಯ ಮಕ್ಕಳಿಗೆ ಮೊಬೈಲ್ ಗೀಳು ಹತ್ತಿಕೊಂಡರೆ ಅವರ ಶೃಜನಶೀಲತೆ ಮಾಯವಾಗುವ ಭೀತಿಯ ಕಾರಣ ಪೋಷಕರು ಈ ಬಗ್ಗೆ ಜಾಗ್ರತರಾಗಬೇಕು ಶಾಲಾ ವಾರ್ಷಿ ಕೋತ್ಸವಗಳು ಮಕ್ಕಳ ಪ್ರತಿಭೆಯನ್ನು ಉನ್ನತಗೊಳಿಸುವ ವೇದಿಕೆಯಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವ್ಯಾಸಮಹರ್ಷಿ ವಿದ್ಯಾಪೀಠದ ಅಧ್ಯಕ್ಷ ಕೆ.ಎನ್.ಶೆಣೈ ವಹಿಸಿದ್ದರು. ಅತಿಥಿಗಳಾಗಿ ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ ರಾವ್,ಸದಸ್ಯ ಅಬ್ದುಲ್ ಶರೀಪ್, ಮೂಳೆತಜ್ಞ ಡಾ.ಸುರೇಂದ್ರ ಯು.ಕಾಮತ್,ವಿದ್ಯಾ ಪೀಠದ ಉಪಾಧ್ಯಕ್ಷ ಪ್ರೊ.ಯು.ನಾಗೇಶ್ ಶೆಣೈ, ಕಾರ್ಯದರ್ಶಿ ಕುಲ್ಯಾಡಿ ನರಸಿಂಹ ಪೈ,ಸದಸ್ಯ ಮೋಹನ್‌ದಾಸ್ ಪ್ರಭು,ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಹಾನ ಆಯೇಶಾ ಬಾನು ಸ್ವಾಗತಿಸಿದರು,ಚಂದ್ರಿಕಾ ಭಂಡಾರಿ ವರದಿ ಮಂಡಿಸಿದರು, ಲಾವಣ್ಯ ಸಂದೇಶ ವಾಚಿಸಿದರು,ಪವನ್ ಮತ್ತು ರಕ್ಷಾ ಪೈ ನಿರೂಪಿಸಿದರು. ಚಿರಾಗ್ ವಂದಿಸಿದರು ಈ ಸಂದರ್ಭ ಪ್ರಿ ಪ್ರೈಮರಿಯಿಂದ ನಾಲ್ಕನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಂದ ವೀಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Kinnigoli-2112201602

Comments

comments

Comments are closed.

Read previous post:
Kinnigoli-2112201601
ಬಳ್ಕುಂಜೆ ಸಾವಯವ ಕೃಷಿ ಮಾಹಿತಿ ಶಿಬಿರ

ಬಳ್ಕುಂಜೆ: ಮಂಗಳೂರಿನ ಕೆನರಾ ಅಭಿವೃದ್ದಿ, ಶಾಂತಿ ಸಂಸ್ಥೆ ಹಾಗೂ ಸಿ ಓ ಡಿ ಪಿ ಪ್ರಾಯೋಜಿತ ಬಳ್ಕುಂಜೆ ಪ್ರೀತಿ ಮಹಾ ಸಂಸ್ಥೆಯ ಸಹಯೋಗದಿಂದ ಬಳ್ಕುಂಜೆ ಸಂತ ಪೌಲರ...

Close