ಬಳಕುಂಜೆ ಶತಮಾನೋತ್ಸವ ಮಹಾಸಂಭ್ರಮ

ಕಿನ್ನಿಗೋಳಿ: ಕೆಥೊಲಿಕ ಶಿಕ್ಷಣ ಸಂಸ್ಥೆಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಲ್ಲೆಯಲ್ಲಿ ಶಿಕ್ಷಣ ಕ್ರಾಂತಿ ನಡೆಸಿದೆ. ಜನರು ಮಾನಸಿಕ ಕೊರತೆ ಮತ್ತು ತಪ್ಪು ಕಲ್ಪನೆಯಿಂದ ಆಂಗಮಾಧ್ಯಮದತ್ತ ಮಾರು ಹೋಗುತ್ತಿದ್ದೇವೆ. ಮೌಲ್ಯಾಧಾರಿತ ಆತ್ಮ ಜಾಗೃತಿಯ ಶಿಕ್ಷಣ ಬೇಕಾಗಿದೆ ಎಂದು ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು
ಭಾನುವಾರ ಬಳಕುಂಜೆ ಸಂತ ಪೌಲರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶತಮಾನೋತ್ಸವ ಮಹಾಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಹಾಗೂ ಕಥೊಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ. ಎಲೋಶಿಯಸ್ ಪಾವ್ಲ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಶತಮಾನ ಆಚರಿಸುತ್ತಿರುವುದು ಶ್ಲಾಘನೀಯ, ಶಾಲೆಗಳು ದೇವಾಲಯವಿದ್ದಂತೆ ಎಲ್ಲಾ ಮತಧರ್ಮದವರಿಗೂ ಒಂದೇ ಸೂರಿನಡಿ ಶಿಕ್ಷಣ ನೀಡಿ ಸತ್ಪ್ರಜೆಗಳನ್ನಾಗಿ ಮಾಡುತ್ತಿದೆ. ಎಂದರು.
ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಹಿಂದಿನ ಸಂಚಾಲಕರು, ಧಾನಿಗಳು, ಹಿರಿಯ ಶಿಕ್ಷಕರು, ಸಾಧಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮಂಗಳೂರು ಬೆಥನಿ ಪ್ರಾಂತ್ಯಾಧಿಕಾರಿ ಸಲಹೆಗಾರರಾದ ಭಗಿನಿ ಶುಭ ಬಿ. ಎಸ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಉದ್ಯಮಿ ದಯಾ ಶಂಕರ ಶೆಟ್ಟಿ , ಅದಾನಿ ಗ್ರೂಪ್ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಆಳ್ವ, ಶಾಲಾ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ವಿರಾರ್ ಶಂಕರ ಶೆಟ್ಟಿ, ಅಧ್ಯಕ್ಷ ಡೆನಿಸ್ ಡಿಸೋಜ, ಶಾಲಾ ಸಂಚಾಲಕ ಫಾ. ಮೈಕಲ್ ಪಿಂಟೋ, ಮುಖ್ಯ ಶಿಕ್ಷಕಿ ಭಗಿನಿ ಲೊಲಿಟ ಬಿ. ಎಸ್, ದಿನಕರ ಶೆಟ್ಟಿ, ಉದಯ ರಾವ್, ಫ್ರೆಡಿಕ್ ಪಿಂಟೋ, ನೆಲ್ಸನ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.
ಸುಕುಮಾರ್ ಸಮ್ಮಾನ ಪತ್ರ ವಾಚಿಸಿದರು. ಹೆಲನ್ ಡಿಸೋಜ ಕಾರ್ಯಕ್ರಮ ನಿರೂಸಿದರು.

Kinnigoli-2312201602

Comments

comments

Comments are closed.

Read previous post:
Kinnigoli-2312201601
ಕಿನ್ನಿಗೋಳಿ – ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಕೇವಲ ಪಠ್ಯ ಪುಸ್ತಕವನ್ನೇ ಅವಲಂಭಿಸದಂತೆ ಇತರ ಮಾನವೀಯ ಮೌಲ್ಯಧಾರಿತ ಶಿಕ್ಷಣವನ್ನು ಹಿರಿಯರು ತಿಳಿಸಿಕೊಡುವ ಅಗತ್ಯತೆ ಇದೆ. ಎಂದು ಕರ್ನಾಟಕ ವಿಧಾನ ಪರಿಷತ್...

Close