ಕಟೀಲು ಕ್ರಿಸ್ಮಸ್ ಸೌಹಾರ್ದ ಸಂಗಮ- 2016

ಕಿನ್ನಿಗೋಳಿ: ಸಂತೋಷ, ಸಮಾಧಾನ, ಪ್ರೀತಿ, ಸೌಹಾರ್ದದತೆ ಜೀವನ ನಮ್ಮದಾಗಬೇಕು. ಸಮಾಜಕ್ಕಾಗಿ ತಮ್ಮ ಕೈಲಾದಷ್ಟು ಸಹಾಯ, ಸೇವೆ ನೀಡಿದಾಗ ಬದುಕು ಪಾವನವಾಗುತ್ತದೆ ಎಂದು ಕಟೀಲು ಸಂತ ಜಾಕೊಬರ ಚರ್ಚ್ ಪ್ರಧಾನ ಧರ್ಮಗುರು ಡಾ. ಫಾ. ರೊನಾಲ್ದ್ ಕುಟಿನ್ಹೊ ಹೇಳಿದರು.
ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘ ಹಾಗೂ ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಆಶ್ರಯದಲ್ಲಿ ಗುರುವಾರ ನಡೆದ ಕ್ರಿಸ್ಮಸ್ ಸೌಹಾರ್ದ ಸಂಗಮ- 2016  ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿದರು.
ಈ ಸಂದರ್ಭ ಕಟೀಲು ಸಂತ ಜಾಕೊಬರ ಚರ್ಚ್ ಪ್ರಧಾನ ಧರ್ಮಗುರು ಡಾ. ಫಾ. ರೊನಾಲ್ದ್ ಕುಟಿನ್ಹೊ ಅವರನ್ನು ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಶ್ರೀ ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ. ಸಂಜೀವ ಮಡಿವಾಳ, ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಸಂತಿ ಎನ್ ಶೆಟ್ಟಿ, ಶೈಲಾ ಸಿಕ್ವೇರಾ, ಮೇರಿ ಡಿಸೋಜ, ಸುಜಾತಾ, ಪುಷ್ಪ ಉಪಸ್ಥಿತರಿದ್ದರು.
ಸಹಕಾರ ಸಂಘ ಬ್ಯಾಂಕ್ ಉಪಾಧ್ಯಕ್ಷ ಸ್ಟೇನಿ ಪಿಂಟೋ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಷಾ ವಂದಿಸಿದರು. ಕೆ.ಬಿ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-2312201607

Comments

comments

Comments are closed.

Read previous post:
Kinnigoli-2312201606
ಸಾರ್ವಜನಿಕ ಈದ್ ಮಿಲಾದ್

ಕಿನ್ನಿಗೋಳಿ: ಸಮಾಜದ ಎಲ್ಲಾ ಧರ್ಮಗಳ ಚಿಂತನೆಗಳೊಂದಿಗೆ ಪ್ರೀತಿ ಅನ್ಯೋನತೆಯಿಂದ ಬಾಳಬೇಕು ಧರ್ಮ ಚಿಂತಕರ ಧ್ಯೇಯ ಉದ್ಧೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ಚರ್ಚ್ ಸಹಾಯಕ ಧರ್ಮಗುರು ಫಾ....

Close