ಆತ್ಮವಿಶ್ವಾಸ ನಿರ್ದಿಷ್ಟ ಗುರಿ ಯಶಸ್ಸಿನ ಮೂಲ ಮಂತ್ರ

ಕಿನ್ನಿಗೋಳಿ: ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸ ನಿರ್ದಿಷ್ಟ ಗುರಿ ಹಾಗೂ ಸತತ ಸಾಧನೆಯಿದ್ದಲ್ಲಿ ವಿದ್ಯಾರ್ಥಿಗಳು ಯಶಸ್ಸಿನ್ನು ಸಾಧಿಸಲು ಸಾಧ್ಯ ಎಂದು ಮಂಗಳೂರು ಇನ್ಸಿಟ್ಯೂಶನ್ ಫಾರ್ ಡೆವಲಪ್‌ಮೆಂಟ್ ನಿರ್ದೇಶಕ ಪ್ರೊ. ರೋನಾಲ್ಡ್ ಪಿಂಟೋ ಹೇಳಿದರು
ಬುಧವಾರ ತಾಳಿಪಾಡಿ ಪೊಂಪೈ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೊಂಪೈ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ. ವಿಕ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸಿದ್ದರು.
ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗಲಿರುವ ಉಪನ್ಯಾಸಕರಾದ ಎಚ್.ಎಸ್. ಗೋಪಾಲ್, ಸುವಾಸ ಕ್ರಿಸ್ತ ಜೀವನ್, ಜವಾನರಾದ ನಾಗಪ್ಪ ಆಚಾರಿ ಅವರನ್ನು ಸನ್ಮಾನಿಸಲಾಯಿತು. ರಾಮಚಂದ್ರ ಭಟ್, ಪೀಟರ್ ಡಿಕೋಸ್ಟ, ವಿನ್ನಿಫ್ರೆಡ್ ಡಿಸೋಜ ಸನ್ಮಾನಿತರ ಬಗ್ಗೆ ಮಾತನಾಡಿದರು. ಅನಂತ ಮೂಡಿತ್ತಾಯ ಹಾಗೂ ಲಕ್ಷ್ಮೀಶ ಶಾಸ್ತ್ರಿ ಸನ್ಮಾನ ಪತ್ರಗಳನ್ನು ವಾಚಿಸಿದರು. ಲಾರೆನ್ಸ್ ಸಿಕ್ವೇರಾ, ಜಾನೆಟ್ ಡಿಸೋಜ ವಿವಿಧ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.
ಕಿರಂ ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಮ್ಯಾಕ್ಸಿಂ ಪಿಂಟೊ, ಪ್ರೌಢ ಶಾಲಾ ಶಿಕ್ಷಕ ರಕ್ಷಕ ಸಂಘದ ಪದ್ಮಿನಿ ವಸಂತ್, ಪದವಿಪೂರ್ವ ಕಾಲೇಜು ಶಿಕ್ಷಕ ರಕ್ಷಕ ಸಂಘದ ಬೆನಡಿಕ್ಟ ದಾಂತಿಸ್, ಪ್ರಾಕ್ತನ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಕಿ ಪಿಂಟೊ, ಕಾಲೇಜು ವಿದ್ಯಾರ್ಥಿ ನಾಯಕ ನೈಜಿಲ್ ರೊಡ್ರಿಗಸ್, ಪ್ರೌಢ ಶಾಲಾ ವಿದ್ಯಾರ್ಥಿ ನಾಯಕ ರಕ್ಷಿತ್ ನಾಯ್ಕ್ ಉಪಸ್ಥಿತರಿದ್ದರು.
ಪೊಂಪೈ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಮಾಥ್ಯೂ ಎನ್.ಎಮ್. ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರೀತಿ ವೀರ ಬಿ. ಡಿಸೋಜ ವಾರ್ಷಿಕ ವರದಿ ವಾಚಿಸಿದರು. ವಿನ್ನಿಫ್ರೆಡ್ ಡಿಸೋಜ ವಂದಿಸಿದರು. ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಸಿದರು.

Kinnigoli-2312201604

Comments

comments

Comments are closed.

Read previous post:
Kinnigoli-2312201603
ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್

ಕಿನ್ನಿಗೋಳಿ: ಯಂಗ್ ಫ್ರೆಂಡ್ಸ್ ಸ್ಪೋಟ್ಸ್ ಕ್ಲಬ್ (ರಿ) ಗುತ್ತಕಾಡು ಶಾಂತಿನಗರ ಇದರ ನೂತನ ಅಧ್ಯಕ್ಷರಾಗಿ ತಾಹಿರ್ ನಕಾಶ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷ ಶಶಿಕಾಂತ್ ರಾವ್, ಉಪಾಧ್ಯಕ್ಷ ಆಶ್ರಫ್, ಕಾರ್ಯದರ್ಶಿ ಮುಬೀನ್,...

Close