ಕಿನ್ನಿಗೋಳಿ – ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ: ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಕೇವಲ ಪಠ್ಯ ಪುಸ್ತಕವನ್ನೇ ಅವಲಂಭಿಸದಂತೆ ಇತರ ಮಾನವೀಯ ಮೌಲ್ಯಧಾರಿತ ಶಿಕ್ಷಣವನ್ನು ಹಿರಿಯರು ತಿಳಿಸಿಕೊಡುವ ಅಗತ್ಯತೆ ಇದೆ. ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಮಂಗಳವಾರ ಕಿನ್ನಿಗೋಳಿ ಸೈಂಟ್ ಮೇರಿಸ್ ಸೆಂಟ್ರಲ್ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆಥೊಲಿಕ್ ಶಿಕ್ಷಣ ಸಂಸ್ಥೆಯ ಫಾ. ಪೌಲ್ ಸಿಕ್ವೇರಾ, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ. ಆನಂದ್, ಕಿನ್ನಿಗೋಳಿ ಚರ್ಚ್ ಉಪಾಧ್ಯಕ್ಷ ವಿನ್ಸಂಟ್ ವಿನೋದ್ ಡಿಸೋಜ , ಪಿಟಿಎ ಅಧ್ಯಕ್ಷೆ ಅನಿತಾ ಪಿಂಟೋ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಫಾ. ವಿನ್ಸೆಂಟ್ ಪ್ರಾನ್ಸಿಸ್ ಮೊಂತೆರೊ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಫಾ. ಸುನಿಲ್ ಪ್ರವೀಣ್ ಪಿಂಟೊ ವಾರ್ಷಿಕ ವರದಿ ಮಂಡಿಸಿದರು. ರೋಮಿಯ ಸ್ಟೆಲ್ಲಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ರಂಜಿತಾ ವಂದಿಸಿದರು.

Kinnigoli-2312201601

Comments

comments

Comments are closed.

Read previous post:
ವೀರಕೇಸರಿ ಕಲಾವೃಂದದ 37ನೇ ವಾರ್ಷಿಕ ಮಹಾಸಭೆ

ಕಲಾ ಸೇವೆ ನಿರಂತರವಾಗಿ ನಡೆಯುತ್ತಿರಲಿ - ರಮೇಶ್ ಶೆಟ್ಟಿ ಪಯ್ಯಾರ್ ವರದಿ : ಈಶ್ವರ ಎಂ. ಐಲ್  ಮುಂಬಯಿ : ನಗರದ ಹಿರಿಯ ಕಲಾ ಸಂಸ್ಥೆ ವೀರಕೇಸರಿ...

Close