ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವು ಡಿಸೆಂಬರ್ 26 ರಿಂದ ಜನವರಿ 1 ರವರೆಗೆ ಶ್ರೀ ಭೂತನಾಥೇಶ್ವರ ದೇವಸ್ಥಾನ, ಎಡಪದವು, ಮಿಜಾರು ಇಲ್ಲಿ ನಡೆಯಲಿರುವುದು. ಶಿಬಿರದ ಉದ್ಘಾಟನೆಯನ್ನು ಮುಲ್ಕಿ ಮೂಡಬಿದ್ರಿ ಶಾಸಕ ಕೆ. ಅಭಯಚಂದ್ರ ಜೈನ್ ನೆರವೇರಿಸಲಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಕಳೇಗಿಡ ಕಡಿದು ಚರಂಡಿ ನಿರ್ಮಾಣ, ಪ್ಲಾಸ್ಟಿಕ್ ನಂತಹ ಪರಿಸರ ಹಾನಿಕಾರಕ ವಸ್ತುಗಳ ನಿರ್ಮೂಲನೆ, ಏಡ್ಸ್, ಮಲೇರಿಯಾ ಫೈಲೇರಿಯಾದಂತಹ ರೋಗಗಳ ಬಗ್ಗೆ, ಅಂಗಾಂಗ ದಾನದ ಬಗ್ಗೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಕುರಿತು ಹಾಗೂ ಅಣೆಕಟ್ಟು, ಕಟ್ಟೆ ಕೆರೆಗಳ ದುರಸ್ತಿಯಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-2312201605
ಕಟೀಲು ಮಾದಕ ದ್ರವ್ಯ ಜಾಗೃತಿ ಅಭಿಯಾನ

ಕಿನ್ನಿಗೋಳಿ: ಯುವಜನತೆ ದುಶ್ಚಟಗಳಿಗೆ ಬಲಿ ಬೀಳದೆ ಮಾದಕ ದ್ರವ್ಯದ ದುಷ್ಪರಿಣಾಮದ ಬಗ್ಗೆ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾಸ್ಕರ ಕೋಟ್ಯಾನ್...

Close