ಸಸಿಹಿತ್ಲು ಮುಂಡ ಬೀಚ್‌ಗೆ ಜಿಲ್ಲಾಧಿಕಾರಿ ಭೇಟಿ

ಹಳೆಯಂಗಡಿ : ಕರಾವಳಿ ಜಿಲ್ಲೆಯಲ್ಲಿನ ಅಪರೂಪದ ಬೀಚ್ ಆಗಿ ಕಂಡು ಬಂದಿರುವ ಸಸಿಹಿತ್ಲು ಮುಂಡ ಬೀಚ್ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ಪ್ರದೇಶದ ನಿವಾಸಿಗಳನ್ನು ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ.ಜಿ.ಜಗದೀಶ್ ತಿಳಿಸಿದರು.
ಅವರು ಹಳೆಯಂಗಡಿ ಗ್ರಾಮ ಪಂಚಾಯತ್‌ನ ಸಸಿಹಿತ್ಲು ಮುಂಡ ಬೀಚ್ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ಬೀಚ್ ಪ್ರದೇಶವನ್ನು ವೀಕ್ಷಿಸಿ, ಗ್ರಾಮ ಪಂಚಾಯತ್ ನಿಯುಕ್ತಿಗೊಳಿಸಿರುವ ರಕ್ಷಣಾ ಸಿಬ್ಬಂದಿಗಳೊಂದಿಗೆ ಮಾತುಕತೆ ನಡೆಸಿ ಪ್ರತಿಕ್ರಿಯಿಸಿದರು.
ಕದಿಕೆಯಲ್ಲಿ ನಿರ್ಮಾಣವಾದ ನೂತನ ಸೇತುವೆಯವರೆಗೆ ಹಾಗೂ ಹೆಜಮಾಡಿ ಪ್ರದೇಶಕ್ಕೆ ಅಳಿವೆಯಿಂದ ಬೋಟ್ ಮೂಲಕ ತೆರಳಿ ಬೋಟಿಂಗ್ ಪ್ರದೇಶವನ್ನು ಪರಿಶೀಲಿಸಿದರು. ನಂದಿನಿ ಮತ್ತು ಶಾಂಭವಿ ನದಿಯ ಸಂಗಮದ ಪ್ರದೇಶದ ಮಾಹಿತಿ ಪಡೆದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಂದಾಯ ಪ್ರದೇಶ ಮತ್ತು ಅರಣ್ಯ ಪ್ರದೇಶದ ಬಗ್ಗೆ ಮಾಹಿತಿ ಪಡೆದುಕೊಂಡರು.
ಸರ್ಫಿಂಗ್ ನಡೆಯುವ ಪ್ರದೇಶದಲ್ಲಿ ಆಗಿರುವ ಸಮುದ್ರ ಕೊರೆತ, ಪ್ರವಾಸೋದ್ಯಮ ಇಲಾಖೆಯ ಮೂಲಕ ಕೈಗೊಳ್ಳುವ ಕಾಮಗಾರಿಯನ್ನು ಅಧಿಕಾರಿಗಳಿಂದ ವಿವರವನ್ನು ಪಡೆದರು. ಬೀಚ್ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಮಂಗಳೂರು ತಾಲೂಕು ಪಂಚಾಯತ್‌ನ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಶೌಚಾಲಯ ಕಾಮಗಾರಿ, ರಕ್ಷಣಾ ಸಿಬ್ಬಂದಿಗಳ ಕೊಠಡಿಯ ಬಗ್ಗೆ ತಿಳಿದುಕೊಂಡ ಜಿಲ್ಲಾಧಿಕಾರಿಗಳು ಅಧಿಕಾರಿಗಳೊಂದಿಗೆ ಬೋಟಿಂಗ್ ನಡೆಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್, ಸಿಆರ್‌ಜೆಡ್‌ನ ಮಹೇಶ್, ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣ ಅಧಿಕಾರಿ ಗೋಪಾಲಕೃಷ್ಣ ಭಟ್, ಮೂಲ್ಕಿ ವಿಶೇಷ ತಹಶೀಲ್ದಾರ್ ಕಿಶೋರ್‌ಕುಮಾರ್, ಕಂದಾಯ ನಿರೀಕ್ಷಕ ದಿಲೀಪ್ ರೋಡ್‌ಕರ್, ಗ್ರಾಮ ಕರಣಿಕ ಪಿ.ಆರ್.ಮೋಹನ್, ಸರ್ಫಿಂಗ್‌ನ ಜಿಲ್ಲಾ ಸಮಿತಿಯ ವಿವೇಕ್, ಮೂಲ್ಕಿ ಮಂತ್ರ ಸರ್ಫಿಂಗ್‌ನ ಪ್ರಮುಖರು, ಸ್ಥಳೀಯ ರಕ್ಷಣಾ ಸಿಬ್ಬಂದಿಗಳಾದ ಅನಿಲ್‌ಕುಮಾರ್, ಜಗದೀಶ್, ಮನೋಜ್, ದಿಲೀಪ್ ಮತ್ತಿತರರು ಉಪಸ್ಥಿತರಿದ್ದರು.

Haleyangadi-24121601

 

Comments

comments

Comments are closed.

Read previous post:
Kinnigoli-2312201607
ಕಟೀಲು ಕ್ರಿಸ್ಮಸ್ ಸೌಹಾರ್ದ ಸಂಗಮ- 2016

ಕಿನ್ನಿಗೋಳಿ: ಸಂತೋಷ, ಸಮಾಧಾನ, ಪ್ರೀತಿ, ಸೌಹಾರ್ದದತೆ ಜೀವನ ನಮ್ಮದಾಗಬೇಕು. ಸಮಾಜಕ್ಕಾಗಿ ತಮ್ಮ ಕೈಲಾದಷ್ಟು ಸಹಾಯ, ಸೇವೆ ನೀಡಿದಾಗ ಬದುಕು ಪಾವನವಾಗುತ್ತದೆ ಎಂದು ಕಟೀಲು ಸಂತ ಜಾಕೊಬರ ಚರ್ಚ್ ಪ್ರಧಾನ...

Close