ಐಕಳ ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಐಕಳ ಏಳಿಂಜೆ ಮತ್ತು ಉಳೆಪಾಡಿ ಗ್ರಾಮಗಳ ೨೦೧೬-೧೭ ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಶನಿವಾರ ಐಕಳ ಗ್ರಾಮ ಪಂಚಾಯಿತಿಯ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಇಲಾಖಾಧಿಕಾರಿಗಳ ಅನುಪಸ್ಥಿತಿ ಎದ್ದು ತೋರುತ್ತಿತ್ತು.

ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರುಕಾವೇರಿಯಿಂದ ಸಂಕಲಕರಿಯ ಪಟ್ಟೆ ಕ್ರಾಸ್ ವರೆಗೆ ಹಾದೂ ಹೋಗುವ ರಾಜ್ಯ ಹೆದ್ದಾರಿಯ ಎರಡೂ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಹಾಗೂ ದುರಸ್ತಿ ಮಾಡುತ್ತಿಲ್ಲ ಯಾಕೆ? ಮಳೆಗಾಲದಲ್ಲಿ ರಸ್ತೆಯಲ್ಲಿಯೇ ನೀರು ಹರಿದು ಹೋಗುತ್ತಿದೆ ಶಾಲಾ ಮಕ್ಕಳಿಗೆ ಪಾದಚಾರಿಗಳಿಗೆ ಇದರಿಂದ ತೀವ್ರ ಸಮಸ್ಯೆ ಆಗಿದೆಯಾದರೂ ಇಲಾಖೆ ಯಾಕೇ ಮೌನದಿಂದ ಇದೆ ನಮ್ಮ ಮನವಿ ಏನಾಯಿತು ಎಂದು ಸುಧಾಮ ಶೆಟ್ಟಿ ಕೇಳಿದಾಗ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ ಮಾತನಾಡಿ ನಾವು ಗ್ರಾ. ಪಂ. ವತಿಯಿಂದ ಈಗಾಗಲೇ ಮನವಿ ನೀಡಿದ್ದೇವೆ. ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆಗೆ ಬರುತ್ತೇವೆ ಎಂದು ಬಂದಿಲ್ಲ. ಪಂಚಾಯಿತಿ ನಿರ್ಣಯ ಮಾಡಿ ಪುನ: ಮೇಲಾಧಿಕಾರಿಗಳಿಗೆ ಮನವಿ ನೀಡಲಾಗುವುದು ಎಂದು ಇಳಿಸಿದರು.
8 ವರ್ಷ ಕಳೆದರೂ ಸರಕಾರಿ ಜಾಗವಿದ್ದರೂ ವಸತಿ ನಿವೇಶನಗಳನ್ನು ನೀಡಿಲ್ಲ ಯಾಕೆ ಐಕಳ ಕಂಗುರಿಯಲ್ಲಿ 7 ಎಕರೆ ಸರಕಾರಿ ಜಾಗ ವಿದ್ದರೂ ಮನೆ ನಿವೇಶನ ನೀಡುತ್ತಿಲ್ಲ ಅರ್ಜಿ ವಿಚಾರಣೆ ಮಾತ್ರ ಮಾಡುತ್ತಾ ಬಂದಿದ್ದಾರೆ. ಪ್ರತಿ ಗ್ರಾಮ ಸಭೆಯಲ್ಲಿ ಈ ಬಗ್ಗೆ ಕೇ ಕೇಳಿ ಸಾಕಾಗಿ ಹೋಗಿದೆ ಎಂದು ಗ್ರಾಮಸ್ಥರ ಪ್ರಶ್ನೆಗೆ 2005 ರಿಂದ ಯಾವುದೇ ನಿವೇಶನಗಳನ್ನು ಸರಕಾರದ ವತಿಯಿಂದ ನೀಡಿಲ್ಲ. ಜಾಗವಿದೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇವೆ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ತಾಂತ್ರಿಕ ತೊಂದರೆಗಳಿಂದ ಮಂಜೂರಾತಿ ನೀಡಿಲ್ಲ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಪಂಚಾಯಿತಿ ಆಡಳಿತ ತಿಳಿಸಿತು.
ಉಳೆಪಾಡಿ ಅಂಬೇಡ್ಕರ ಕಾಲೂನಿಯಲ್ಲಿ ಹಲವು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ ಕಳೆದ ಆರು ತಿಂಗಳಿನಿಂದಲೂ ಸರಿಯಾಗಿ ಕುಡಿಯುವ ನೀರು ಬರುತ್ತಿಲ್ಲ. ಕೆಲವು ಕೆಲವು ಮನೆಗಳಿಗೆ ಕಳೆದ ಒಂದು ವರ್ಷದಿಂದ ನೀರು ಬರುತ್ತಿಲ್ಲ ಹಲವು ಬಾರಿ ಗ್ರಾಮ ಪಂಚಾಯಿತಿ ಮನವಿ ನೀಡಿದರೂ ಉತ್ತರವಿಲ್ಲ ಎಂದು ಎಂದು ಉಳೆಪಾಡಿ ಗ್ರಾಮಸ್ಥ ಸುರೇಶ್ ತಮ್ಮ ಅಹವಾಲು ತೋಡಿಕೊಂಡರು.
ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ ಇನ್ನೂ ಕೂಡಾ ಹಲವು ಪ್ರದೇಶಗಳಿಗೆ ನೀರು ಬರುತ್ತಿಲ್ಲ. ನೀರು ಶುದ್ಧಿಕರಣ ಗೊಳ್ಳದೆ ಕೆಲವು ಕಡೆ ಸರಭರಾಜು ಆಗುತ್ತಿದೆ. ಯಾಕೇ ಎಂದು ಗ್ರಾಮಸ್ಥರು ಕೇಳಿದಾಗ ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ ಕಳಪೆ ಕಾಮಗಾರಿ ಆಗಿದ್ದು ಗುತ್ತಿಗೆದಾರರಿಂದ ವಿಳಂಬವಾಗಿದೆ ಹಾಗೂ ಅವರ ಕಾಮಗಾರಿ ಬಿಲ್ಲು ನೀಡಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿದೆ. ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು ಕಾಮಗಾರಿ ತ್ವರಿತವಾಗಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ 10 ಗ್ರಾಮಗಳ ಗ್ರಾಮ ಸಮಿತಿ ರಚಿಸಲಾಗಿದೆ. ಎಂದರು.
ಸರಕಾರದ ಜಾಗದಲ್ಲಿ ಅಕ್ರಮ ನಿವೇಶನ ಮಾಡಿದ ಜನರು ಜಾಗವನ್ನು ಸಕ್ರಮ ಮಾಡಲು 94ಸಿ ಅರ್ಜಿಗಳನ್ನು ಸಲ್ಲಿಸಿದ್ದರು ಆದರೆ ಇದೀಗ ಅರ್ಜಿಗಳು ತಿರಸ್ಕಾರಗೊಂಡಿದೆ ಇದಕ್ಕೇನು ಮಾಡುವುದು ಎಂದು ಗ್ರಾಮಸ್ಥರು ಹೇಳಿದಾಗ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಹತ್ತಿರದ ಪ್ರದೇಶಗಳಾಗಿ ಮುಲ್ಕಿ ಹೋಬಳಿ ಗ್ರಾಮಗಳು ಬರುವುದರಿಂದ ಜನರು ಸರಕಾರದ ಆದೇಶದ ಪ್ರಕಾರ 94ಸಿಸಿ ಅಡಿಯಲ್ಲಿ ನೂತನ ಅರ್ಜಿಯನ್ನು ನೀಡಬೇಕು ಎಂದು ಇಲಾಖಾಧಿಕಾರಿಗಳು ಹೇಳಿದರು.
ಐಕಳ ಗ್ರಾಮದಲ್ಲಿ ಸರಕಾರಿ ಸ್ಥಳವಿದ್ದರೂ ಸ್ಮಶಾನವಿಲ್ಲ ಶೀಘ್ರ ಇದರ ವ್ಯವಸ್ಥೆ ಆಗಬೇಕು. ಎಂದು ಗ್ರಾಮಸ್ಥರು ಆಗ್ರಹಿಸಿದರು.
ವಲಯ ಅರಣಾಧಿಕಾರಿ (ಸಾಮಾಜಿಕ ಅರಣ್ಯ ವಲಯ) ಜಿ. ಎ. ನರೇಶ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಐಕಳ ಗ್ರಾ.ಪಂ. ಉಪಾಧ್ಯಕ್ಷೆ ಸುಂದರಿ ಸಾಲಿಯಾನ್. ಐಕಳ ಗ್ರಾ.ಪಂ. ಪಿಡಿಒ ನಾಗರತ್ನ, ಪಂಚಾಯಿತಿರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಕಟೀಲು ಪ್ರಾ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಭಾಸ್ಕರ ಕೋಟ್ಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಮಂಗಳೂರು ಗ್ರಾಮಾಂತರ ಹಿರಿಯ ಮೇಲ್ವಿಚಾರಕಿ ಶೀಲಾವತಿ, ಗ್ರಾಮಕರಣಿಕ ಮಂಜುನಾಥ, ಐಕಳ ಗ್ರಾ. ಪಂ. ಸದಸ್ಯರು ಉಪಸ್ಥಿತರಿದ್ದರು.

Kinnigoli-24121602

Comments

comments

Comments are closed.

Read previous post:
Kinnigoli-24121601
ಪುನರೂರು ಭಾರತಮಾತಾ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯ. ಶ್ರದ್ಧೆ ಏಕಾಗ್ರತೆ ಸಾಧನೆ ಛಲ ಹಾಗೂ ನಿರಂತರ ಪ್ರೋತ್ಸಾಹ ದೊರಕಿದಲ್ಲಿ ಮಕ್ಕಳ ಭವಿಷ್ಯ ಉತ್ತಮವಾಗುವುದು. ಎಂದು...

Close