ಪುನರೂರು ಭಾರತಮಾತಾ ಶಾಲಾ ವಾರ್ಷಿಕೋತ್ಸವ

ಕಿನ್ನಿಗೋಳಿ : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯ. ಶ್ರದ್ಧೆ ಏಕಾಗ್ರತೆ ಸಾಧನೆ ಛಲ ಹಾಗೂ ನಿರಂತರ ಪ್ರೋತ್ಸಾಹ ದೊರಕಿದಲ್ಲಿ ಮಕ್ಕಳ ಭವಿಷ್ಯ ಉತ್ತಮವಾಗುವುದು. ಎಂದು ಮೂಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು.
ಶುಕ್ರವಾರ ನಡೆದ ಪುನರೂರು ಭಾರತಮಾತಾ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಲಾ ಸಂಚಾಲಕ ವಿನೋಬ್‌ನಾಥ ಐಕಳ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಸುರೇಶ್ ರಾವ್, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಪ್ರಬಂಧಕ ಮಾಧವ ರಾವ್, ತೋಕೂರು ಶ್ರೀದೇವಿ ಮಹಿಳಾ ಮಂಡಲ ಅಧ್ಯಕ್ಷೆ ವಿಲಾಸಿನಿ ಎನ್. ಮೆಂಡನ್, ಉದ್ಯಮಿ ಶ್ರೀಕಾಂತ್ ಶೆಟ್ಟಿ, ಪೋಷಕರ ಸಮಿತಿ ಅಧ್ಯಕ್ಷೆ ಗ್ರೇಸಿ ಸಿಕ್ವೇರಾ, ಶೋಭ ಎಂ. ರಾವ್, ಉಪಸ್ಥಿತರಿದ್ದರು.
ಪೂರಪ್ಪ ಚೌಹಣ್, ಕೃಷ್ಣ ರಾವ್, ಮಾಲಿನಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ರಾವ್, ಅಂಗನವಾಡಿ ಶಿಕ್ಷಕಿ ಕಸ್ತೂರಿ ಶಾಲಾ ವರದಿ ವಾಚಿಸಿದರು.

Kinnigoli-24121601

Comments

comments

Comments are closed.

Read previous post:
Haleyangadi-24121601
ಸಸಿಹಿತ್ಲು ಮುಂಡ ಬೀಚ್‌ಗೆ ಜಿಲ್ಲಾಧಿಕಾರಿ ಭೇಟಿ

ಹಳೆಯಂಗಡಿ : ಕರಾವಳಿ ಜಿಲ್ಲೆಯಲ್ಲಿನ ಅಪರೂಪದ ಬೀಚ್ ಆಗಿ ಕಂಡು ಬಂದಿರುವ ಸಸಿಹಿತ್ಲು ಮುಂಡ ಬೀಚ್ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಸ್ಥಳೀಯ ಗ್ರಾಮ...

Close