ಕಿನ್ನಿಗೋಳಿ : ವಾಜಪೇಯಿ ಜನ್ಮ ದಿನಾಚರಣೆ

ಕಿನ್ನಿಗೋಳಿ : ದೇಶ ಕಂಡ ಅದ್ಭುತ ಅಜಾತ ಶತ್ರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಜನಪಯೋಗಿಯಾದ ಉಚಿತ ವೈದ್ಯಕೀಯ ಶಿಬಿರ ಹಾಗೂ ಆರೋಗ್ಯ ರಕ್ಷಣೆಯನ್ನು ಜನರಲ್ಲಿ ತಿಳಿಹೇಳುವ ಕಾರ್ಯಕ್ರಮ ಸ್ವಾಗತಾರ್ಹ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಹ ಸಂಚಾಲಕ ಡಾ. ನಿಶಾಂತ್ ಶೆಟ್ಟಿಗಾರ್ ಹೇಳಿದರು

ಮುಲ್ಕಿ ಮೂಡಬಿದ್ರೆ ಬಿಜೆಪಿ ಯುವ ಮೋರ್ಚಾ, ಮಹಿಳಾ ಮೋರ್ಚಾ, ವೈದ್ಯಕೀಯ ಪ್ರಕೋಷ್ಟ್ ವತಿಯಿಂದ ಮುಕ್ಕ ಶ್ರೀನಿವಾಸ ಇನ್ ಸ್ಟಿಟ್ಯೂಟ್ ಅಪ್ ಡೆಂಟಲ್ ಸಯನ್ಸ್ ಸಹಯೋಗದಿಂದ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ಮತ್ತು ದಂತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಮಾತನಾಡಿದರು.

ದ.ಕ. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂಜಾ ಪೈ ಮಾತನಾಡಿ ವಾಜಪೇಯಿ ಆಡಳಿತ ಕಾಲದಲ್ಲಿ ಆದ ಯೋಚನೆ ಮತ್ತು ಯೋಜನೆಗಳು ಅವರ ಮಾರ್ಗದರ್ಶನ ಎಲ್ಲರಿಗೂ ಆದರ್ಶಪ್ರಯವಾಗಿದೆ. ಎಂದರು.

ಈ ಸಂದರ್ಭ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ಮೂಲ್ಕಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಈಶ್ವರ್ ಕಟೀಲ್, ಯುವ ಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಲೀಲಾವತಿ ರಾವ್, ಕೆ. ಭುವನಾಭಿರಾಮ ಉಡುಪ, ವೈದ್ಯಾಕಾರಿ ಶ್ರೀನಿ, ಗುರುರಾಜ ಮಲ್ಲಿಗೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-25121609

 

Comments

comments

Comments are closed.

Read previous post:
Kinnigoli-25121608
ಪಂಜ : ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಪಂಜ ಕೊಯಿಕುಡೆ ಶ್ರೀ ವಿಠೋಭ ಭಜನಾ ಮಂಡಳಿಯ 58ನೇ ವಾರ್ಷಿಕ ಭಜನಾ ಮಂಗಲೋತ್ಸವ ಶನಿವಾರ ಸೂರ್ಯೋದಯದಿಂದ ಮೊದಲ್ಗೊಂಡು ಸೂರ್ಯಾಸ್ತಮಾನದವರೆಗೆ ನಡೆಯಿತು.

Close