ಕನ್ನಡ ಶಾಲೆಗಳ ಅಬಿವೃದ್ದಿಗೆ ಸರಕಾರ ಬದ್ದ

ಮುಲ್ಕಿ: ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಕನ್ನಡ ಶಾಲೆಗಳ ಅಬಿವೃದ್ದಿಗೆ ಸರಕಾರ ಬದ್ದವಾಗಿದೆ ಎಂದು ಮಾಜೀ ಸಚಿವ ಹಾಗೂ ಮೂಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು. ಅವರು ಕೊಲೆಕಾಡಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೆಪಿಎಸ್‌ಕೆ ಸ್ಮಾರಕ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ವಿಜಯಾ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷೆ ಶಮೀನಾ ಆಳ್ವ ಮಾತನಾಡಿ ಕನ್ನಡ ಮಾದ್ಯಮಕ್ಕೆ ಹೆತ್ತವರ ಪ್ರೋತ್ಸಾಹ ಅಗತ್ಯ ಮಕ್ಕಳನ್ನು ಗುಣವಂತರನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಹೇಳಿದರು.ಅತಿಕಾರಿಬೆಟ್ಟು ಗ್ರಾಮಪಂಚಾಯತಿ ಅಧ್ಯಕ್ಷೆ ಶಾರದಾ ವಸಂತ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಂಗಾಧರ ಶೆಟ್ಟಿ ,ಶಾಲಾಭಿವೃದ್ದಿ ಸಮಿತಿಯ ಬಿಆರ್ ರಾವ್,ಗಿರಿಧರ ಕಾಮತ್ ಕೆದುಬರಿ,ಕರಾಟೆ ತರಬೇತುದಾರ ಸತೀಶ ಬೆಳ್ಮಣ್ಣುಲ್ಕಿ ವಿಜಯ ರೈತ ಸೇವಾ ಸಂಘದ ರಂಗನಾಥ ಶೆಟ್ಟಿ,ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಹರೀಶ್ ಶೆಟ್ಟಿ ಶಿಮಂತೂರು,ನಿವೃತ್ತ ಶಿಕ್ಷಕ ಅಚ್ಯುತ ಮಾಸ್ಟರ್‌ಕೊಲೆಕಾಡಿ,ಶಾಲಾ ಪ್ರಾಥಮಿಕ ಹಾಗೂ ಪ್ರೌಢ ಮುಖ್ಯೋಪಾದ್ಯಾಯರಾದ ಅಂಬರೀಷ ಲಮಾಣಿ,ನಾಗಭೂಷಣ ರಾವ್ ದಿನೇಶ್ಚಂದ್ರ ಅಜಿಲ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿ ಸುಮಾರು ಒಂದುವರೆ ಲಕ್ಷ ವೆಚ್ಚದಲ್ಲಿ ಕೊಲೆಕಾಡಿ ಕೆಪಿಎಸ್‌ಕೆ ಶಾಲೆಯಲ್ಲಿ ನಿರ್ಮಾಣಗೊಂಡ ಶೌಚಾಲಯವನ್ನು ಅಭಯಚಂದ್ರ ಉದ್ಘಾಟಿಸಿದರು ಹಾಗೂ ಕರಾಟೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾದನೆ ಮಾಡಿದ ಶಾಲಾ ವಿದ್ಯಾರ್ಥಿ ಪ್ರದೀಪ ಆಚಾರ‍್ಯ ಶಿಮಂತೂರು ಹಾಗೂ ತುಳು ಸಾಹಿತ್ಯ ಅಕೆಡೆಮಿ ಪ್ರಶಸ್ತಿ ಪಡೆದ ಸಾಧಕ ದೈವ ಪಾತ್ರಿ ಕುಟ್ಟಿ ಪಂಬದರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.ಶಿಕ್ಷಕಿ ಗ್ರೆಟ್ಟಾ ರೋಡ್ರಿಗಸ್ ಸ್ವಾಗತಿಸಿದರು.ನೋಣಯ್ಯ ರೇಂಜಾಳ ಕಾರ‍್ಯಕ್ರಮ ನಿರೂಪಿಸಿದರು.ಶಂಕುಂತಳ ಶೆಟ್ಟಿ ಧನ್ಯವಾದ ಅರ್ಪಿಸಿದರು.ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ‍್ಯಕ್ರಮಗಳು ನಡೆಯಿತು.

Kinnigoli-2412201602

Comments

comments

Comments are closed.

Read previous post:
Kinnigoli-2412201601
ಯುವ ಸಂಘಟನೆಗೆ NSS ಮಾದರಿ

ಮುಲ್ಕಿ:ಯುವಕರು ಉತ್ತಮ ಸಂಘಟನೆಯಲ್ಲಿ ತೊಡಗಿ ದೇಷಕ್ಕೆ ಮಾದರಿಯಗಲು ಎನ್‌ಎಸ್‌ಎಸ್ ಸಹಾಯಕಾರಿ ಎಂದು ಶಾಸಕ ಅಭಯಚಂದ್ರ ಹೇಳಿದರು. ಅವರು ಪದವಿ ಪುರ್ವ ಶಿಕ್ಷಣ ಇಲಾಖೆ ಬೆಂಗಳೂರು ರಾಷ್ಟ್ರೀಯ ಸೇವಾ...

Close