ಕ್ರಿಸ್ಮಸ್ ಆಚರಣೆ ಶಾಂತಿಯ ಸಂಕೇತ

ಮುಲ್ಕಿ: ಸಮಾಜದಲ್ಲಿ ಜಾತಿ ಬೆದಗಳನ್ನು ಮರೆತು ಸಹೋದರರಂತೆ ಬಾಳುವ ನಿಟ್ಟಿನಲ್ಲಿ ಸರ್ವದರ್ಮ ಆಚರಣೆಗಳು ಅನಿವಾರ್ಯವಾಗಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಸಂತ ಬೆರ್ನಾಡ್ ತಿಳಿಸಿದರು.ಅವರು ಕಾರ್ನಾಡ್ ಸಿ.ಯಸ್.ಐ ಶಿಕ್ಷಣ ಸಂಸ್ಥೆಯಲ್ಲಿ ಜರಗಿದ ಕ್ರಿಸ್ಮಸ್ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ನಾಡ್ ಅಮಲೋದ್ಭವ ಚರ್ಚ್‌ನ ಧರ್ಮಗುರುಗಳಾದ ರೆ. ಫಾ. ಫ್ರಾನ್ಸಿಸ್ ಝೇವಿಯರ್ ಗೋಮ್ಸ್ ಮಾತನಾಡಿ ಸಮಾನತೆ, ಸಹೋದರತೆಯನ್ನು ನಾವೆಲ್ಲರೂ ಅನುಸರಿಸಬೇಕಾಗಿದೆ. ಇತರರನ್ನು ಗೌರವಿಸುವ ಗುಣ ನಮ್ಮಲ್ಲಿ ಬೆಳೆಸಬೇಕಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ಥಳೀಯ ಸಭಾಪಾಲನ ಸಮಿತಿಯ ಅಧ್ಯಕ್ಷರಾದ ರೆ. ಎಡ್ವರ್ಡ್ ಕರ್ಕಡ ಕ್ರಿಸ್ಮಸ್ ಹಬ್ಬದ ಆಚರಣೆ ಮತ್ತು ಮಹತ್ವದ ಬಗ್ಗೆ ತಿಳಿಸಿ ಶುಭಹಾರೈಸಿದರು.ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಂಬಯಿಯ ಸಂಜೀತ್ ಶೆಟ್ಟಿ, ಬಹರೈನ್‌ನ ಅಮೇರಿಕನ್ ನೇವಲ್ ಬೇಸ್‌ನ ಗೋಡ್‌ಫ್ರೆ ಹೆನ್ರಿ ಮತ್ತು ಅವರ ಧರ್ಮಪತ್ನಿ ರಾಣಿ ಹೆನ್ರಿ ಭಾಗವಹಿಸಿದ್ದರು.ಸಮಾರಂಭದಲ್ಲಿ ಶಾಲಾಸಂಚಾಲಕರಾದ ಪ್ರೊ. ಸ್ಯಾಮ್ ಮಾಬೆನ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಹರ್ಷರಾಜ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಂಜನ್ ಜತ್ತನ್ನ ಮತ್ತು ಮನೋರಮ ಹೆನ್ರಿ, ಯು.ಬಿ.ಯಂ.ಸಿ ಮತ್ತು ಸಿ.ಯಸ್.ಐ ಶಾಲೆಯ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಗ್ಲಾಡಿಸ್ ಸುಕುಮಾರಿ, ಶ್ರೀಮತಿ ಝೀಠ ಮೆಂಡೋನ್ಸ ಉಪಸ್ಥಿತರಿದ್ದರು.
ಶಾಲಾ ಸಂಚಾಲಕರಾದ ಪ್ರೊ. ಸ್ಯಾಮ್ ಮಾಬೆನ್ ಸ್ವಾಗತಿಸಿ, ಸಿ.ಯಸ್.ಐ ಶಾಲೆಯ ಮುಖ್ಯ ಶಿಕ್ಷಕಿ ಝೀಠ ಮೆಂಡೋನ್ಸ ವಂದಿಸಿzರು. ಕಾರ್ಯಕ್ರಮವನ್ನು ಶಿಕ್ಷಕರಾದ ಫ್ಲಾವಿಯಾ ಮತ್ತು ಹರಿಶ್ಚಂದ್ರ ನಿರ್ವಹಿಸಿದರು.ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು

Kinnigoli-2412201603

Comments

comments

Comments are closed.

Read previous post:
Kinnigoli-2412201602
ಕನ್ನಡ ಶಾಲೆಗಳ ಅಬಿವೃದ್ದಿಗೆ ಸರಕಾರ ಬದ್ದ

ಮುಲ್ಕಿ: ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಕನ್ನಡ ಶಾಲೆಗಳ ಅಬಿವೃದ್ದಿಗೆ ಸರಕಾರ ಬದ್ದವಾಗಿದೆ ಎಂದು ಮಾಜೀ ಸಚಿವ ಹಾಗೂ ಮೂಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಹೇಳಿದರು....

Close