ಯುವ ಸಂಘಟನೆಗೆ NSS ಮಾದರಿ

ಮುಲ್ಕಿ:ಯುವಕರು ಉತ್ತಮ ಸಂಘಟನೆಯಲ್ಲಿ ತೊಡಗಿ ದೇಷಕ್ಕೆ ಮಾದರಿಯಗಲು ಎನ್‌ಎಸ್‌ಎಸ್ ಸಹಾಯಕಾರಿ ಎಂದು ಶಾಸಕ ಅಭಯಚಂದ್ರ ಹೇಳಿದರು. ಅವರು ಪದವಿ ಪುರ್ವ ಶಿಕ್ಷಣ ಇಲಾಖೆ ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಮೂಲ್ಕಿ ಇದರ ಸಹಭಾಗಿತ್ವದಲ್ಲಿ ‘ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ಯುವಕರು’ ಎಂಬ ಬರಹದೊಂದಿಗೆ ಅತಿಕಾರಿಬೆಟ್ಟು ಗ್ರಾಮದ ನಡಿಬೆಟ್ಟು ಸಭಾಭವನದಲ್ಲಿ ವಾರ್ಷಿಕ ವಿಶೇಷ ಶಿಬಿರ-2016-17 ನ್ನು ಉದ್ಘಾಟಿಸಿ ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಧೂಮಾವತಿ ದೈವಸ್ಥಾನದ ನಡಿಬೆಟ್ಟು ಆಡಳಿತ ಮೊಕ್ತೇಸರ ದೆಪ್ಪುಣಿಗುತ್ತು ಜಯರಾಮ ಶೆಟ್ಟಿ ವಹಿಸಿದ್ದರು.ವೇದಿಕೆಯಲ್ಲಿ ವೇದಮೂರ್ತಿ ವಾಧಿರಾಜ ಉಪಾದ್ಯಾಯ ಕೊಲೆಕಾಡಿ,ಅತಿಕಾರಿಬೆಟ್ಟು ಗ್ರಾ.ಪಂ, ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ಶಾಲಾಭಿವೃದ್ದಿ ಸಮಿತಿಯ ಡಾ.ಅಚ್ಯುತ ಕುಡ್ವ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್, ಉದ್ಯಮಿ ದನಂಜಯ ಕೋಟ್ಯಾನ್ ಮಟ್ಟು, ರಾಮದಾಸ್ ಶೆಟ್ಟಿ ಪುತ್ತೂರು ಬಾಳಿಕೆ ಮನೆ.ಅತಿಕಾರಿಬೆಟ್ಟು ಗ್ರಾ.ಪಂ. ಸದಸ್ಯ ಮನೋಹರ ಕೋಟ್ಯಾನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿದರು ಬಳಿಕ ವೇದಮೂರ್ತಿ ವಾಧಿರಾಜ ಉಪಾದ್ಯಾಯ ಕೊಲೆಕಾಡಿಯವರಿಂದ ದಿಕ್ಸೂಚಿ ಬಾಷಣ ನಡೆಯಿತು.

Kinnigoli-2412201601

 

Comments

comments

Comments are closed.

Read previous post:
ಕಿನ್ನಿಗೋಳಿ : ವಾಜಪೇಯಿ ಜನ್ಮ ದಿನಾಚರಣೆ

ಕಿನ್ನಿಗೋಳಿ : ದೇಶ ಕಂಡ ಅದ್ಭುತ ಅಜಾತ ಶತ್ರು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆಯನ್ನು ಜನಪಯೋಗಿಯಾದ ಉಚಿತ ವೈದ್ಯಕೀಯ ಶಿಬಿರ ಹಾಗೂ ಆರೋಗ್ಯ ರಕ್ಷಣೆಯನ್ನು ಜನರಲ್ಲಿ...

Close