ಅಹಂ ಮನುಷ್ಯನ ಮಾನಸಿಕ ನೆಮ್ಮದಿ ಕೆಡಿಸುತ್ತದೆ

ಕಿನ್ನಿಗೋಳಿ : ಅಹಂ ಮನುಷ್ಯನ ಮಾನಸಿಕ ನೆಮ್ಮದಿ ಕೆಡಿಸಿ ಅದು ಧರ್ಮಾಚರಣೆಯಲ್ಲೂ ಪರಿಣಾಮ ಬೀರುತ್ತದೆ. ಎಲ್ಲಾ ಮತಗಳ ಧ್ಯೇಯ ಒಂದಾಗಿದ್ದು ಹಬ್ಬ ಹರಿದಿನಗಳನ್ನು ಒಟ್ಟಾಗಿ ಆಚರಿಸಿದಾಗ ಸೌಹಾರ್ಧತೆ ಬೆಳೆಯುತ್ತದೆ. ಎಂದು ಬಹುಭಾಷಾ ಸಾಹಿತಿ ಮಹಮ್ಮದ್ ಬಡ್ಡೂರು ಹೇಳಿದರು.
ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿ, ಕಿನ್ನಿಗೋಳಿ ಕೊಸೆಸಮ್ಮ ಚರ್ಚ್‌ನ ಸಂತ ಮೈಕಲ್, ಸುಕುರ್ ಮಾತೆ ವಾಳೆ, ಸಂತ ರಫಾಯೆಲ್ ವಾಳೆಗಳ ಸಹಯೋಗದಲ್ಲಿ ಪದ್ಮನೂರು ಸಾರ್ವಜನಿಕ ಬಯಲಾಟ ಸಮಿತಿಯ ಸಭಾಂಗಣದಲ್ಲಿ ಭಾನುವಾರ ನಡೆದ 51ನೇ ಸಾರ್ವಜನಿಕ ಕ್ರಿಸ್‌ಮಸ್ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಸಮಾಜ ಸೇವಕಿ ವನಜ ಶೆಟ್ಟಿಗಾರ್ತಿ ಅವರನ್ನು ಸನ್ಮಾನಿಸಲಾಯಿತು.
ಯಕ್ಷಗಾನ ಬಯಲಾಟ ಸಮಿತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಾದ ನವ್ಯಾ ಮತ್ತು ಅಜಿತ್ ಅವರಿಗೆ ವಿದ್ಯರ್ಥಿ ವೇತನ ನೀಡಲಾಯಿತು. 10 ಮಂದಿಗೆ ಆರೋಗ್ಯ ವಿಮಾ ಯೋಜನೆ, 10 ಮನೆಗಳಿಗೆ ಅಕ್ಕಿ ವಿತರಿಸಲಾಯಿತು. ಅರ್ಹರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಧನ ಸಹಾಯ ಮಾಡಲಾಯಿತು.
ಪದ್ಮನೂರು ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿ ಚರ್ಚ್ ಪ್ರಧಾನ ಧರ್ಮಗುರು ಫಾ. ವಿನ್ಸಂಟ್ ಮೊಂತೆರೊ ಕ್ರಿಸ್‌ಮಸ್ ಸಂದೇಶ ನೀಡಿದರು. ಕಟೀಲು ಪ್ರೌಢ ಶಾಲಾ ಶಿಕ್ಷಕ ಸಾಯಿನಾಥ ಶೆಟ್ಟಿ ಉಪನ್ಯಾಸ ನೀಡಿದರು.
ಸಮಿತಿಯ ಪಿ. ಸತೀಶ್ ರಾವ್, ಜೊತೆ ಕಾರ್ಯದರ್ಶಿ ವಸಂತ್, ಕೋಶಾಧಿಕಾರಿ ಶೇಖರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಮೆಲಿಟಾ ಡಿಸೋಜ ಸ್ವಾಗತಿಸಿದರು. ಅಶೋಕ ಕುಮಾರ್ ಶೆಟ್ಟಿ ವಂದಿಸಿದರು. ಜ್ಯೋತಿ ಪಾಯಸ್ ಹಾಗೂ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-2612201601

Comments

comments

Comments are closed.

Read previous post:
Kinnigoli-2412201603
ಕ್ರಿಸ್ಮಸ್ ಆಚರಣೆ ಶಾಂತಿಯ ಸಂಕೇತ

ಮುಲ್ಕಿ: ಸಮಾಜದಲ್ಲಿ ಜಾತಿ ಬೆದಗಳನ್ನು ಮರೆತು ಸಹೋದರರಂತೆ ಬಾಳುವ ನಿಟ್ಟಿನಲ್ಲಿ ಸರ್ವದರ್ಮ ಆಚರಣೆಗಳು ಅನಿವಾರ್ಯವಾಗಿದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ವಸಂತ ಬೆರ್ನಾಡ್ ತಿಳಿಸಿದರು.ಅವರು ಕಾರ್ನಾಡ್...

Close