ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಕಟೀಲು ಸಂಸ್ಥೆ

ಕಿನ್ನಿಗೋಳಿ : ಕಟೀಲು ದೇವಳದ ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಮೌಲ್ಯಯುತ ಶಿಕ್ಷಣ ನೀಡುತ್ತಿವೆ. ದೆ. ರಾಜ್ಯದ 32 ಪ್ರೌಢಶಾಲೆಗಳಿಗೆ ಎ ಗ್ರೇಡ್ ಮಾನ್ಯತೆ ದೊರಕ್ಕಿದ್ದು, ಅವುಗಳಲ್ಲಿ ಗ್ರಾಮೀಣ ಭಾಗದ ಕಟೀಲು ಪ್ರೌಢಶಾಲೆ ಒಂದಾಗಿದ್ದು ಇಲ್ಲಿ ಕನ್ನಡ ಮಾಧ್ಯಮಕ್ಕೆ ಕೊರತೆಯಿರದೆ ಹೆಚ್ಚಿನ ಸೀಟುಗಳ ಬೇಡಿಕೆಯಿರುವುದು ಸಂತಸದ ವಿಷಯ ಎಂದು ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳವಾರ ನಡೆದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
2016 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಮಂಗಳೂರು ತಾಲೂಕು ಮಟ್ಟದಲ್ಲಿ ಅತ್ಯಧಿಕ ಅಂಕ ಗಳಿಸಿದ ಮನು ಕಶ್ಯಪ್ ಅವರನ್ನು ಅಭಿನಂದಿಸಲಾಯಿತು. ನಿವೃತ್ತ ಶಿಕ್ಷಕ ಅಲೆಕ್ಸ್ ತಾವ್ರೋ ದಂಪತಿಗಳನ್ನು ಗೌರವಿಸಲಾಯಿತು. ಶಾಲೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿಗಳು ಹಾಗೂ ಕ್ರೀಡೆಯಲ್ಲಿ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಶಾಲೆಯ ವಾರ್ಷಿಕಾಂಕ ಭ್ರಮರವಾಣಿಯನ್ನು ಬಿಡುಗಡೆಗೊಳಿಸಿದರು.
ಮೂಡುಬಿದ್ರೆ ಜೈನ ಶಾಲಾ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಪ್ರಧಾನ ಭಾಷಣಗೈದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಟೀಲು ದೇವಳದ ಮೊಕ್ತೇಸರ ಡಾ. ರವೀಂದ್ರನಾಥ ಪೂಂಜ, ಉದ್ಯಮಿ ಗಿರೀಶ್ ಎಂ.ಶೆಟ್ಟಿ, ಸಿವಿಲ್ ಏವಿಯೇಷನ್ ನಿರ್ದೇಶಕ ಜಗದೀಶ ಬಲ್ಲಾಲಬೈಲು, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ವಿದ್ಯಾರ್ಥಿ ನಾಯಕ ನವನೀತ್, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ರಾಬರ್ಟ್ ರುಸಾರಿಯೋ, ಶಿಕ್ಷಕ ಸಾಯಿನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವೈಸ್ ಪ್ರಿನ್ಸಿಪಾಲ್ ಸೋಮಪ್ಪ ಅಲಂಗಾರು ಸ್ವಾಗತಿಸಿದರು. ಉಮೇಶ್ ನೀಲಾವರ ಕಾರ್ಯಕ್ರಮ ನಿರೂಪಿಸಿದರು.

Kinnigoli-2812201602 Kinnigoli-2812201603 Kinnigoli-2812201604

Comments

comments

Comments are closed.

Read previous post:
ಕಟೀಲು- ಎತ್ತಿನ ಹೊಳೆ ಬಗ್ಗೆ ನಳೀನ್ ಹೇಳಿಕೆ

ಕಿನ್ನಿಗೋಳಿ : ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಎತ್ತಿನ ಹೊಳೆ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೋಸದ ಶೂಲಕ್ಕೆ ಬಲಿ ಕೊಡುತ್ತಿದ್ದಾರೆ ಎಂದು ದ.ಕ ಲೋಕ ಸಭಾ ಸದಸ್ಯ ನಳೀನ್...

Close