ಕಟೀಲು- ಎತ್ತಿನ ಹೊಳೆ ಬಗ್ಗೆ ನಳೀನ್ ಹೇಳಿಕೆ

ಕಿನ್ನಿಗೋಳಿ : ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಎತ್ತಿನ ಹೊಳೆ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಮೋಸದ ಶೂಲಕ್ಕೆ ಬಲಿ ಕೊಡುತ್ತಿದ್ದಾರೆ ಎಂದು ದ.ಕ ಲೋಕ ಸಭಾ ಸದಸ್ಯ ನಳೀನ್ ಕುಮಾರ್ ಕಟೀಲು ಮಂಗಳವಾರ ಕಟೀಲಿನಲ್ಲಿ ಪ್ರೌಢ ಶಾಲಾ ವಾರ್ಷಿಕೋತ್ಸವಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.
ಯೋಜನೆಯ ಪ್ರಾರಂಭದಲ್ಲಿ ಮಾಡಿದ್ದ ಅವೈಜ್ಞಾನಿಕ ಸುಳ್ಳು ಡಿ ಪಿ ಆರ್ ಗಳನ್ನು ಸೋಮವಾರ ನಡೆದ ಸಭೆಯಲ್ಲಿ ವರ್ಣನೆ ಮಾಡಿದ್ದಾರೆ. ಕೋರ್ಟು ತೀರ್ಮಾನ ಆಗುವವರೆಗೂ ಕಾಮಗಾರಿಯನ್ನು ತಡೆ ಹಿಡಿಯಬೇಕೆಂಬ ಹೋರಾಟಗಾರರ ಹಾಗೂ ಕರಾವಳಿ ಭಾಗದ ಜನ ಪ್ರತಿನಿಧಿಗಳ ಮನವಿಯನ್ನು ಸೌಜನ್ಯ ತೋರಿಸದೆ ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಅಧಿಕಾರ ದಾಹ ಮತ್ತು ಗೂಂಡಾ ವರ್ತನೆ ತೋರಿ ಕರಾವಳಿ ಜನರ ಅಹವಾಲನ್ನು ದಿಕ್ಕರಿಸಿ ಯೋಜನೆಯನ್ನು ಮಾಡಿಯೇ ಸಿದ್ದ ಎಂದು ಸರಕಾರ ಹೇಳುತ್ತಿದೆ. ಯೋಜನೆಗಳ ಬಗ್ಗೆ ಅವರ ಪಕ್ಷದೊಳಗೆ ಜಗಳ, ಅಸಮಧಾನ ವ್ಯಕ್ತವಾಗುತ್ತದೆ. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಕರಾವಳಿ ಜನರನ್ನು ಒಗ್ಗೂಡಿಸಿ ತೀವ್ರ ರೀತಿಯ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

Comments

comments

Comments are closed.

Read previous post:
Kinnigoli-2812201601
ಸತ್ಯ ನಿಷ್ಠೆಯ ಆಚರಣೆಗೆ ದೈವ ದೇವರುಗಳ ಅಭಯ

ಕಿನ್ನಿಗೋಳಿ : ದೈವ ದೇವರುಗಳ ಆಚರಣೆಯಲ್ಲಿ ವಿವಿಧ ಸಂಪ್ರದಾಯಗಳಿದ್ದು ಅದನ್ನು ಸತ್ಯ ನಿಷ್ಠೆಯಿಂದ ಕಟ್ಟು ನಿಟ್ಟಾಗಿ ಪಾಲಿಸಿದಾಗ ಊರಿಗೆ ಹಾಗೂ ಜನರಿಗೆ ದೈವ ದೇವರುಗಳ ಅಭಯ ಸದಾ ಕಾಲ ಇರುತ್ತದೆ...

Close