ಸತ್ಯ ನಿಷ್ಠೆಯ ಆಚರಣೆಗೆ ದೈವ ದೇವರುಗಳ ಅಭಯ

ಕಿನ್ನಿಗೋಳಿ : ದೈವ ದೇವರುಗಳ ಆಚರಣೆಯಲ್ಲಿ ವಿವಿಧ ಸಂಪ್ರದಾಯಗಳಿದ್ದು ಅದನ್ನು ಸತ್ಯ ನಿಷ್ಠೆಯಿಂದ ಕಟ್ಟು ನಿಟ್ಟಾಗಿ ಪಾಲಿಸಿದಾಗ ಊರಿಗೆ ಹಾಗೂ ಜನರಿಗೆ ದೈವ ದೇವರುಗಳ ಅಭಯ ಸದಾ ಕಾಲ ಇರುತ್ತದೆ ಎಂದು ದ.ಕ. ಲೋಕಸಭಾ ಸದಸ್ಯ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವದ ಚೌತಿ ಹಬ್ಬ ಹಾಗೂ ಸಾರ್ವಜನಿಕ ಕೆಂಡಸೇವೆಯ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಕೊಡೆತ್ತೂರು ಮೂಡುದೇವಸ್ಯ ವಿಶ್ವನಾಥ ಶೆಟ್ಟಿ, ಕೊಡೆತ್ತೂರು ಹರಿವೆಕಳ ಗೋಪಾಲ ಮೂಲ್ಯ ಅವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳ ಪ್ರಧಾನ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಕಟೀಲು ದೇವಳ ಆಡಳಿತ ಮೊಕ್ತೇಸರ ಕೊಡೆತ್ತೂರುಗುತ್ತು ಡಾ. ರವೀಂದ್ರನಾಥ ಪೂಂಜ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಸಿವಿಲ್ ಇಂಜಿನಿಯರ್ ತ್ಯಾಗರಾಜ್, ಕಟೀಲು ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಮುಂಬಯಿ ಸಮಿತಿಯ ದಿವಾಕರ್ ಶೆಟ್ಟಿ ಕೆಜಿ ಬೆಟ್ಟು, ಜಯಂತ್ ಶೆಟ್ಟಿ, ಬಾಸ್ಕರ್‌ದಾಸ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಲೋಕೇಶ್ ಶೆಟ್ಟಿ ಬರ್ಕೆ ವಂದಿಸಿದರು. ಸಂದೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-2812201601

Comments

comments

Comments are closed.

Read previous post:
Kinnigoli-26122016010
ಕೊಡೆತ್ತೂರು ಕೆಂಡಸೇವೆ

ಕಿನ್ನಿಗೋಳಿ  : ಕಿನ್ನಿಗೋಳಿ ಸಮೀಪದ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದಲ್ಲಿ ಭಾನುವಾರ ಚೌತಿ ಹಬ್ಬ ಹಾಗೂ ಸಾರ್ವಜನಿಕ ಕೆಂಡಸೇವೆ ನಡೆಯಿತು.  

Close