ರಾಷ್ಟ್ರೀಯ ಸೇವಾ ಯೋಜನಾ ಶಿಬಿರ

ಮೂಲ್ಕಿ: ವಿದ್ಯಾರ್ಥಿಗಳಿಗೆ ಸ್ವಾವಲಂಭನೆ ಹಾಗೂ ನಾಯಕತ್ವದ ಗುಣಗಳನ್ನು ನೀಡುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಬಹಳ ಸಹಕಾರಿ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಕರ್ನಿರೆ ದ,ಕ ಜಿಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ್ಕಿ ವಿಜಯಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶವು ಅಭಿವೃದ್ಧಿ ಪಥದಲ್ಲಿದ್ದು ಯುವ ನಾಯಕತ್ವದ ಅಗತ್ಯವಿದೆ ರಾಷ್ಟ್ರೀಯ ಸೇವಾ ಯೋಜನೆಯ ಮುಖಾಂತರ ಯುವ ಜನರು ಸೌಹಾರ್ದ ಪೂರ್ಣ ವ್ಯಕ್ತಿತ್ವದಿಂದ ನಾಯಕತ್ವದ ಗುಣಗಳನ್ನು ಪಡೆದು ರಾಷ್ಟ್ರ ಕಟ್ಟುವ ಕಾರ್ಯ ನಡೆಸಬೇಕು ಎಂದರು.
ಮುಂಬೈ ಉದ್ಯಮಿ ಮುಂಬೈ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ ಜೀವನದಲ್ಲಿ ಯಶಸ್ಸು ಕಾಣಲು ಶಾಲಾ ಕಾಲೇಜು ದಿನಗಳಲ್ಲಿ ಉತ್ತಮ ವ್ಯಾಸಂಗ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಿಂದ ಮಾತ್ರ ಸಾಧ್ಯ ವಿಜಯಾ ಕಾಲೇಜಿನ ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಿಂದ ಕಲಿತ ನಾಯಕ್ವದ ಗುಣಗಳಿಂದ ಭವಿಷ್ಯ ಜೀವನ ಉತ್ತಮವಾಗಲು ಸಾಧ್ಯವಾಯಿತು ಎಂದರು. ಕರ್ನಿರೆ ಧರ್ಮ ಜಾರಂದಾಯ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕರ್ನಿರೆ ಹರಿಶ್ಚಂದ್ರ ಶೆಟ್ಟಿ ದೀಪ ಬೆಳಗಿಸಿ ಯೋಜನಾ ಶಿಭಿರ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಡಾ.ನಾರಾಯಣ ಪೂಜಾರಿ ವಹಿಸಿದ್ದರು, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಜಿ.ಆಳ್ವಾ,ಅತಿಕಾರಿಬೆಟ್ಟು ಗ್ರಾಮ ಪಂ.ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ಕಿನ್ನಿಗೋಳಿ ಗ್ರಾಮ ಪಂ ಸದಸ್ಯ ದೇವಪ್ರಸಾದ್ ಪುನರೂರು, ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಅನಸೂಯ ಟಿ.ಕರ್ಕೇರಾ, ಕರ್ನಿರೆ ಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ,ತಾಪಂ.ಸದಸ್ಯೆ ರಶ್ಮಿ ಆಚಾರ್ಯ,ಬಳಕುಂಜೆ ಗ್ರಾಮ ಪಂ ಸದಸ್ಯರಾದ ಜಯಲಕ್ಷ್ಮಿ ಮತ್ತು ಪ್ರಭಾಕರ ಶೆಟ್ಟಿ, ಕರ್ನಿರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ,ಶಾಲಾ ಮುಖ್ಯ ಶಿಕ್ಷಕಿ ಪ್ರಭಾವತಿ ಪಿ,ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ವೆಂಕಟೇಶ ಭಟ್, ಕಾರ್ಯದರ್ಶಿಗಳಾದ ಸೌಮ್ಯ ಮತ್ತು ಪ್ರಜ್ವಲ್ ಆಚಾರ್ಯ ಅತಿಥಿಗಳಾಗಿದ್ದರು.ವಿದ್ಯಾರ್ಥಿಗಳಾದ ಸೌಮ್ಯ ಸ್ವಾಗತಿಸಿದರು,ಶಿಲ್ಪಾ.ವಿ.ರಾವ್ ನಿರೂಪಿಸಿದರು ಪ್ರಜ್ವಲ್ ಆಚಾರ್ಯ ವಂದಿಸಿದರು.

Mulki-2812201605

Comments

comments

Comments are closed.

Read previous post:
Kinnigoli-2812201604
ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಕಟೀಲು ಸಂಸ್ಥೆ

ಕಿನ್ನಿಗೋಳಿ : ಕಟೀಲು ದೇವಳದ ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಮೌಲ್ಯಯುತ ಶಿಕ್ಷಣ ನೀಡುತ್ತಿವೆ. ದೆ. ರಾಜ್ಯದ 32 ಪ್ರೌಢಶಾಲೆಗಳಿಗೆ ಎ ಗ್ರೇಡ್ ಮಾನ್ಯತೆ ದೊರಕ್ಕಿದ್ದು, ಅವುಗಳಲ್ಲಿ ಗ್ರಾಮೀಣ ಭಾಗದ ಕಟೀಲು...

Close