ಜ.1 ಪುನರೂರು ಪ್ರತಿಷ್ಠಾನ ಉದ್ಘಾಟನೆ

ಕಿನ್ನಿಗೋಳಿ : ನೂತನವಾಗಿ ಸ್ಥಾಪನೆಗೊಂಡ ಪುನರೂರು ಪ್ರತಿಷ್ಠಾನದ ಉದ್ಘಾಟನಾ ಸಮಾರಂಭ 2017 ಜನವರಿ 1 ರ ಭಾನುವಾರ ಬೆಳಿಗ್ಗೆ 9ಕ್ಕೆ ಪುನರೂರು ಶ್ರೀ ವಿಶ್ವನಾಥ ದೇವಳದ ವಠಾರದಲ್ಲಿ ಜರಗಲಿದೆ. ಕಟೀಲು ದೇವಳ ಅನುವಂಶಿಕ ಅರ್ಚಕ ಕೆ ಲಕ್ಷ್ಮೀ ನಾರಾಯಣ ಆಸ್ರಣ್ಣ ಪುನರೂರು ಪ್ರತಿಷ್ಠಾನವನ್ನು ಉದ್ಘಾಟಿಸಲಿದ್ದು ಧರ್ಮದರ್ಶಿ ಹರಿಕೃಷ್ನ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಪುನರೂರು ದೇವಳ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ ರಾವ್ ಪುನರೂರು, ಎಲ್ಲೂರು ಶ್ರೀ ವಿಶ್ವೇಶ್ವರ ದೇವಳದ ಮಾಜಿ ಮೊಕ್ತೇಸರ ಕುತ್ಯಾರು ಶ್ರೀ ಕೃಷ್ಣಮೂರ್ತಿ ಭಟ್, ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು, ಕಿನ್ನಿಗೋಳಿ ಯುಗಪುರುಷ ಪ್ರದಾನ ಸಂಪಾದಕ ಕೆ ಭುವನಾಭಿರಾಮ ಉಡುಪ, ಕುಂದಾಪುರ ಮೂಡ್ಲಕಟ್ಟೆ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರಿನ್ಸಿಪಾಲ್ ಡಾ. ಮೋಹನ್ ದಾಸ್ ಭಟ್ ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಸಂಚಾಲಕ ಎಂ ಬಿ ಪುರಾಣಿಕ್ ಶುಭಾಶಂಸನೆಗ್ಯೆಯಲಿದ್ದು, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್ ಕೆ ಉಷಾ ರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಉಪಾಧ್ಯಕ್ಷರಾದ ರಾಧಿಕಾ ಸುಧೀರ, ಮಲ್ಲಿಕಾ ಅರವಿಂದ, ಕೋಶಾಧಿಕಾರಿ ಚಂದ್ರಿಕಾ ಸುಧೀರ ಉಪಸ್ಥಿತರಿರುವರು ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-2912201602
ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಸಾಧನೆ ಅಗತ್ಯ

ಕಿನ್ನಿಗೋಳಿ : ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಸಾಧನೆ ಅಗತ್ಯವಾಗಿದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ. ನವೀನ್ ಶೆಟ್ಟಿ ಹೇಳಿದರು. ಕಟೀಲು ಶ್ರೀ...

Close