ಶಾಂಭವಿ ನದಿಗೆ ಸೇತುವೆ ಲೋಕಾರ್ಪಣೆ

ಮೂಲ್ಕಿ: ಗ್ರಾಮೀಣ ಪ್ರದೇಶದ ಮೂಲಕ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಬದ್ದವಾಗಿದ್ದು ಫಲಿಮಾರು ಪ್ರದೇಶದ ಜನರ ಉಪಯೋಗಕ್ಕಾಗಿ 58 ಕೋಟಿ ರೂ ವೆಚ್ಚದ ಬಹುಗ್ರಾಮ ನೀರಿನ ಯೋಜನೆ ಶೀಘ್ರ ಕಾರ್ಯಾರಂಭಗೊಳ್ಳಲಿರುವ ಸುಸಂದರ್ಭದಲ್ಲಿ ನಡಿಕೊಪ್ಪಲ ಮತ್ತು ಫಲಿಮಾರು ಸಂಪರ್ಕ ಸೇತುವೆ ರಚನೆ ಶ್ಲಾಘನೀಯ ಎಂದು ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಮೂಲ್ಕಿ ಅತಿಕಾರಿಬೆಟ್ಟು ಗ್ರಾಮ ವ್ಯಾಪ್ತಿಯ ನಡಿಕೊಪ್ಪಲ ದ್ವೀಪ ಸಂಪರ್ಕಕ್ಕಾಗಿ ಶಾಂಭವಿನದಿಗೆ ಶಾಸಕ ಅಭಯಚಂದ್ರ ಜೈನ್ ರವರ 8ಲಕ್ಷರೂ ಅನುದಾನದಲ್ಲಿ ಸಿಮೆಂಟ್ ಪೈಪ್ ಉಪಯೋಗಿಸಿ ನಿರ್ಮಿಸಲಾದ ಸೇತುವೆಯನ್ನು ಶಾಸಕ ಅಭಯಚಂದ್ರ ಜೈನ್ ರವರ ಜೊತೆಗೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಶಾಸಕ ಅಭಯಚಂದ್ರ ಜೈನ್ ಮಾತನಾಡಿ,ನಡಿಕೊಪ್ಪಲದ ದಿ.ಕೇಶವ ಪೂಜಾರಿಯವರ ನಿರಂತರ ಹೋರಾಟದ ಫಲವಾಗಿ ಈ ದ್ವೀಪ ಪ್ರದೇಶಕ್ಕೆ ಕಾಲುಸಂಕ ನಿರ್ಮಾಣವಾಗಿದ್ದು ಇದೀಗ ಅದನ್ನು ವಿಸ್ತರಿತ ರೂಪದಲ್ಲಿ ವಾಹನ ಸಂಚರಿಸುವ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕೊಲ್ಲೂರು ಬಹುಗ್ರಾಮ ನೀರಿನ ಯೋಜನೆಗೆ ಸಹಕಾರಿಯಾಗಿ ಮತ್ತು ಶಾಂಭವಿ ನದಿಯಲ್ಲಿ ಉಪ್ಪು ನೀರು ತಡೆಗಾಗಿ ಮಟ್ಟು ಅಂಗಡಿ ಪ್ರದೇಶದಲ್ಲಿ ರೂ 10ಕೋಟಿ ವೆಚ್ಚದಲ್ಲಿ ಉಪ್ಪು ನೀರು ತಡೆ ಕಿಂಡಿ ಆಣೆಕಟ್ಟು ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಉಭಯ ಶಾಸಕರನ್ನು ಸಮಾಜಕ್ಕೆ ನೀಡಿದ ಉತ್ತಮ ಕೊಡುಗೆಗಾಗಿ ಅಭಿನಂದಿಸಿದರು.
ಈ ಸಂದರ್ಭ ಜಿ.ಪಂ ಇಂಜಿನಿಯರ್ ಪ್ರಶಾಂತ್ ಆಳ್ವಾ,ತಾಪಂ.ಸದಸ್ಯ ದೀನೇಶ್ ಪೂಜಾರಿ, ಫಲಿಮಾರು ಗ್ರಾಮ ಪಂ.ಅಧ್ಯಕ್ಷ ಜಿತೇಂದ್ರ ಪುರ್ತಾದೊ, ಅತಿಕಾರಿ ಬೆಟ್ಟು ಗ್ರಾಮ ಪಂ.ಅಧ್ಯಕ್ಷೆ ಶಾರದಾ ವಸಂತ್, ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ಸದಸ್ಯ ದಯಾನಂದ ಕೋಟ್ಯಾನ್ ಮಟ್ಟು, ಪ್ರಮೋದ್ ಕುಮಾರ್,ಜನಾರ್ದನ ಬಂಗೇರ, ಬಿ.ಎಂ.ಆಸೀಪ್, ಮಹಾಭಲ ಸನಿಲ್, ವಸಂತ ಸುವರ್ಣ, ಪುತ್ತುಬಾವು, ಹಸನ್ ಬಶೀರ್ ಕುಳಾಯಿ, ಅಶೋಕ್ ಪೂಜಾರ್, ಗೊಳ್ಳಾಲಪ್ಪ, ವೀರಯ್ಯ ಹಿರೇಮಠ್, ವಿಶ್ವನಾಥ, ತನಿಯ ಪೂಜಾರಿ, ವಿಜಯ ಸುವರ್ಣ, ಗಣೇಶ್ ಪೂಜಾರಿ, ಉತ್ತಮ್ ಪೂಜಾರಿ, ಶಿವಾನಂದ ಆರ್.ಕೆ, ಮಂಜುನಾಥ ನಾಯ್ಕ, ಸುಬ್ರಮಣ್ಯ ಶೆಣೈ, ಮುರಳಿದರ ಕುಂದರ್, ಸಂತೋಷ್, ಮೋಹನ ಪೂಜಾರಿ, ಲೋಕೇಶ್ ಕೋಟ್ಯಾನ್, ಮಧುಕರ ಅಮೀನ್ ಮತ್ತಿರರರು ಉಪಸ್ಥಿತರಿದ್ದರು.

ದಯಾನಂದ ಅಮೀನ್ ಮಟ್ಟು ನಿರೂಪಿಸಿ ವಂದಿಸಿದರು.

Kinnigoli-2812201601

Comments

comments

Comments are closed.

Read previous post:
Mulki-2812201605
ರಾಷ್ಟ್ರೀಯ ಸೇವಾ ಯೋಜನಾ ಶಿಬಿರ

ಮೂಲ್ಕಿ: ವಿದ್ಯಾರ್ಥಿಗಳಿಗೆ ಸ್ವಾವಲಂಭನೆ ಹಾಗೂ ನಾಯಕತ್ವದ ಗುಣಗಳನ್ನು ನೀಡುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಬಹಳ ಸಹಕಾರಿ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು. ಕರ್ನಿರೆ ದ,ಕ ಜಿಪಂ ಸರಕಾರಿ...

Close