ಕಿಲ್ಪಾಡಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ : ಕಿಲ್ಪಾಡಿ ಗ್ರಾಮ ಪಂಚಾಯಿತಿ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೆಂಚನಕೆರೆ ದ.ಕ. ಜಿಲ್ಲಾ ಪಂಚಾಯಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೃಷಿ ಇಲಾಖೆಯಲ್ಲಿ ಕಾಲ ಕಾಲಕ್ಕೆ ವಿತರಿಸುವ ಭತ್ತ ಹಾಗೂ ಧಾನ್ಯಗಳ ಬೀಜಗಳು ಸಿಗುತ್ತಿಲ್ಲ. ಇಲಾಖೆ ಸರಿಯಾದ ಮಾಹಿತಿ ಯಾಕೆ ನೀಡುತ್ತಿಲ್ಲ? ಮುಂದಿನ ವರ್ಷ ನೀಡಲಾಗುವುದು, ಮೇಲಾಧಿಕಾರಿಗಳ ಬಳಿ ಕೇಳಿ ಎಂಬ ಹಾರಿಕೆಯ ಉತ್ತರ ಬರುತ್ತದೆ ಎಂದು ಗ್ರಾಮಸ್ಥ ಕೆನ್ಯೂಟ್ ಆರಾಹ್ನ ಪಂಚಾಯಿತಿ ಸಭೆಯಲ್ಲಿ ಅಹವಾಲು ಹೇಳಿದಾಗ ಇಲಾಖೆ ಸರಬರಾಜು ಆಗಿಲ್ಲವಾದ್ದರಿಂದ ನಮಗೆ ಗ್ರಾಮಸ್ಥರಿಗೆ ಪೊರೈಸಲು ಕಷ್ಟ ಸಾಧ್ಯವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ಬಂದದ್ದನ್ನು ಮೊದಲು ಬಂದವರಿಗೆ ಆದ್ಯತೆ ಪ್ರಕಾರ ನೀಡಲಾಗಿದೆ. ಎಂದು ಇಲಾಖಾಧಿಕಾರಿ ಗಂಗಾದೇವಿ ಮಾಹಿತಿ ನೀಡಿದರು.

ಕುಬೆವೂರು ಬಳಿ ನೀರಿನ ಸಮಸ್ಯೆ ವಿಪರೀತವಾಗಿದ್ದು ಯಾವುದೇ ಮನವಿಗೆ ಪಂಚಾಯಿತಿ ಸ್ಪಂದನವಿಲ್ಲ ಎಂದು ಲಾರೆನ್ಸ್ ರೆಬೆಲ್ಲೊ ದೂರಿಕೊಂಡಾಗ ಉತ್ತರಿಸಿದ ಪಂಚಾಯಿತಿ ಆಡಳಿತ ಕೆಂಚನಕೆರೆ ಕೊಳವೆ ಬಾವಿಯಲ್ಲಿ ನೀರಿನ ಸಮಸ್ಯೆ ಇದೆ ಮುಂದೆ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸಂಪರ್ಕ ಶೀಘ್ರದಲ್ಲಿ ಆಗುತ್ತದೆ ಆನಂತರ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಉತ್ತರಿಸಿತು.

ರಾಜ್ಯ ಹೆದ್ದಾರಿ ಮೂಲ್ಕಿ ಕಿನ್ನಿಗೋಳಿ ಪೊಳಲಿ ರಸ್ತೆ ಅಗಲೀಕರಣದ ಬಗ್ಗೆ ಮಾಹಿತಿ ಬೇಕು ಹಾಗೂ ಎಷ್ಟು ಅಗಲ ಆಗುತ್ತೆ, ರಸ್ತೆ ಅಗಲವಾದರೆ ಗ್ರಾಮ ಪಂಚಾಯಿತಿ ಕಟ್ಟಡ ರಸ್ತೆಗಗಿ ಬಿಟ್ಟುಕೊಡಬೇಕಾಗಿ ಬರುತ್ತದೆ ಇದಕ್ಕೇನು ಪರಿಹಾರ ಎಂದು ಗ್ರಾಮಸ್ಥ ನರೇಂದ್ರ ಕೆರೆಕಾಡು ಕೇಳಿದಾಗ ಪಂಚಾಯಿತಿರಾಜ್ ಇಂಜಿನಿಯರ್ ಪ್ರಶಾಂತ್ ಆಳ್ವ ಮಾತನಾಡಿ ಈ ಬಗ್ಗೆ ಸಷ್ಟ ಮಾಹಿತಿ ಇಲ್ಲ ಲೋಕೋಪಯೋಗಿ ಇಲಾಖಾ ಅಡಿಯಲ್ಲಿ ಬರುತ್ತದೆ ಎಂದರು. ಕುಬೆವೂರು ಬಳಿ ಸರಕಾರಿ ಜಾಗ ಇದ್ದು ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು ಹೊಸ ಕಟ್ಟಡ ಕಟ್ಟುವ ಬಗ್ಗೆ ಯೋಚನೆ ಮಾಡಲಾಗುವುದು ಎಂದು ಪಿಡಿಒ ಹರಿಶ್ಚಂದ್ರ ಹೇಳಿದರು.
ಪ್ರತಿ ಗ್ರಾಮ ಸಭೆಗೆ ಹೆಚ್ಚಿನ ಇಲಾಖಾಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಕಳೆದ ಗ್ರಾಮ ಸಭೆಯಲ್ಲಿ ಇದರ ಬಗ್ಗೆ ನಿರ್ಣಯ ಮಾಡಲಾಗಿದ್ದರೂ ಈ ಬಾರಿಯೂ ಇಲಾಖಾಧಿಕಾರಿಗಳು ಗೈರುಹಾಜರಾಗಿದ್ದಾರೆ ಪಂಚಾಯಿತಿ ನಿರ್ಣಯಗಳಿಗೆ ಬೆಲೆಯೇ ಇಲ್ಲವೇ ಎಂದು ಗ್ರಾಮಸ್ಥರು ಅಧಿಕಾರಿಗಳ ನಡವಳಿಕೆ ಬಗ್ಗೆ ಆಕ್ರೋಶಿತರಾಗಿ ಧ್ವನಿವೆತ್ತಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಾಗರತ್ನ ನೋಡಲ್ ಅಧಿಕಾರಿಯಾದ್ದರು.
ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಕಿಣಿ, ಅರಣ್ಯ ಇಲಾಖೆಯ ಸೇಸಪ್ಪ, ಕಂದಾಯ ಇಲಾಖೆಯ ಮಂಜುನಾಥ ಮಾಹಿತಿ ನೀಡಿದರು.
ದ.ಕ. ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ಶರತ್ ಕುಬೆವೂರು, ಕಿಲ್ಪಾಡಿ ಗ್ರಾ. ಪಂ. ಉಪಾಧ್ಯಕ್ಷೆ ಯಶೋದ ಶೆಟ್ಟಿ ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-3112201602

Comments

comments

Comments are closed.

Read previous post:
Kinnigoli-3112201603
 ಮೂಲ್ಕಿ ಸೀಮೆ ಅರಸು ಕಂಬಳ

  ಧಾರ್ಮಿಕ ಪರಂಪರೆಗೆ ಯಾವುದೇ ವಿಘ್ನವಿಲ್ಲ : ಸಾವಂತರು ಹಳೆಯಂಗಡಿ: ಒಂಭತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲಾ ವಿಧಿ ವಿಧಾನವನ್ನು ನಡೆಸಲಾಗಿದೆ....

Close