ಮೂಲ್ಕಿ ಸೀಮೆ ಅರಸು ಕಂಬಳ

 

ಧಾರ್ಮಿಕ ಪರಂಪರೆಗೆ ಯಾವುದೇ ವಿಘ್ನವಿಲ್ಲ : ಸಾವಂತರು
ಹಳೆಯಂಗಡಿ: ಒಂಭತ್ತು ಮಾಗಣೆಯ ಮೂಲ್ಕಿ ಸೀಮೆಯ ಅರಸು ಕಂಬಳಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ಎಲ್ಲಾ ವಿಧಿ ವಿಧಾನವನ್ನು ನಡೆಸಲಾಗಿದೆ. ನ್ಯಾಯಾಂಗದ ಮೇಲಿನ ನಂಬಿಕೆ ವಿಶ್ವಾಸ ಇನ್ನೂ ಜೀವಂತವಾಗಿದ್ದು, ಮುಂದಿನ ದಿನದಲ್ಲಾದರೂ ಕಂಬಳ ಕ್ರೀಡೆ ಗತವೈಭವವನ್ನು ಕಾಣಬಹುದು ಎಂಬುದು ಸೀಮೆಯ ಜನತೆಯ ಆಶಯ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತ ಅರಸು ಹೇಳಿದರು.
ಅವರು ಪಡುಪಣಂಬೂರು ಅರಮನೆಯ ಮೂಲ್ಕಿ ಸೀಮೆಯ ಅರಸು ಕಂಬಳವನ್ನು ಸಾಂಪ್ರದಾಯಿಕ ರೀತಿಯಲ್ಲಿ ಅರಮನೆಯ ಚಂದ್ರನಾಥ ಬಸದಿಯಲ್ಲಿ ವಿಧಿ ವಿಧಾನಕ್ಕೆ ಚಾಲನೆ ನೀಡಿ ಆಶೀರ್ವಚಿಸಿದರು.
ಈ ಸಂದರ್ಭದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಿಗೆ, ಅರಮನೆಯ ಚಂದ್ರನಾಥ ಸ್ವಾಮಿ ಬಸದಿ, ಪದ್ಮಾವತಿ ಅಮ್ಮನವರ ಬಸದಿ, ಪಕ್ಕದ ನಾಗಬನಕ್ಕೆ ವಿಶೇಷ ಪ್ರಾರ್ಥನೆ ನಡೆಸಿ ಕಂಬಳದ ಕರೆಗೆ ದೈವದ ಆರಾಧನೆ ಮೂಲಕ ಬಾಕಿಮಾರು ಗದ್ದೆಯಲ್ಲಿಳಿದು, ಕಂಬಳ ಮಂಜೊಟ್ಟಿಯಲ್ಲಿ ದೀಪವನ್ನು ಬೆಳಗಿಸಿ, ಬಪ್ಪನಾಡು ಬಡುಗುಹಿತ್ಲುವಿನ ದಿ.ಕಾಂತು ಪೂಜಾರಿ ಮತ್ತು ಅರಮನೆಯ ಜೋಡಿ ಕೋಣಗಳ ಸಂಚರಿಸುವಿಕೆಯೊಂದಿಗೆ ಕಂಬಳದ ಸಂಪ್ರದಾಯವನ್ನು ನಡೆಸಿ ಕೊನೆಗೆ ದೈವದ ನರ್ತನ ಮೂಲಕ ಸಮಾಪ್ತಿಗೊಳಿಸಲಾಯಿತು. ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ದಿನಪೂರ್ತಿ ಉಪವಾಸ ವೃತದಲ್ಲಿ ತಮ್ಮನ್ನು ಕಂಬಳದ ದಿನದ ಮಹತ್ವದಲ್ಲಿ ತೊಡಗಿಸಿಕೊಂಡು ಬಂದಂತಹ ಅತಿಥಿಗಳಿಗೆ ಆತಿಥ್ಯವನ್ನು ಅರಮನೆಯಲ್ಲಿ ನೀಡಿದರು.
ಈ ಸಂದರ್ಭದಲ್ಲಿ ಕಂಬಳದ ಪ್ರೋತ್ಸಾಹಕರಾದ ಪಂಜದಗುತ್ತು ಶಾಂತರಾಮ ಶೆಟ್ಟಿ, ಉತ್ರುಂಜೆಗುತ್ತು ಭುಜಂಗ ಎಂ.ಶೆಟ್ಟಿ ಕೊಲ್ನಾಡು, ಬಂಕೀ ನಾಯ್ಗರು, ಅರಮನೆಯ ಗೌತಮ್ ಜೈನ್, ಅರಸು ಕಂಬಳ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ, ಸಮಿತಿಯ ಶಶೀಂದ್ರ ಎಂ. ಸಾಲ್ಯಾನ್, ವಾಸುದೇವ ಶೆಣೈ, ಮನ್ಸೂರ್ ಎಚ್., ನ್ಯಾಯವಾದಿ ಚಂದ್ರಶೇಖರ್, ಉಮೇಶ್ ಪೂಜಾರಿ, ನವೀನ್ ಶೆಟ್ಟಿ ಎಡ್ಮೆಮಾರ್, ದಿನೇಶ್ ಸುವರ್ಣ, ಅಬ್ದುಲ್ ರಜಾಕ್ ಮೂಲ್ಕಿ, ಎಸ್.ಎಸ್.ಸತೀಶ್ ಭಟ್, ಕೆ.ವಿಜಯ್ ಶೆಟ್ಟಿ,
ಉಪಸ್ಥಿತರಿದ್ದರು.

Kinnigoli-3112201603 Kinnigoli-3112201605 Kinnigoli-3112201606 Kinnigoli-3112201607

Comments

comments

Comments are closed.

Read previous post:
Mumbai-3112201601
ವರ್ಲಿ ಅಪ್ಪಾಜಿ ಬೀಡು, ವಾರ್ಷಿಕ ಐಯ್ಯಪ್ಪ ಮಹಾಪೂಜೆ

ಮುಂಬಯಿ : ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಆಯೋಜಿಸಿದ ೨೩ನೇ ವಾರ್ಷಿಕ ಐಯ್ಯಪ್ಪ ಮಹಾಪೂಜೆ ಯು ಡಿ. 25 ರಂದು ನಡೆಯುತು. ಧಾರ್ಮಿಕ ಸಭಾಕಾರ್ಯಕ್ರಮದ...

Close