ವರ್ಲಿ ಅಪ್ಪಾಜಿ ಬೀಡು, ವಾರ್ಷಿಕ ಐಯ್ಯಪ್ಪ ಮಹಾಪೂಜೆ

ಮುಂಬಯಿ : ವರ್ಲಿಯ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್ ಆಯೋಜಿಸಿದ ೨೩ನೇ ವಾರ್ಷಿಕ ಐಯ್ಯಪ್ಪ ಮಹಾಪೂಜೆ ಯು ಡಿ. 25 ರಂದು ನಡೆಯುತು.
ಧಾರ್ಮಿಕ ಸಭಾಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಮರಾಜ ಕ್ಷತ್ರಿಯ ಸಂಘ ದ ಅಧ್ಯಕ್ಷ ರಾಜ್ ಕುಮಾರ್ ಕಾರ್ನಾಡ್, ಗೌರವ ಅತಿಥಿಯಾಗಿ ಜಿ. ಟಿ. ಆಚಾರ್ಯ ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀನಿವಾಸ ಸಾಫಲ್ಯರು ಮಾತನಾಡುತ್ತಾ ಕಷ್ಟದ ಸಮಯದಲ್ಲಿ ಆಕಸ್ಮಿಕವಾಗಿ ನೆರವಾಗುವ ವ್ಯಕ್ತಿ ದೇವರ ಸಮಾನವಾಗುತ್ತಾನೆ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ರಮೇಶ್ ಗುರುಸ್ವಾಮಿಯವರು ಅಪ್ಪಾಜಿ ಬೀಡು, ಕ್ಷೇತ್ರದ ಬಗ್ಗೆ ಮಾತನಾಡಿದರು.
ಅಧ್ಯಕ್ಷ ಕೇದಗೆ ಸುರೇಶ್ ಶೆಟ್ಟಿಯವರು ಸ್ವಾಗತಿಸಿದರು. ಸಂಸ್ಥೆಯ ಪರವಾಗಿ ರಮೇಶ್ ಗುರುಸ್ವಾಮಿ, ಕೇದಗೆ ಸುರೇಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಭೋಜ ಶೆಟ್ಟಿ, ಉದಯ ಸಾಲ್ಯಾನ್, ಅತಿಥಿಗಳನ್ನು ಗೌರವಿಸಿದರು. ಶಕುಂತಳಾ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು.
ಹಿರಿಯ ವಿಶ್ವಸ್ಥ ರತ್ನಾಕರ ಶೆಟ್ಟಿ, ಆಡಳಿತ ವಿಶ್ವಸ್ಥರಾದ ಶಾಂಭವಿ ಶೆಟ್ಟ ಉಪಸ್ಥಿತರಿದ್ದರು. ವಿಶ್ವಸ್ಥರಾದ ರಘುನಾಥ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಉಪಾಧ್ಯಕ್ಷ ಕಾಂತಾಡಿ ಗುತ್ತು  ಅರುಣ್ ಆಳ್ವ ವಂದನಾರ್ಪಣೆಗೈದರು.

ವರದಿ : ಈಶ್ವರ ಎಂ. ಐಲ್

ಚಿತ್ರ : ದಿನೇಶ್ ಕುಲಾಲ್
Mumbai-3112201601 Mumbai-3112201602 Mumbai-3112201603 Mumbai-3112201604 Mumbai-3112201605 Mumbai-3112201606 Mumbai-3112201607
Mumbai-3112201608

Comments

comments

Comments are closed.

Read previous post:
Kinnigoli-3112201601
ಪದ್ಮನೂರು : ಮುಖ್ಯಪ್ರಾಣ ಕಿನ್ನಿಗೋಳಿ ಸನ್ಮಾನ

ಕಿನ್ನಿಗೋಳಿ : ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಮೇಳದ ಬಯಲಾಟ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಿರಿಯ...

Close