ಪದ್ಮನೂರು : ಮುಖ್ಯಪ್ರಾಣ ಕಿನ್ನಿಗೋಳಿ ಸನ್ಮಾನ

ಕಿನ್ನಿಗೋಳಿ : ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿಯ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಕಟೀಲು ಮೇಳದ ಬಯಲಾಟ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮುಲ್ಕಿ ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್, ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಜೋಸೆಫ್ ಕ್ವಾಡ್ರಸ್, ಉಪಾಧ್ಯಕ್ಷ ಪಿ. ಸತೀಶ್ ರಾವ್, ಅಶೋಕ್ ಕುಮಾರ್ ಶೆಟ್ಟಿ, ವಸಂತ್, ಶೇಖರ್ ಪೂಜಾರಿ, ಪ್ರಥ್ವಿರಾಜ ಆಚಾರ್ಯ, ಚಂದ್ರಶೇಖರ್, ನಿಲೇಶ್ ಶೆಟ್ಟಿಗಾರ್, ದುರ್ಗಾಪ್ರಸಾದ್, ಸಂಜೀವ ಶ್ರೀಯಾನ್, ರಾಘು ಭಂಡಾರಿ, ವಿಶ್ವನಾಥ ಶೆಟ್ಟಿ, ವೀರಪ್ಪ ಶೆಟ್ಟಿಗಾರ್, ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-3112201601

Comments

comments

Comments are closed.

Read previous post:
Kinnigoli-3012201603
ಮೌಲ್ಯಧಾರಿತ ಶಿಕ್ಷಣ -ವಿದ್ಯಾರ್ಥಿಗಳ ಹರಿವು

ಕಿನ್ನಿಗೋಳಿ : ಮೌಲ್ಯಧಾರಿತ ನೈತಿಕ ಶಿಕ್ಷಣ ನೀಡುವ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ಹರಿವು ತನ್ನಿಂತಾನೆ ಬರುತ್ತದೆ. ಗ್ರಾಮೀಣ ಮಟ್ಟದ ಕಟೀಲು ಶಿಕ್ಷಣ ಸಮೂಹ ಸಂಸ್ಥೆಗಳು ಗುಣಮಟ್ಟಗಳನ್ನು ಕಾಪಾಡಿ ಬಹಳ...

Close