ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ

ಮೂಲ್ಕಿ: ಅವಕಾಶಗಳನ್ನು ಸ್ವತಃ ಸೃಷ್ಟಿಸಿ,ಸ್ವಾವಲಂಭಿಗಳಾಗುವ ಮೂಲಕ ಜೀವನದ ಉನ್ನತಿ ಗಳಿಕೆಯೊಂದಿಗೆ ಇತರರನ್ನು ಸಂತೋಷದಲ್ಲಿಡುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ನೇಹಾ ಶೆಟ್ಟಿ ಹೇಳಿದರು ಅವರು ಮೂಲ್ಕಿ ವಿಜಯಾ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿ, ಅಧುನಿಕ ಜಗತ್ತಿನಲ್ಲಿ ಸಾಧಕರಿಗೆ ವಿಫುಲ ಅವಕಾಶಗಳಿವೆ ಶೈಕ್ಷಣಿಕ ,ಕ್ರೀಡೆ ಮತ್ತು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದಲ್ಲಿ ಉನ್ನತಿಗಳಿಕೆ ಸಾಧ್ಯ ಎಂದರು.
ಅಂತರಾಷ್ಟ್ರೀಯ ಉದ್ಯಮಿ ಅಶ್ರಪ್ ಕರ್ನಿರೆ ಮಾತನಾಡಿ,
ವಿದ್ಯಾರ್ಥಿ ಜೀವನದಲ್ಲಿ ಮೈಗೂಡಿಸಿಕೊಂಡ ಜೀವನ ಮೌಲ್ಯ, ಕೌಶಲತೆ, ಸ್ಪರ್ಧಾ ಹಾಗೂ ಸೇವಾ ಮನೋಭಾವ ಅರ್ಥಪೂರ್ಣ ಹಾಗೂ ಸಂತೃಪ್ತ ಬದುಕನ್ನು ರೂಪಿಸಿಕೊಳ್ಳುವಲ್ಲಿ ನಿರ್ಣಯ ಪಾತ್ರ ವಹಿಸುತ್ತದೆ ಎಂದರು. ವಿಜಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಮುಂಬೈ ಬಂಟರ ಸಂಘದ ಪೂರ್ವಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ 54 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ವಿಜಯಾ ಕಾಲೇಜಿನ ಬೆಳವಣಿಗೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಪೂರಕ ಸಹಕಾರ ನೀಡುತ್ತಾ ಬಂದಿದ್ದು ಕಾಲೇಜಿನ ಆಟದ ಮೈದಾನ, ಪ್ರಯೋಗಾಲಯ, ಮಧ್ಯಾಹ್ನ ಉಚಿತ ಭೋಜನ, ವಿದ್ಯಾನಿಧಿ ಇಂತಹ ಉಪಯುಕ್ತ ಯೋಜನೆಗಳನ್ನು ಫಲಪ್ರದವಾಗಿ ನಡೆಸುವಲ್ಲಿ ನೆರವು ನೀಡಲಾಗಿದೆ ಎಂದು ಕಾಲೇಜಿನ ವಿದ್ಯಾನಿಧಿ ಯೋಜನೆಗೆ ಹಳೆವಿದ್ಯಾರ್ಥಿ ಸಂಘದ ಆರ್ಥಿಕ ನೆರವಿನ ಚೆಕ್ಕನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠ ಶಾಲೆಯ ಮುಖ್ಯೋಪಾದ್ಯಾಯಿನಿ ಚಂದ್ರಿಕಾ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉದಯಕುಮಾರ್ ಶೆಟ್ಟಿ ಇನ್ನ ವಾರ್ಷಿಕ ವರದಿ ಪ್ರಸ್ತುತಪಡಿಸಿದರು. ಪ್ರಚಲಿತ ವರ್ಷದಲ್ಲಿ ಸೇವಾ ನಿವೃತ್ತಿ ಹೊಂದಿದ ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ಹಾಗೂ ಕಚೇರಿ ಸಿಬ್ಬಂದಿ ಲಕ್ಷ್ಮಣ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಹಳೆವಿದ್ಯಾರ್ಥಿ ಡಾ. ಬಿ.ಹೆಚ್.ರಾಘವ ರಾವ್ ಹಾಗೂ ಮಾಲತಿ ಸೋಮಶೇಖರ ರಾವ್ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ವಿದ್ಯಾರ್ಥಿವೇತನ ವಿತರಿಸಲಾಯಿತು.
ಹಳೆವಿದ್ಯಾರ್ಥಿ ಸಂಘ ಆಯೋಜಿಸಿದ್ದ ಅಂತರ್ ಕಾಲೇಜು ರಸಪ್ರಶ್ನೆ ಸ್ಪರ್ಧೆ ಹಾಗೂ ಮಂಗಳೂರು ವಿ.ವಿ.ಮಟ್ಟದ ಕಬಡ್ಡಿ ಹಾಗೂ ಮಹಿಳಾ ತ್ರೋಬಾಲ್ ಪಂದ್ಯಾಟದಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ| ಕೆ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಶಮಿನಾ ಜಿ ಆಳ್ವ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸುಮಲತಾ ಎನ್. ಸುವರ್ಣ ಹಾಗೂ ಜೊತೆ ಕಾರ್ಯದರ್ಶಿ ಇಸ್ಮಾಯಿಲ್,ಕೋಶಾಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ತ್ರಿವಿಕ್ರಮ ಪೈ ನಿರ್ವಹಿಸಿದ ಕಾರ್ಯಕ್ರಮದಲ್ಲಿ . ವಿಜಯಾ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಅಶೋಕ್‌ಕುಮಾರ್ ಶೆಟ್ಟಿ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ನಾಟಕ ಕಡಲ ಮಗೆ ಪ್ರದರ್ಶನ ನಡೆಯಿತು.

Mulki 10011701

Comments

comments

Comments are closed.

Read previous post:
Kinnigoli-3112201609
ಅರಸು ಕಂಬಳ ಕ್ರೀಡೋತ್ಸವ

ಹಳೆಯಂಗಡಿ: ಕರಾವಳಿ ಭಾಗದ ಕಂಬಳ ಕ್ರೀಡೆ ವಿಶ್ವಮಟ್ಟದಲ್ಲಿ ಗುರತಿಸಲ್ಪಟ್ಟಿದ್ದು, ಇದಕ್ಕೆ ಕೊಂಡಿಯಂತಾಗಿರುವ ಕ್ರೀಡೋತ್ಸವವು ಕೆಸರುಗದ್ದೆಯಲ್ಲಿ ಸಂಯೋಜಿಸಿ ಮುಂದಿನ ಯುವ ಪೀಳಿಗೆಗೆ ಜನಪದ ಕ್ರೀಡೆಯನ್ನು ಜಗಜ್ಜಾಹಿರುಗೊಳಿಸುವ ಅಗತ್ಯವಿದೆ ಎಂದು...

Close