ಅಂಗರಗುಡ್ಡೆ ಹೊಸವರ್ಷ ಆಚರಣೆ

ಕಿನ್ನಿಗೋಳಿ : ಸನಾತನ ಧರ್ಮದ ಮೂಲ ಸಂಸ್ಕೃತಿ ಸಂಸ್ಕಾರ ಆಚರಣೆಗಳಿಗೆ ದಕ್ಕೆ ಚ್ಯುತಿ ಬಾರದಂತೆ ಕಾರ್ಯಪ್ರವತ್ತರಾದಾಗ ದೇವರ ಅನುಗ್ರಹ ಹಾಗೂ ಎಲ್ಲಾ ಕಾರ್ಯದಲ್ಲಿಯೂ ಯಶಸ್ಸು ಸಿಗುವುದು ಎಂದು ಕಟೀಲು ಪ್ರೌಢಶಾಲಾ ಶಿಕ್ಷಕ ರಂಗಕರ್ಮಿ ಸಾಯಿನಾಥ ಶೆಟ್ಟಿ ಮುಂಡ್ಕೂರು ಹೇಳಿದರು.
ಕಿನ್ನಿಗೋಳಿ ಸಮೀಪದ ರಾಮನಗರ ಅಂಗರಗುಡ್ಡೆಯಲ್ಲಿ ಶಾಮಿಯಾನ ಸಂಘಟಕರ ಒಕ್ಕೂಟ ಮುಲ್ಕಿ-ಕಿನ್ನಿಗೋಳಿ ವಲಯ ಹಾಗೂ ಶ್ರೀ ರಾಮ ಕ್ರಿಕೆಟರ‍್ಸ್ ರಾಮನಗರ ಅಂಗರಗುಡ್ಡೆ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ಹೊಸವರ್ಷ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ವಿಜಯ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷೆ ಶಮೀನಾ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲರೂ ಒಂದಾಗಿ ಸೇವಾ ಮನೋಭಾವನೆ ಸ್ನೇಹ ಸೌರ್ಹದಯುತವಾಗಿ ಸಮಾಜ ಮುಖಿಯಾಗಿ ಕೆಲಸ ಮಾಡಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ಸಾಧ್ಯ ಎಂದು ಹೇಳಿದರು.
ಈ ಸಂದರ್ಭ ಸವಿತಾ ಸಮಾಜದ ಕ್ಷೌರಿಕ ವೃತ್ತಿಯ ಸಾಧು ಭಂಡಾರಿ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ದುರ್ಗೇಶ್ ಶೆಟ್ಟಿ , ನಿಸಾರ್ ಅಹಮ್ಮದ್ ಅಂಗರಗುಡ್ಡೆ , ಶ್ರಿಕಾಂತ್ ಶೆಟ್ಟಿ ಕೆಂಚನಕೆರೆ, ರಾಮಕ್ರಿಕೆಟರ‍್ಸ್ ಅಧ್ಯಕ್ಷ ತಾರನಾಥ ದೇವಾಡಿಗ, ಆನಂದ ದೇವಾಡಿಗ , ಹರಿಕೃಷ್ಣ ದಾಸ್ ಕೆಂಚನಕೆರೆ, ಸತೀಶ್ ಆಚಾರ್ಯ, ದಿನೇಶ್, ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕೃಷ್ಣ ಶೆಟ್ಟಿಗಾರ್ ಸ್ವಾಗತಿಸಿ ರಾಜೇಶ್ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.

Kinnigoli-0201201702

Comments

comments

Comments are closed.

Read previous post:
Kinnigoli-0201201701
ಉತ್ತಮ ಶಿಕ್ಷಣದಿಂದ ಜೀವನದಲ್ಲಿ ಯಶಸ್ಸು

ಕಿನ್ನಿಗೋಳಿ: ಗುರು ಹಿರಿಯರನ್ನು ಗೌರವಿಸಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಿ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸು ಪಡೆದು ಸ್ವಾಸ್ಥ್ಯ ಸಮಾಜದ ನಿರ್ಮಾಣ ಮಾಡಬೇಕು ಎಂದು ದ.ಕ....

Close