ಹಿತರಕ್ಷಣಾ ವೇದಿಕೆ ವಾರ್ಷಿಕೋತ್ಸವ

ಕಿನ್ನಿಗೋಳಿ: ಯುವಕರು ಸಂಘಟಿತರಾಗಿ ಜನಪರ ಸಾಮಾಜಿಕ ಚಿಂತನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕು. ಎಂದು ಮೂಲ್ಕಿ ನೋಟರಿ ನ್ಯಾಯವಾದಿ ಡೇನಿಯಲ್ ದೇವರಾಜ್ ಹೇಳಿದರು.
ಶನಿವಾರ ನಡೆದ ಕಿನ್ನಿಗೋಳಿ ಶಾಂತಿನಗರ ಗುತ್ತಕಾಡು ನಾಗರಿಕ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ನಿವೃತ್ತ ಯೋಧ ಕೃಷ್ಣನ್ ವೈ. ಗುತ್ತಕಾಡು ಅವರನ್ನು ಸನ್ಮಾನಿಸಲಾಯಿತು. ಗೌರವಿಸಲಾಯಿತು.
ಗುತ್ತಕಾಡು ನಾಗರಿಕ ಹಿತರಕ್ಷಣಾ ವೇದಿಕೆ ವೇದಿಕೆ ಅಧ್ಯಕ್ಷ ದಿವಾಕರ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿ ಅವರ ವೈಯಕ್ತಿಕ ನೆಲೆಯಲ್ಲಿ ಅಶೋಕ ಪೂಜಾರಿ, ಅಹಮ್ಮದ್ ಬಾವ, ದಾಮೋದರ ಕುಲಾಲ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ನೀಡಿದರು. ಡಾ. ಮನೋಜ್ ಕುಮಾರ್ ಜೆ. ಶೆಟ್ಟಿ ಬಹುಮಾನ ವಿತರಣೆಗೈದರು.
ವೇದಿಕೆಯ ಮಾಜಿ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಮೀರಾ ಸಾಬ್, ವಿವೇಕಾನಂದ ಗುತ್ತಕಾಡು, ನಝೀರ್ ಟಿ. ಕೆ, ನವೀನ್ ಕುಕ್ಯಾನ್ ಉಪಾಧ್ಯಕ್ಷ ಅಬೂಬಕ್ಕರ್, ಕಾರ್ಯದರ್ಶಿ ಟಿ. ಎ. ಹನೀಫ್ ಉಪಸ್ಥಿತರಿದ್ದರು.
ಚಂದ್ರಶೇಖರ್ ಸ್ವಾಗತಿಸಿದರು. ಅಬ್ದುಲ್ ರಜಾಕ್ ಕಾರ್ಯಕ್ರಮ ನಿರೂಪಿಸಿದರು.

Kinnigoli-0201201703

Comments

comments

Comments are closed.

Read previous post:
Kinnigoli-0201201702
ಅಂಗರಗುಡ್ಡೆ ಹೊಸವರ್ಷ ಆಚರಣೆ

ಕಿನ್ನಿಗೋಳಿ : ಸನಾತನ ಧರ್ಮದ ಮೂಲ ಸಂಸ್ಕೃತಿ ಸಂಸ್ಕಾರ ಆಚರಣೆಗಳಿಗೆ ದಕ್ಕೆ ಚ್ಯುತಿ ಬಾರದಂತೆ ಕಾರ್ಯಪ್ರವತ್ತರಾದಾಗ ದೇವರ ಅನುಗ್ರಹ ಹಾಗೂ ಎಲ್ಲಾ ಕಾರ್ಯದಲ್ಲಿಯೂ ಯಶಸ್ಸು ಸಿಗುವುದು ಎಂದು ಕಟೀಲು...

Close