ಸ್ನೇಹ ಒಕ್ಕೂಟದಿಂದ ಕ್ರಿಸ್‌ಮಸ್ ಆಚರಣೆ

ಮೂಲ್ಕಿ: ಒಬ್ಬರಿಗೊಬ್ಬರು ಸಹಾಯಮಾಡಿ ಪ್ರೀತಿ,ಪ್ರೇಮ,ಸ್ನೇಹ ಸೌಹಾರ್ದತೆಯಿಂದ ಬದುಕುವುದು ಮಾತ್ರವಲ್ಲದೆ ಇತರರಿಗೂ ಸಹಾಯ ಹಸ್ತ ನೀಡುವುದು ಕ್ರಿಸ್ಮಸ್ ಹಬ್ಬದ ಮಹತ್ವವಾಗಿದೆ ಎಂದು ಸಿ.ಒ.ಡಿ.ಪಿ. ಸಂಸ್ಥೆಯ ನಿರ್ದೇಶಕ ಓಸ್ವಲ್ಡ್ ಮೊಂತೇರೊರವರು ಹೇಳಿದರು.

ಪಕ್ಷಿಕೆರೆ ರುಸೆಂಪ್ ನಲ್ಲಿ ಜರಗಿದ ಸಿ.ಒ.ಡಿ.ಪಿ. ಪ್ರವರ್ದಿತ ಸ್ನೇಹ ಒಕ್ಕೂಟದಿಂದ ಕ್ರಿಸ್‌ಮಸ್ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕೆಮ್ರಾಲ್ ಗ್ರಾ.ಪಂ ಅಧ್ಯಕ್ಷರಾದ ನಾಗೇಶ್ ಅಂಚನ್ ಕ್ರಿಸ್ಮಸ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬದ್ರಿಯ ಜುಮ್ಮ ಮಸೀದಿಯ ಅಧ್ಯಕ್ಷರಾದ ಮಿರನ್ ಹಾಜಿ ಹಾಗೂ ಸಿ.ಒ.ಡಿ.ಪಿ ಸಂಸ್ಥೆಯ ಸಂಯೋಜಕರಾ ರವಿಕುಮಾರ್ ಕ್ರಾಸ್ತರವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರಿಂದ ಕ್ರಿಸ್ಮಸ್ ಸಂಭಂದಿತ ಕಿರುನಾಟಕ, ನೃತ್ಯ ಹಾಗೂ ಕ್ರಿಸ್‌ಮಸ್ ಹಾಡುಗಳಿಂದ ಮನರಂಜಿಸಿದರು. ಸ್ನೇಹ ಒಕ್ಕೂಟದ ಅಧ್ಯಕ್ಷರಾದ ರೋಕಿ ಸಲ್ದಾಹ್ನರವರು ಸ್ವಾಗತಿಸಿದರು. ಪ್ರೀತಿ ಮಹಾಸಂಘದ ಅಧ್ಯಕ್ಷರಾದ ವಲೇರಿಯನ್ ಡಿ ಸೋಜ ವಂದಿಸಿದರು. ಹರಿಣಾಕ್ಷಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Kinnigoli-0201201705

 

Comments

comments

Comments are closed.

Read previous post:
Kinnigoli-0201201707
ನಾಪತ್ತೆ ಯುವಕ ಶವವಾಗಿ ಪತ್ತೆ

ಕಿನ್ನಿಗೋಳಿ : ಕಳೆದ ಡಿಸೆಂಬರ್ 28 (2016) ಬುಧವಾರದಂದು ನಾಪತ್ತೆಯಾದ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ(29 ವರ್ಷ) ಭಾನುವಾರ ಮಧ್ಯಾಹ್ನ ನಿಡ್ಡೋಡಿ ದಡ್ಡು ಚರ್ಚ್ ಬಳಿಯ...

Close