ಬ್ರಹ್ಮಕಲಶಾಭಿಷೇಕ ಅಮಂತ್ರಣ ಪತ್ರ ಬಿಡುಗಡೆ

ಮುಲ್ಕಿ: ಪಡುಪಣಂಬೂರು ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಫೆ.3 ರಿಂದ 15ರವರೆಗೆ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರಾ ನಹೋತ್ಸವವವು ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು. ಈ ಪ್ರಯುಕ್ತ ಆಮಂತ್ರಣ ಪತ್ರ ಬಿಡುಗಡೆ ಸಮಾರಂಭ ನಡೆಯಿತು.ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ವಹಿಸಿದ್ದರು.ವೇದಿಕೆಯಲ್ಲಿ ಅತಿಥಿಗಳಾಗಿ ಶಿಬರೂರು ವೇದವ್ಯಾಸ ತಂತ್ರಿ, ದೇವಳದ ಆಡಳಿತ ಮೊಕ್ತೇಸರರಾದ ನವೀನ್ ಶೆಟ್ಟಿ ಎಡ್ಮೆಮಾರ್, ರಮೇಶ್ ಸುವರ್ಣ, ಪ್ರಭಾ ಹೊಯಿಗೆಗುಡ್ಡೆ, ಮಮತಾ ಶೆಟ್ಟಿ, ದೇವದಾಸ ಸುವರ್ಣ, ರಮೇಶ್ ಸುವರ್ಣ, ರಂಗನಾಥ ಭಟ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ರಾಮದಾಸ್ ಪುತ್ರನ್, ಸದಸ್ಯರಾದಡಾ. ಜಗದೀಶ್, ಜಿ.ಚಂದ್ರಶೇಖರ್, ವಾಸುದೇವ ಶಣೈ ಕೋಲ್ನಾಡು, ಎಂ.ಗೌತಮ್ ಜೈನ್ ಮೂಲ್ಕಿ ಅರಮನೆ ಮತ್ತುತರರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಸ್ವಾಗತಿಸಿದರು. ರಂಗನಾಥ ಭಟ್ ದನ್ಯವಾದ ಅರ್ಪಿಸಿದರು.

Mulki-2912201601

Comments

comments

Comments are closed.

Read previous post:
Kinnigoli-0201201705
ಸ್ನೇಹ ಒಕ್ಕೂಟದಿಂದ ಕ್ರಿಸ್‌ಮಸ್ ಆಚರಣೆ

ಮೂಲ್ಕಿ: ಒಬ್ಬರಿಗೊಬ್ಬರು ಸಹಾಯಮಾಡಿ ಪ್ರೀತಿ,ಪ್ರೇಮ,ಸ್ನೇಹ ಸೌಹಾರ್ದತೆಯಿಂದ ಬದುಕುವುದು ಮಾತ್ರವಲ್ಲದೆ ಇತರರಿಗೂ ಸಹಾಯ ಹಸ್ತ ನೀಡುವುದು ಕ್ರಿಸ್ಮಸ್ ಹಬ್ಬದ ಮಹತ್ವವಾಗಿದೆ ಎಂದು ಸಿ.ಒ.ಡಿ.ಪಿ. ಸಂಸ್ಥೆಯ ನಿರ್ದೇಶಕ ಓಸ್ವಲ್ಡ್ ಮೊಂತೇರೊರವರು...

Close