ಪುನರೂರು ಪ್ರತಿಷ್ಠಾನ ಉದ್ಘಾಟನೆ

ಕಿನ್ನಿಗೋಳಿ: ಸತ್ಕರ್ಮಗಳನ್ನು ಮಾಡಿ ನಮ್ಮಲ್ಲಿರುವ ಸಂಪತ್ತಿನ ಒಂದಿಷ್ಟು ಭಾಗವನ್ನು ಆರ್ಥಿಕವಾಗಿ ಹಿಂದುಳಿದವರಿಗಾಗಿ ಮೀಸಲಿಡಬೇಕು. ಈ ಸಂಪತ್ತಿನ ಸದ್ವಿನಿಯೋಗದಿಂದ ಸಾರ್ಥಕತೆಯ ಜೀವನ ನಮ್ಮದಾಗುತ್ತದೆ. ಪುನರೂರು ಪ್ರತಿಷ್ಠಾನದ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಸಿಗಲಿ ಎಂದು ಕಟೀಲು ದೇವಳ ಪ್ರಧಾನ ಅರ್ಚಕ ಕೆ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಭಾನುವಾರ ಪುನರೂರು ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದರು.
ಶಾರದ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಎಂ ಬಿ ಪುರಾಣಿಕ್ ಶುಭಾಶಂಸನೆಗೈದು ಪ್ರತಿಫಲಾಪೇಕ್ಷೆಯಿರದ ಸ್ವಾರ್ಥ ರಹಿತ ದಾನ ಸೇವೆಯೇ ನಿಜವಾದ ಧರ್ಮ. ಎಂದರು. ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಪುನರೂರು ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ ರಾವ್ ಪುನರೂರು, ಎಲ್ಲೂರು ಮಹತೋಭಾರ ಶ್ರೀ ವಿಶ್ವನಾಥ ಕ್ಷೇತ್ರದ ಮಾಜಿ ಮೊಕ್ತೇಸರ ಕುತ್ಯಾರು ಕೃಷ್ಣಮೂರ್ತಿ ಭಟ್, ಯುಗಪುರುಷ ಪ್ರಧಾನ ಸಮಪಾದಕ ಕೆ ಭುವನಾಭಿರಾಮ ಉಡುಪ, ಕುಂದಾಪುರ ಮೂಡ್ಲಕಟ್ಟೆಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಿನ್ಸಿಪಾಲ್ ಡಾ ಮೋಹನ್ ದಾಸ್ ಭಟ್, ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು, ಪ್ರತಿಷ್ಠಾನದದ ಗೌರವಾಧ್ಯಕ್ಷೆ ಎಚ್ ಕೆ ಉಷಾರಾಣಿ, ಉಪಾಧ್ಯಕ್ಷರಾದ ರಾಕಾ ಸುರ, ಮಲ್ಲಿಕಾ ಅರವಿಂದ, ಕೋಶಾಧಿಕಾರಿ ಚಂದ್ರಿಕಾ ಸುರ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ರಾಮ ಮೂರ್ತಿ ರಾವ್ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು ಪ್ರಸ್ತಾವನೆಗೈದು ಸ್ವಾಗತಿಸಿದರು. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.

Kinnigoli-0201201704

Comments

comments

Comments are closed.

Read previous post:
Kinnigoli-0201201703
ಹಿತರಕ್ಷಣಾ ವೇದಿಕೆ ವಾರ್ಷಿಕೋತ್ಸವ

ಕಿನ್ನಿಗೋಳಿ: ಯುವಕರು ಸಂಘಟಿತರಾಗಿ ಜನಪರ ಸಾಮಾಜಿಕ ಚಿಂತನೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕು. ಎಂದು ಮೂಲ್ಕಿ ನೋಟರಿ ನ್ಯಾಯವಾದಿ ಡೇನಿಯಲ್ ದೇವರಾಜ್ ಹೇಳಿದರು. ಶನಿವಾರ ನಡೆದ ಕಿನ್ನಿಗೋಳಿ...

Close