ಕಟೀಲು ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ : ದೇಶದಲ್ಲಿ ಪ್ರಸಿದ್ದ ಯಾತ್ರಾ ಸ್ಥಳವಾದ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಹಾಗೂ ಪರಿಸರದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಸ್ವಚ್ಚತಾ ಅಭಿಯಾನ ಕೈಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಚ್ಚ ಧಾರ್ಮಿಕ ನಗರಿ ಎಂಬ ಪ್ರಶಸ್ತಿ ಪಡೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿರುವ ಶ್ರದ್ಧಾ ಕೇಂದ್ರಗಳನ್ನು ಜನವರಿ 13ರ ಒಳಗೆ ಶುಚಿಗೊಳಿಸುವ ಸಂಕಲ್ಪದ ಹಿನ್ನಲೆಯಲ್ಲಿ ಕಟೀಲು ಪರಿಸರ ಸ್ವಚ್ಚತಾ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮುಲ್ಕಿ ಮೂಡಬಿದಿರೆ ಶಾಸಕ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಮಟ್ಟದಲ್ಲಿ ಸ್ವಚ್ಚತೆ ಅಭಿಯಾನ ಮಾಡಬೇಕಾಗಿದೆ. ಸ್ವಚ್ಚತೆ ಹಾಗೂ ಯಾತ್ರಿಕ ಕೇಂದ್ರ, ಪ್ರವಾಸೋಧ್ಯಮ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಸಿವಿಒ ಸಹಿತ ವಿವಿಧ ಅಧಿಕಾರಿಗಳ ಸಭೆ ಕರೆದು ಕ್ರಮಕೈಗೊಳ್ಳಬೇಕಾಗಿದೆ. ಕಟೀಲು ಗ್ರಾಮ ಪಂಚಾಯಿತಿ, ಶಾಲಾ ಕಾಲೇಜು, ಬಸ್ದು ನಿಲ್ದಾಣ, ಅಂಗಡಿ ಮುಂಗಟ್ಟು ಗಳಲ್ಲಿ ಸ್ವಚ್ಚತೆ ಮಾಡಲು ಎಲ್ಲರನ್ನೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕುಮಾರ ಆಸ್ರಣ್ಣ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಈಶ್ವರ್ ಕಟೀಲು, ಕಟೀಲು ಗ್ರಾ.ಪಂ. ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ , ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಅಧ್ಯಕ್ಷ ಮಾಧವ, ಮೇಲ್ವಿಚಾರಕ ಯಶೋಧರ, ತಿಮ್ಮಪ್ಪ ಕೋಟ್ಯಾನ್ ಮತ್ತಿತರರು ಸಲಹೆ ಸೂಚನೆ ನೀಡಿದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ದೇವಳದ ಅಭಿವೃದ್ಧಿ ಗೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿ, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಸಹಕಾರ ಸಲಹೆ ಬೇಕು
ಡಾ. ರವೀಂದ್ರನಾಥ ಪೂಂಜ
ಕಟೀಲು ದೇವಳ ಮೊಕ್ತೇಸರರು

ಕಟೀಲಿನಲ್ಲಿ ಘನ ತಾಜ್ಯ ವಿಲೇವಾರಿ ಘಟಕ ಆರಂಭಿಸುವ ಬಗ್ಗೆ ಪ್ರಯತ್ನ ಅಥವಾ ದೇವಳದಿಂದ ನಿರ್ಮಾಣಗೊಂಡ ಘಟಕವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತಸುವ ವ್ಯವಸ್ಥೆ ಮಾಡಲಾಗುವುದು. ನೂತನ ಶೌಚಾಲಯ, ಸ್ನಾನ ಗೃಹ ನಿರ್ಮಾಣ ಮಾಡಲಾಗುವುದು. ಯಾತ್ರಿ ನಿವಾಸಕ್ಕೆ ಪುನ: ಒಂದು ಕೋಟಿ ರೂ ನೀಡಲಾಗುವುದು
ಕೆ. ಅಭಯಚಂದ್ರ ಜೈನ್

ಗ್ರಾಮ ಪಂಚಾಯಿತಿಯ ಪರವಾನಿಗೆ ಇಲ್ಲದ ಅಂಗಡಿಗಳನ್ನು ಮುಚ್ಚಿಸಿ ಕಟೀಲು ಪರಿಸರದ ಸಂಘಸಂಸ್ಥೆಗಳು, ಶಾಲಾ ಕಾಲೇಜಿನ, ಹಾಗೂ ಭಕ್ತರ ನೇತೃತ್ವದಲ್ಲಿ ಜನವರಿ 8 ಭಾನುವಾರ ಬೆಳಿಗ್ಗೆ 8.30 ರಿಂದ ಮದ್ಯಾಹ್ನದ ವರೆಗೆ ಸ್ವಚ್ಛತಾ ಕಾರ್ಯಕ್ರಮ ಮಾಡಲಾಗುವುದು
ಹರಿನಾರಾಯಣ ದಾಸ ಆಸ್ರಣ್ಣ ,
ಅರ್ಚಕರು ಕಟೀಲು ದೇವಳ

ಕಟೀಲು ಕಾಲೇಜು ಎನ್‌ಎಸ್‌ಎಸ್ ವಿದ್ಯಾರ್ಥಿಗಳ ಮೂಲಕ ಹಾಗೂ ತಾಲೂಕಿನ ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ಘಟಕಗಳ ಮೂಲಕ ಪ್ರತಿ ಭಾನುವಾರ ಶ್ರಮದಾನ ಮಾಡಲಾಗುವುದು
ಎಂ. ಬಾಲಕೃಷ್ಣ ಶೆಟ್ಟಿ
ಪ್ರಿನಿಪಾಲ್ ಕಟೀಲು ಪದವಿ ಕಾಲೇಜು

Kinnigoli-0201201706

Comments

comments

Comments are closed.

Read previous post:
Kinnigoli-0201201705
ಶಾಲಾ ವಾರ್ಷಿಕೋತ್ಸವ ದೇವಳದ ರಥೋತ್ಸವವಿದ್ದಂತೆ

ಕಿನ್ನಿಗೋಳಿ: ಮಕ್ಕಳು ದೇವರು ಶಾಲೆಗಳು ದೇವಳಗಳು ಹಾಗಾಗಿ ಶಾಲೆಗಳ ವಾರ್ಷಿಕೋತ್ಸವ ಅಂದರೆ ರಥೋತ್ಸವ ನಡೆದಂತೆ ಊರಿಗೆ ಹಬ್ಬವಿದ್ದಂತೆ ಎಂದು ಕಟೀಲು ದೇವಳ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು. ಶನಿವಾರ...

Close