ಜ.3-7 ಪಟ್ಟೆ ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಜ.3 ರಿಂದ 7ರ ವರೆಗೆ ಕಿನ್ನಿಗೋಳಿ ಸಮೀಪದ ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗೂ ಬಂಡಿ ಬಲಿ ನಡೆಯಲಿದೆ.
ಜ.೩ರಂದು ಭಂಡಾರದ ಮನೆಯಿಂದ ದೈವಗಳ ಭಂಡಾರ ದೈವಸ್ಥಾನಕ್ಕೆ ಆಗಮನ, ದರ್ಶನ ಸೇವೆ ಹಾಗೂ ಬಲೀಂದ್ರ ಪೂಜೆ. ಜ.4ರಂದು ದರ್ಶನ ಸೇವೆ ಹಾಗೂ ದೀಪಾರಾಧನೆ ಬಲಿ. ಜ.5ರಂದು ಕಾಪು ಶ್ರೀ ಕಾಳಿಕಾಂಬ ಯಕ್ಷಗಾನ ಮಂಡಳಿ ಅವರಿಂದ ಯಕ್ಷಗಾನ ತಾಳಮದ್ದಲೆ ಬೀಷ್ಮ ವಿಜಯ, ಸಾರ್ವಜನಿಕ ಅನ್ನ ಸಂತರ್ಪಣೆ, ಶ್ರೀ ದೈವದ ಗಗ್ಗರ ಸೇವೆ, ದರ್ಶನ ಸೇವೆ, ಬಂಡೀ ಬಲಿ, ನೇಮೋತ್ಸವ. ಜ.6ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಅವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Mulki-2912201602
ಮೂಲ್ಕಿ ಸೀಮೆಯ ಕಂಬಳ ಕ್ರೀಡೋತ್ಸವ

ಹಳೆಯಂಗಡಿ: ಮೂಲ್ಕಿ ಸೀಮೆಯ ಅರಸು ಕಂಬಳದ ಆಶ್ರಯದಲ್ಲಿ ನಡೆದ ಕೆಸರುಗದ್ದೆ ಕ್ರೀಡೋತ್ಸವದ ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕಾಪುವಿನ ರಾಮಾಂಜನೇಯ ತಂಡ ಹಾಗೂ ಮಹಿಳಾ ವಿಭಾಗದಲ್ಲಿ ಪೊರ್ಕೋಡಿಯ...

Close