ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಗ್ರಾಮ ಸಭೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು.
ಈಗಲೇ ಮೆನ್ನಬೆಟ್ಟು ಉಲ್ಲಂಜೆ ಪರಿಸರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ ನೀರಿನ ಒರತೆ ಇರುವ ಪ್ರದೇಶಗಳು ಕಟೀಲು ಗ್ರ್ರಾಮ ಪಂಚಾಯಿತಿಗೆ ಸೇರ್ಪಡೆಗೊಂಡಿವೆ. ನೀರಿನ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಭಾಸ್ಕರ ಪೂಜಾರಿ ಉಲ್ಲಂಜೆ ಕೇಳಿದಾಗ ಪಂಚಾಯಿತಿ ಆಡಳಿತ ಉತ್ತರಿಸಿ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣವಾಗಿ ಕಾರ್ಯ ರೂಪಕ್ಕೆ ಬಂದಾಗ ಬಹುತೇಕ ನೀರಿನ ಸಮಸ್ಯೆ ಬಗೆ ಹರಿಯುವುದು ಎಂದು ತಿಳಿಸಿದರು.
ಕಿನ್ನಿಗೋಳಿ ಮುಖ್ಯ ರಸ್ತೆ, ಯುಗಪುರುಷದ ಎದುರು ಬಸ್ಸು ಹಾಗೂ ಇತರ ಘನ ಲಘು ವಾಹನಗಳು ನಿಂತು, ತುಂಬಾ ನಿಧಾನವಾಗಿ ಚಲಿಸಿ ಪರೋಕ್ಷವಾಗಿ ಟ್ರಾಫಿಕ್ ದಟ್ಟಣೆ ಹಾಗೂ ಜಾಮ್ ಆಗಲು ಕಾರಣವಾಗುತ್ತದೆ. ಎಂದು ಕೆ. ಭುವನಾಭಿರಾಮ ಉಡುಪ ಕೇಳಿದರು. ಇದಕ್ಕೆ ಉತ್ತರಿಸಿದ ಸುರತ್ಕಲ್ ಸಂಚಾರಿ ದಳದ ಮಂಜುನಾಥ್ ಪಾರ್ಕಿಂಗ್ ವ್ಯವಸ್ಥೆ ಹಾಗೂ ಬಸ್ ಬೇ ಯನ್ನು ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಪಂಚಾಯಿತಿಗಳು ಸ್ಥಳವಕಾಶ ಮಾಡಿಕೊಡಬೇಕಾಗುತ್ತದೆ ಆನಂತರ ಸಂಚಾರ ವ್ಯವಸ್ಥೆಗಳನ್ನು ಸುಲಲಿತ ಮಾಡಲಾಗುವುದು ಇದಕ್ಕೂ ಜನರ ಸಹಕಾರ ಅಗತ್ಯ ಎಂದರು.
ನೀರಿನ ದರ ಏರಿಸಿದ್ದೀರಿ ಕೆಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇದೆ ಮೊದಲು ನೀರು ಕೊಡಿ ನಂತರ ನೀರಿನ ದರ ಏರಿಸಿ ಎಂಬ ಏರು ದನಿಯ ಜನರ ಪ್ರಶ್ನೆಗೆ ಉತ್ತರಿಸಿದ ನೀರು ಸಮಿತಿಯ ಶ್ರೀಧರ ಶೆಟ್ಟಿ ಮಾತನಾಡಿ ನೀರು ಸರಭರಾಜಾಗುವ ಪಂಪ್ ನ ವಿದ್ಯುತ್ ಬಿಲ್ಲು, ದುರಸ್ತಿ ವೆಚ್ಚ ಹಾಗೂ ನೀರು ಸರಭರಾಜು ಮಾಡುವ ನಿರ್ವಾಹಕರ ವೇತನ ಹೆಚ್ಚಾಗಿರುವ ಕಾರಣ ನಷ್ಟ ಸರಿದೂಗಿಸಲು ಅನಿವಾರ್ಯವಾಗಿ ಸ್ವಲ್ಪ ಏರಿಕೆ ಮಾಡಲಾಗಿದೆ. ಎಂದು ತಿಳಿಸಿದರು.
ಹಲವು ವರ್ಷಗಳ ಹಿಂದೆ ಇದ್ದಂತೆ ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಪಂಚಾಯಿತಿಗಳನ್ನು ಒಟ್ಟು ಸೇರಿಸಿ ಪಟ್ಟಣ ಪಂಚಾಯಿತಿ ಆಗಿ ಮಾಡಲು ನಿರ್ಣಯ ತೆಗೆದುಕೊಳ್ಳಿ ಜಿಲ್ಲಾಡಳಿತಕ್ಕೆ ಮನವಿ ನೀಡಿ ಆವಾಗ ನಮ್ಮ ಗ್ರಾಮಗಳು ಹೆಚ್ಚಿನ ಅನುದಾನದಿಂದ ಅಭಿವೃದ್ದಿ ಹೊಂದುತ್ತವೆ ಎಂದು ಹಲವು ಗ್ರಾಮಸ್ಥರು ಭಿನ್ನವಿಸಿದರು.
ಹಲವು ತಿಂಗಳಾದರೂ ಮುಕ್ಕ ರಸ್ತೆ ಹಾಗೂ ರಸ್ತೆ ಬದಿ ಹೊಂಡ ಸರಿಪಡಿಸಿಲ್ಲ ಶಾಲಾ ಮಕ್ಕಳು ಶಾಲಾ ಬಸ್ಸು ಇದೇ ಹಾದಿಯಲ್ಲಿ ಹೋಗುತ್ತಿದ್ದಾರೆ ತ್ವರಿತವಾಗಿ ರಸ್ತೆ ಸರಿಪಡಿಸಿ ಎಂದು ಮುಕ್ಕ ರೋಡ್ ನಿವಾಸಿಗಳು ಆಗ್ರಹಪಡಿಸಿದರು.
ಮೂಲ್ಕಿ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಹಲವು ಗ್ರಾಮಗಳಿಗೆ ಮಧ್ಯವಿರುವ ಕಿನ್ನಿಗೋಳಿಯಲ್ಲಿ ಮಾಡಬೇಕು ಎಂದು ಕೃಷಿಕರು ಪಂಚಾಯಿತಿಗೆ ನಿವೇದನೆ ಮಾಡಿದರು.
ಪಂಚಾಯಿತಿಗೆ ಶೇಕಡ 40 ರಷ್ಟು ಗ್ರಾಮಸ್ಥರು ತೆರಿಗೆ ಕಟ್ಟಿದ್ದಾರೆ ಆದಷ್ಟು ಬೇಗ ತೆರಿಗೆ ಕಟ್ಟಿದರೆ ಗ್ರಾಮದ ಅಭಿವೃದ್ದಿಗೋಸ್ಕರ ವಿನಿಯೋಗಿಸಬಹುದು ಜನರು ಇದಕ್ಕೆ ಸ್ಪಂದನೆ ನೀಡಬೇಕು. ಮನೆ ನಂಬ್ರ ಇಲ್ಲದವರಿಗೆ ಸೌಲಭ್ಯಗಳು ದೊರಕುವುದು ಕಷ್ಟ ಸಾಧ್ಯ. ಅಕ್ರಮ ಸಕ್ರಮದಡಿಯಲ್ಲಿ ಕಾನೂನು ರೀತಿಯಲ್ಲಿ ಅರ್ಹರಿಗೆ 94ಸಿಸಿ ಅರ್ಜಿ ಸಲ್ಲಿಸುವ ಅವಕಾಶವಿದೆ. ಎಂದು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಪಿಡಿಒ ರಮ್ಯಾ ತಿಳಿಸಿದರು.
ಸುಕುಮಾರ್ ಹೆಗ್ಡೆ ನೋಡಲ್ ಅದಿಕಾರಿಯಾಗಿ ಭಾಗವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ, ತಾಲೂಕು ಪಂಚಾಯಿತಿ ಸದಸ್ಯೆ ಶುಭಲತಾ ಶೆಟ್ಟಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Kinnigoli-0301201701

Comments

comments

Comments are closed.

Read previous post:
ಉಮೇಶ್ ಶೆಟ್ಟಿ ಕ್ರೈಮ್ ಫಾಲೋ ಅಪ್

ಕಿನ್ನಿಗೋಳಿ: ಡಿಸೆಂಬರ್ 28 ರಂದು ನಾಪತ್ತೆಯಾಗಿ ಜನವರಿ 1 ರಂದು ಶವವಾಗಿ ಪತ್ತೆಯಾದ ಉಮೇಶ ಶೆಟ್ಟಿ ಕೊಲೆಯಾಗಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಈ ಬಗ್ಗೆ ಪೋಲಿಸರು ತೀವ್ರವಾಗಿ ವಿವಿಧ...

Close