ಉಚಿತ ಕಣ್ಣಿನ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸೆ

ಮೂಲ್ಕಿ: ಗ್ರಾಮೀಣ ಬಡವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಮೂಲ್ಕಿ ಲಯನ್ಸ್ ಕ್ಲಬ್ ಸದಸ್ಯರ ಹಾಗೂ ಸಹೃದಯರ ಸೂಕ್ತ ದೇಣಿಗೆಗಳಿಂದ ಸಾಧ್ಯವಾಗಿದೆ ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ಸುಜಿತ್ ಸಾಲ್ಯಾನ್ ಹೇಳಿದರು.
ಮೂಲ್ಕಿ ಲಯನ್ಸ್ ಕ್ಲಬ್,ಲಯನೆಸ್ ಕ್ಲಬ್, ಲಿಯೋಕ್ಲಬ್, ಮಯೂರಿ ಫೌಂಡೆಶನ್ ಮೂಲ್ಕಿ, ಹಾಗೂ ಮಾನಾಡಿ ಮಹಿಳಾ ಮಂಡಲ ಸಹಭಾಗಿತ್ವದಲ್ಲಿ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಸಹಯೋಗದೊಂದಿಗೆ ಮಾನಂಪಾಡಿ ಜಿಪಂ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಚಿತ ಕಣ್ಣಿನ ಪರೀಕ್ಷೆ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶವಾದ ಮಾನಂಪಾಡಿಯ ಜನರಿಗಾಗಿ ನಡೆಸಿದ ಶಿಭಿರದಲ್ಲಿ 11ಜನರಿಗೆ ಶಸ್ತ್ರ ಚಿಕಿತ್ಸೆ ಮತ್ತು 74 ಜನರಿಗೆ ಕನ್ನಡಕ ನೀಡಲಾಗುತ್ತಿದೆ. ಲಯನ್ಸ್ ಕ್ಲಬ್ ವೀಶೇಷವಾಗಿ ಆರೋಗ್ಯ ಶಿಭಿರಗಳು ಹಾಗೂ ಯುವಜನರಿಗೆ ಉದ್ಯಮಶೀತೆ ಮತ್ತು ನಾಯಕತ್ವ ತರಬೇತಿಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಮೌಲ್ಯಾಧಾರಿತ ಮಾನವ ಸಂಪನ್ಮೂಲ ಬೆಳವಣಿಗೆಗಾಗಿ ಶ್ರಮಿಸುತ್ತದೆ ಎಂದರು.
ಸಮಾರಂಭದ ಅತಿಥಿಗಳಾಗಿ ಲಯನೆಸ್ ಅಧ್ಯಕ್ಷೆ ಶೋಭ ಸುಜಿತ್,ಲಿಯೋ ಅಧ್ಯಕ್ಷೆ ಭೂಮಿಕಾ ಸಾಲ್ಯಾನ್, ಕಾರ್ಯದರ್ಶಿ ನವೀನ್ ಶೆಟ್ಟಿ ,ಕೋಶಾಧಿಕಾರಿ ರವೀಂದ್ರ ಶೆಟ್ಟಿ,ಮಾನಾಡಿ ಮಹಿಳಾ ಮಂಡಲದ ಕೋಶಾಧಿಕಾರಿ ಶಕುಂತಲಾ ಕೋಟ್ಯಾನ್, ಲಯನ್ಸ್ ಪೂರ್ವಾಧ್ಯಕ್ಷರಾದ ಭಾಸ್ಕರ ಪುತ್ರನ್, ಕಿಶೋರ್ ಶೆಟ್ಟಿ, ಉದಯ ಅಮೀನ್ ಮಟ್ಟು, ಸದಸ್ಯ ಸದಾಶಿವ ಹೊಸದುರ್ಗ ಉಪಸ್ಥಿತರಿದ್ದರು.
ಸುಜಿತ್ ಸಾಲ್ಯಾನ್ ಸ್ವಾಗತಿಸಿದರು. ಉದಯ ಅಮೀನ್ ನಿರೂಪಿಸಿದರು. ನವೀನ್ ಶೆಟ್ಟಿ ವಂದಿಸಿದರು.

Kinnigoli-0601201701

Comments

comments

Comments are closed.

Read previous post:
Kinnigoli-0401201704
ಶಾಸಕ ಅಭಯಚಂದ್ರ ಜೈನ್ ಭೇಟಿ

ಕಿನ್ನಿಗೋಳಿ: ಡಿಸೆಂಬರ್ 28 ರಂದು ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಿಂದ ನಾಪತ್ತೆಯಾಗಿ ಬಳಿಕ ಶವವಾಗಿ ಪತ್ತೆಯಾದ ಉಮೇಶ್ ಶೆಟ್ಟಿ ಮನೆಗೆ ಶಾಸಕ ಅಭಯಚಂದ್ರ ಜೈನ್ ಭೇಟಿ ನೀಡಿದರು, ಉಮೇಶ್ ತಂದೆ ರಾಮಕೃಷ್ಣ...

Close