ಕ. ಸಾ. ಪ. ಮೂಲ್ಕಿ ಹೋಬಳಿ ಸಮ್ಮೇಳನ ಉದ್ಘಾಟನೆ

ಮೂಲ್ಕಿ: ಸಾಹಿತ್ಯಕ್ಕೆ ಹಲವಾರು ವೇದಿಕೆಗಳಿದೆ, ಪ್ರೋತ್ಸಾಹವು ಯಥೇಚ್ಚವಾಗಿ ಸಿಕ್ಕರೂ ಸಾಹಿತ್ಯ ಆಸಕ್ತಿ ಕುಂಠಿತಗೊಳ್ಳುತ್ತಿರುವುದು ಖೇದನೀಯ, ಕಥೆ-ಕವನ ಎಂದಿಗೂ ಹಳತಾಗುವುದಿಲ್ಲ ಆದರೆ, ಯುವ ಜನತೆಯು ಸಾಹಿತ್ಯವನ್ನು ಬೆಳೆಸುವಲ್ಲಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿರಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಅವರು ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಮೂಲ್ಕಿ ಹೋಬಳಿ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸಮ್ಮೇಳನದ ಅಧ್ಯಕ್ಷೆ ಡಾ.ಶೈಲಜಾ ಏತಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಮಾತನಾಡಿ, ಯುವ ಮನಸ್ಸುಗಳಲ್ಲಿ ಕನ್ನಡಾಭಿಮಾನ ಸಾಹಿತ್ಯದ ಮೂಲಕ ಅರಳಿಸಬೇಕಾದ ಅವಶ್ಯಕತೆ ಇದೆ ಎಂದರು.
ವಿಜಯಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಶಮಿನಾ ಆಳ್ವಾ, ಪ್ರಾಂಶುಪಾಲ ಪ್ರೋ.ನಾರಾಯಣ ಪೂಜಾರಿ, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಮೂಲ್ಕಿ ಚರ್ಚ್‌ನ ಧರ್ಮಗುರು ಫ್ರಾನ್ಸಿಸ್ ಝೇವಿಯರ್ ಗೋಮ್ಸ್, ಕಾರ್ನಾಡು ಮಸೀದಿಯ ಎಂ.ಎಸ್.ಹೈದರಾಲಿ, ಮೂಲ್ಕಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ದೇವಪ್ರಸಾದ ಪುನರೂರು, ಹೋಬಳಿಯ ಮಾಜಿ ಅಧ್ಯಕ್ಷ ಎಂ.ಸರ್ವೊತ್ತಮ ಅಂಚನ್, ಬಪ್ಪನಾಡು ಗಣೋಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ಬೋಳ ಸುರೇಂದ್ರ ಕಾಮತ್, ಮಂಗಳೂರು ತಾಲ್ಲೂಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಮೂಲ್ಕಿ ಪ್ರೆಸ್ ಕ್ಲಬ್‌ನ ಅಧ್ಯಕ್ಷ ನರೇಂದ್ರ ಕೆರೆಕಾಡು ಇದ್ದರು.
ಹೋಬಳಿ ಸಂಚಾಲಕ ಎನ್.ಪಿ.ಶೆಟ್ಟಿ ಸ್ವಾಗತಿಸಿದರು, ವೈ.ಎನ್.ಸಾಲಿಯಾನ್ ವಂದಿಸಿದರು, ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದರು.

ಸ್ಮಶಾನದಲ್ಲಿಯೂ ಮಾಡಲು ಸಿದ್ಧ : ಪುನರೂರು
ಸಾಹಿತ್ಯ ಜಾತಿ-ಧರ್ಮ-ಮತಭೇದ ಇಲ್ಲದೆ ನಡೆಯುವಂತದ್ದು, ಸಮ್ಮೇಳವನ್ನು ನಡೆಸಲು ದೇವಸ್ಥಾನಗಳನ್ನೇ ಬಳಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವವರಿಂದ ಕೇವಲ ಸಲಹೆ ಬೇಕಾಗಿಲ್ಲ ಬದಲಾಗಿ ಸಮ್ಮೇಳನ ನಡೆಸಲು ಆರ್ಥಿಕ ಸಂಪನ್ಮೂಲವನ್ನು ದೊರಕಿಸಿಕೊಡಲಿ ಆಗ ಬೇಕಾದರೆ ಸ್ಮಶಾನದಲ್ಲೂ ಸಮ್ಮೇಳನ ಮಾಡಲು ಸಿದ್ದ ಎಂದು ಹರಿಕೃಷ್ಣ ಪುನರೂರು ತಮ್ಮ ಮಾತಿನಧಾಟಿಯಲ್ಲಿ ಉಲ್ಲೇಖಿಸಿದರು.

ಕನ್ನಡದ ಮೂಲಕ ಬಹುಭಾಷೆ : ಶೈಲಜಾ
ಕನ್ನಡದ ಜಗತ್ತಿನಲ್ಲಿ ತುಳು-ಬ್ಯಾರಿ-ಕೊಂಕಣಿ ಭಾಷೆಗಳು ಕರಾವಳಿಯಲ್ಲಿ ಬೆಳೆದಂತೆ ಇದು ಇನ್ನಿತರ ಬಹುಭಾಷೆಗೆ ಅನ್ವರ್ಥನಾಮವಾಗಿದೆ. ಭಾಷೆ ಮನುಷ್ಯನನ್ನು ಬೆಳೆಸಿದೆ, ಸಾಹಿತ್ಯ ಪರಂಪರೆಯನ್ನು ಅರಳಿಸಿರುವುದರಿಂದ ಕನ್ನಡಾಭಿಮಾನದ ಮೊಳಕೆ ಒಡೆಯಲು ಸಾಧ್ಯ, ಜ್ಞಾನ-ಸಂಸ್ಕೃತಿಯನ್ನು ಪ್ರಸಾರಿಸುವ ಮಾಧ್ಯಮದ ಮೂಲಕ ಇಂದಿನ ಕಾಲಘಟ್ಟದಲ್ಲಿಯೂ ಕನ್ನಡ ಉಳಿಯಬಹುದೇ ಎನ್ನುವ ಬದಲು ಕನ್ನಡವನ್ನು ಗಟ್ಟಿಯಾಗಿ ಕಟ್ಟೋಣ ಎನ್ನುವ ಮಾತುಗಳು ಸಮ್ಮೇಳನದ ಮೂಲಕ ಇನ್ನಷ್ಟು ಪಸರಿಸಬೇಕು ಎಂದು ಸಮ್ಮೇಳನದ ಅಧ್ಯಕ್ಷೆ ಡಾ.ಶೈಲಜಾ ಏತಡ್ಕ ಹೇಳಿದರು.

Kinnigoli-0601201703 Kinnigoli-0601201704

Comments

comments

Comments are closed.

Read previous post:
Kinnigoli-0601201702
ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ

ಮೂಲ್ಕಿ: ದೀನವರ್ಗದ ಕಷ್ಟಗಳನ್ನು ಹೋಗಲಾಡಿಸಲು ದೇವರಲ್ಲಿ ವಿಶ್ವಾಸ ಮತ್ತು ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಏಸುಕ್ರಿಸ್ತರು ತಿಳಿಸಿದ ತತ್ವ ಮತ್ತು ಆದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಮೂಲ್ಕಿ ಸಿ.ಎಸ್.ಐ ಯುನಿಟಿ...

Close