ಮೂಲ್ಕಿ ಹೋಬಳಿ ಸಾಹಿತ್ಯ ಸಮ್ಮೇಳನ ಗೋಷ್ಠಿ

 

ಮೂಲ್ಕಿ:  ಮೂಲ್ಕಿ ಪರಿಸರದ ಸ್ವಾತಂತ್ರ್ಯ ಹೋರಾಟಗಾರರು ಎಂಬ ವಿಷಯದಲ್ಲಿ ಮಾತನಾಡಿ, ಕಾರ್ನಾಡು ಸದಾಶಿವ ರಾವ್‌ರವರಂತಹ ಹೋರಾಟಗಾರರು ಸ್ವತಹ ಮಹಾತ್ಮ ಗಾಂಧೀಜಿಯವರಿಗೆ ಪ್ರೇರಣೆ ಆಗಿದ್ದವರು, ಅವರನ್ನು ಅನುಸರಿಸಿದ ಅನೇಕ ಸ್ಥಳೀಯ ಹೋರಾಟಗಾರರು ಸದಾಶಿವರಾವ್‌ರನ್ನೇ ಆದರ್ಶರನ್ನಾಗಿಸಿದ್ದರಿಂದ ಇಂದಿಗೂ ಜಿಲ್ಲೆಯಲ್ಲಿ ಅವರ ಹೆಸರು ರಾರಾಜಿಸುತ್ತಿದೆ. ಅವರ ತ್ಯಾಗ, ಆದರ್ಶ, ದೇಶ ಪ್ರೇಮವನ್ನು ಸ್ವತಹ ಗಾಂಧೀಜಿ ಕೊಂಡಾಡಿದ್ದರು. ಜಿಲ್ಲೆಯ ಸಹಿತ ಬೆಂಗಳೂರಿನಲ್ಲೂ ಅವರ ಹೆಸರಿನ ಊರನ್ನು ಉಲ್ಲೇಖಿಸುತ್ತಿರುವುದು ಇದಕ್ಕೆ ಸಾಕ್ಷಿ  ಎಂದು ಕಟೀಲು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೋ.ಜಯರಾಂ ಪೂಂಜಾ ಹೇಳಿದರು.

ಮೂಲ್ಕಿ ವಿಜಯಾ ಕಾಲೇಜಿನಲ್ಲಿ ನಡೆದ ಹೋಬಳಿ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಯುವ ಸಾಹಿತಿಗಳು ಮತ್ತು ಸಾಧ್ಯತೆಗಳು ಎಂಬ ಗೋಷ್ಠಿಯಲ್ಲಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಸುಧಾರಾಣಿ ಮಾತನಾಡಿ ಆಧುನಿಕತೆಯ ತಂತ್ರಜ್ಞಾನ ಎಂದು ವಾಟ್ಸ್‌ಆಪ್ ಮತ್ತು ಫೇಸ್‌ಬುಕ್‌ಗಳ ಬರವಣಿಗೆ ನೈಜ ಸಾಹಿತ್ಯವೇ, ಕೇವಲ ಶಿಕ್ಷಕರು ಮಾತ್ರ ಸಾಹಿತ್ಯದ ಬರವಣಿಗೆಯ ಕೃಷಿ ಮಾಡುವವರಲ್ಲ, ಬದಲಾಗಿ ಮಾಹಿತಿ ತಂತ್ರಜ್ಞಾನ ವೃತ್ತಿಯಲ್ಲಿರುವವರು ಸಹ ಇಂದು ಬರಹಗಾರರಾಗಿ ನಮ್ಮೆದುರಲ್ಲಿ ಇದ್ದಾರೆ, ಯುವ ಮನಸ್ಸುಗಳಿಗೆ ವಿಷಯ ಸಂಗ್ರಹ ನಮ್ಮ ಸುತ್ತಮುತ್ತಲಿದೆ ತಲ್ಲಣಗೊಳಿಸುವ ವಿವಿಧ ಆಯಾಮಗಳಲ್ಲಿ ಸಾಹಿತ್ಯವನ್ನು ಅರಳಿಸಬಹುದು ಎಂದರು.

ಮೂಲ್ಕಿ ಪರಿಸರದ ಸಾಹಿತ್ಯ ನಿರ್ಮಾತೃಗಳು ಎಂಬ ವಿಷಯವನ್ನು ಮಂಡಿಸಿದ ವಿಜಯಾ ಕಾಲೇಜಿನ ಉಪನ್ಯಾಸಕಿ ದಮಯಂತಿ, ಮೂಲ್ಕಿ ಹೋಬಳಿಯಲ್ಲಿ ಕೇವಲ ಸಾಹಿತಿಗಳು ಸಾಹಿತ್ಯವನ್ನು ಪಸರಿಸಿಲ್ಲ ಬದಲಾಗಿ ಸಾಹಿತ್ಯ ಸಂಘಟನೆ, ಯಕ್ಷಗಾನ, ನಾಟಕ ಸಾಂಸ್ಕೃತಿಕ ಕಲೆಗಳಿಂದಲೂ ಸಾಹಿತ್ಯದ ಗೌರವವನ್ನು ಹೆಚ್ಚಿಸಿದ್ದಾರೆ, ಪ್ರಕಾಶನ ಸಂಸ್ಥೆಗಳು ಸಹ ಇಲ್ಲಿ ಸಾಹಿತ್ಯಕ್ಕೆ ಪೂರಕವಾಗಿ ಬೆಳೆದ ನಿಂತಿದೆ. ಉಳಿದ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಸಾಹಿತ್ಯ ಚಟುವಟಿಕೆಗಳು ಸಹ ಇಲ್ಲಿಯೇ ನಡೆಯುತ್ತಿರುವುದು ಉಲ್ಲೇಖನೀಯ ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಡಾ.ಕೆ.ಜಗದೀಶ್ ಮಾತನಾಡಿ, ಬಹುಭಾಷಾ ಪ್ರಾಂತ್ಯದಿಂದ ಕನ್ನಡ ಸಾಹಿತ್ಯಕ್ಕೆ ಧಕ್ಕೆ ಆಗಿದೆ ಎಂಬುದಕ್ಕೆ ಅಹಲವು ದೃಷ್ಟಾಂತಗಳೇ ಕಾರಣ, ಕನ್ನಡ ಎನ್ನುವುದು ಸರ್ಕಾರಿ, ಕವಿಗಳು, ಬರಹಗಾರರ ಸಂಪತ್ತಲ್ಲ, ಯಕ್ಷಗಾನ ಕಲೆಯಲ್ಲಿನ ಸ್ಪಷ್ಪ ಕನ್ನಡವು ಇಂದಿಗೂ ಉಳಿದಿದೆ ಎಂದರು.
ಮಾಹೆಯ ನಿವೃತ್ತ ಕುಲಪತಿ ಪ್ರೋ.ಜಿ.ಆರ್.ರೈ ಇದ್ದರು. ರವಿಚಂದ್ರ ಸ್ವಾಗತಿಸಿದರು, ಶರತ್ ಶೆಟ್ಟಿ ನಿರೂಪಿಸಿದರು.

Mulki-05011701

Comments

comments

Comments are closed.

Read previous post:
Kinnigoli-0601201703
ಕ. ಸಾ. ಪ. ಮೂಲ್ಕಿ ಹೋಬಳಿ ಸಮ್ಮೇಳನ ಉದ್ಘಾಟನೆ

ಮೂಲ್ಕಿ: ಸಾಹಿತ್ಯಕ್ಕೆ ಹಲವಾರು ವೇದಿಕೆಗಳಿದೆ, ಪ್ರೋತ್ಸಾಹವು ಯಥೇಚ್ಚವಾಗಿ ಸಿಕ್ಕರೂ ಸಾಹಿತ್ಯ ಆಸಕ್ತಿ ಕುಂಠಿತಗೊಳ್ಳುತ್ತಿರುವುದು ಖೇದನೀಯ, ಕಥೆ-ಕವನ ಎಂದಿಗೂ ಹಳತಾಗುವುದಿಲ್ಲ ಆದರೆ, ಯುವ ಜನತೆಯು ಸಾಹಿತ್ಯವನ್ನು ಬೆಳೆಸುವಲ್ಲಿ ಅವಕಾಶವನ್ನು ಸದುಪಯೋಗ...

Close